Rakshit Shetty Birthday: ಸ್ಯಾಂಡಲ್‌ವುಡ್‌ ಸಿಂಪಲ್ ಸ್ಟಾರ್​ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು, ಆಪ್ತರು, ಸ್ನೇಹಿತರು ರಕ್ಷಿತ್‌ ಶೆಟ್ಟಿ ಜನ್ಮದಿನದಂದು ಶುಭಕೋರುತ್ತಿದ್ದಾರೆ. ಈ ಸಂಭ್ರಮದ ಮಧ್ಯೆ ರಕ್ಷಿತ್‌ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಬಿಗ್‌ ಸರ್‌ಪ್ರೈಸ್‌ ನೀಡಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂತಸವನ್ನು ತಂದಿದೆ. ತಮ್ಮ ನೆಚ್ಚಿನ ನಟನ ಕೊಟ್ಟ ಸುದ್ದಿ ಕೇಳಿ ಫ್ಯಾನ್ಸ್‌ ಕೂಡ ಖುಷ್‌ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ರಶ್ಮಿಕಾ ಜೊತೆಗಿನ ಎಂಗೇಜ್ಮೆಂಟ್‌ ಮುರಿದು ಬಿದ್ದ ಬಳಿಕ ರಕ್ಷಿತ್‌ ಶೆಟ್ಟಿ ಡಿಸ್ಟರ್ಬ್‌ ಆಗಿದ್ರು. ಇದು ಅವರ ಅಭಿಮಾನಿಗಳಲ್ಲಿ ಸಹ ಬೇಸರ ಮೂಡಿಸಿತ್ತು. ಆ ಬಳಿಕ ರಕ್ಷಿತ್‌ ಶೆಟ್ಟಿ ಸಿನಿ ಕರಿಯರ್‌ನಲ್ಲಿ ಫುಲ್‌ ಬ್ಯುಸಿಯಾದರು. ಸೂಪರ್‌ ಹಿಟ್‌ ಸಿನಿಮಾಗಳನ್ನು ಮಾಡಿ ಜನರನ್ನು ರಂಜಿಸಿದರು. ಅವರ ಅಭಿನಯಕ್ಕೆ ಜನ ಮೂಕವಿಸ್ಮಿತರಾದರು. ಚಾರ್ಲಿ 777 ಸಿನಿಮಾ ಬಳಿಕ ರಕ್ಷಿತ್‌ ಶೆಟ್ಟಿ ಖ್ಯಾತಿ ಭಾರತದಾದ್ಯಂತ ಹಬ್ಬಿತು. ಈಗ ಅವರ ಹುಟ್ಟುಹಬ್ಬದ ದಿನದಂದು ಮತ್ತೊಂದು ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ. ಅದು ಅವರ ಮದುವೆ ವಿಚಾರವಲ್ಲ. ರಕ್ಷಿತ್‌ ಮುಂದಿನ ಸಿನಿಮಾ ಬಗ್ಗೆ ಹೊಸ ಸುದ್ದಿ ಸಿಕ್ಕಿದೆ. 


ಇದನ್ನೂ ಓದಿ : ಬಾತ್‌ರೂಮ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ ಸಮಂತಾ! ಇವರ ಹಿಂದಿರುವ ಈ ವ್ಯಕ್ತಿ ಯಾರು?


ರಕ್ಷಿತ್‌ ಶೆಟ್ಟಿ ತಮ್ಮ ಬರ್ತ್‌ ಡೇಯಂದು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಗ್ಗೆ ಬಿಗ್​ ಅಪ್ಡೇಟ್ ನೀಡಿದ್ದಾರೆ.  ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ. ಇದು 2023 ರ ಬಹು ನಿರೀಕ್ಷಿತ ಕನ್ನಡ ಚಲನಚಿತ್ರಗಳಲ್ಲಿ ಒಂದಾಗಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ಎಂ ರಾವ್ ನಿರ್ದೇಶನದಲ್ಲಿ ಸಿನಿಮಾ ರೆಡಿಯಾಗುತ್ತಿದೆ. ನಾಯಕ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ಇದು ಎರಡನೇ ಸಹಯೋಗವಾಗಿದೆ. ಈ ಸಿನಿಮಾ 2 ಪಾರ್ಟ್‌ಗಳಲ್ಲಿ ರಿಲೀಸ್‌ ಆಗಲಿದೆ ಎಂಬ ಬಿಗ್ ಅಪ್‌ಡೇಟ್‌ ಅನ್ನು ರಕ್ಷಿತ್ ಶೆಟ್ಟಿ ಇಂದು ಅನೌನ್ಸ್ ಮಾಡಿದ್ದಾರೆ. 


 



 


ರಕ್ಷಿತ್ ಒಂದು ಭಾಗದಲ್ಲಿ ನಾರ್ಮಲ್‌ ಆಗಿಯೇ ಕಾಣಿಸಿಕೊಂಡರೆ, ಇನ್ನೊಂದು ಭಾಗದಲ್ಲಿ ಅವರ ಮುಖದ ಮೇಲೆ ಎದ್ದುಕಾಣುವ ಗಾಯದ ಗುರುತು,  ಚಿಕ್ಕದಾಗಿ ಕತ್ತರಿಸಿದ ಕೂದಲು ಹೀಗೆ ವಿಚಿತ್ರ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. 


ಇದನ್ನೂ ಓದಿ : ಅಭಿಷೇಕ್ ಅಂಬರೀಶ್‌ ಮದುವೆಯಲ್ಲಿ ಕಿಚ್ಚ ಸುದೀಪ್ ಕೊಟ್ರು ಈ ದುಬಾರಿ ಗಿಫ್ಟ್‌


ಅಭಿಮಾನಿಗಳಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಜನ್ಮದಿನದಂದು ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್​ ಕೊಟ್ಟಿದ್ದು, ಜೂನ್ 15 ರಂದು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ. 


ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಕ್ಷಿತ್,  "ನಿಮ್ಮ ಮನು ಇಂದು ಸ್ಪೆಷಲ್ ಅನೌನ್ಸ್​ಮೆಂಟ್ ಮಾಡಲು ಬಂದಿದ್ದೇನೆ . ಸಮಯ, ಪ್ರೀತಿ ಮತ್ತು ಕನಸುಗಳನ್ನು ಸ್ಪಷ್ಟವಾಗಿ ಕೆತ್ತಿದ ಸಪ್ತ ಸಾಗರದಾಚೆ ಎಲ್ಲೋ ಈಗ ಎರಡು ಭಾಗಗಳಲ್ಲಿ ನಿಮ್ಮ ಮುಂದೆ ಬರಲಿದೆ" ಎಂದು ಬರೆದಿದ್ದಾರೆ. "ಸೈಡ್ ಎ ಹಾಗೂ ಸೈಡ್ ಬಿ  ಚಿತ್ರೀಕರಣ ಮುಗಿದಿದೆ. ಈ ಸಿನಿಮಾದ ಎರಡೂ ಭಾಗಗಳ ಬಿಡುಗಡೆ ದಿನಾಂಕವನ್ನು ಜೂನ್​ 15 ರಂದು ತಿಳಿಸುತ್ತೇವೆ. ನೀವು ನಮ್ಮನ್ನು ಯಾವಾಗಲೂ ಪ್ರೀತಿಯಿಂದ ಸ್ವೀಕರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ"ಎಂದು ಪೋಸ್ಟ್‌ ಮಾಡಿದ್ದಾರೆ. ಮನು-ಸುರಭಿ ಪ್ರೇಮ ಕಥೆಯನ್ನು ದೊಡ್ಡ ಪರದೆಯ ಮೇಲೆ ನೋಡಲು ಸಿನಿಪ್ರಿಯರು ಉತ್ಸುಕರಾಗಿದ್ದಾರೆ.


ಇದನ್ನೂ ಓದಿ: ಕನ್ನಡ ಸಿನಿಮಾ ಪ್ರೇಕ್ಷಕರ ಭರವಸೆಯ ನಾಯಕ ನಟರಿವರು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.