Kiccha Sudeep: ಅಭಿಷೇಕ್ ಅಂಬರೀಶ್‌ ಮದುವೆಯಲ್ಲಿ ಕಿಚ್ಚ ಸುದೀಪ್ ಕೊಟ್ರು ಈ ದುಬಾರಿ ಗಿಫ್ಟ್‌

Kichcha Sudeep gift for Abhishek Ambarish wedding: ಅರಮನೆ ಮೈದಾನದ ಚಾಮರವಜ್ರದಲ್ಲಿ ನಡೆದ ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಮದುವೆಗೆ ಅನೇಕ ಗಣ್ಯರು ಸಾಕ್ಷಿಯಾದರು. ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಜೊತೆ ಕಿಚ್ಚ ಸುದೀಪ್ ಕೂಡ ಅಭಿ - ಅವಿವಾ ಮದುವೆಗೆ ಆಗಮಿಸಿದ್ದರು. ಈ ವೇಳೆ ದುಬಾರಿ ಗಿಫ್ಟ್‌ ನೀಡಿದ್ದು, ಎಲ್ಲರ ಗಮನ ಸೆಳೆದಿದೆ.  

Written by - Chetana Devarmani | Last Updated : Jun 6, 2023, 11:03 AM IST
  • ಅಭಿ - ಅವಿವಾ ಮದುವೆ ಸಂಭ್ರಮ
  • ಕುಟುಂಬದೊಂದಿಗೆ ಆಗಮಿಸಿದ ಕಿಚ್ಚ ಸುದೀಪ್
  • ಕಿಚ್ಚ ಸುದೀಪ್ ಕೊಟ್ರು ಈ ದುಬಾರಿ ಗಿಫ್ಟ್‌
Kiccha Sudeep: ಅಭಿಷೇಕ್ ಅಂಬರೀಶ್‌ ಮದುವೆಯಲ್ಲಿ ಕಿಚ್ಚ ಸುದೀಪ್ ಕೊಟ್ರು ಈ ದುಬಾರಿ ಗಿಫ್ಟ್‌  title=
Kichcha Sudeep

Abhishek Ambarish - Aviva Bidapa wedding: ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಾವು ಪ್ರೀತಿಸಿದ ಹುಡುಗಿ ಅವಿವಾ ಜೊತೆ ಸಪ್ತಪದಿ ತುಳಿದಿದ್ದಾರೆ. ಜೂನ್ 5 ರಂದು 9:30 ರಿಂದ 10:30 ವರೆಗಿನ ಮಹೂರ್ತದಲ್ಲಿ ಅಭಿಷೇಕ್ ಮತ್ತು ಅವಿವಾ ವಿವಾಹ ನಡೆಯಿತು. ಈ ಅದ್ಧೂರಿ ಮದುವೆಗೆ ಚಂದನವನದ ಅನೇಕ ನಟ - ನಟಿಯರು ಆಗಮಿಸಿ ನವ ದಂಪತಿಗೆ ಶುಭಕೋರಿದರು. 

ಅರಮನೆ ಮೈದಾನದ ಚಾಮರವಜ್ರದಲ್ಲಿ ಸುಮಲತಾ ತಮ್ಮ ಪುತ್ರ ಅಭಿಷೇಕ್ ಅಂಬರೀಷ್ ವಿವಾಹವನ್ನು ಏರ್ಪಡಿಸಿದ್ದರು. ಬಹುಕಾಲದ ಗೆಳತಿ ಅವಿವಾ ಜೊತೆ ಗೌಡರ ಸಾಂಪ್ರದಾಯದಂತೆ ಅಭಿಷೇಕ್‌ ಮದುವೆಯಾದರು. ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಟಾಲಿವುಡ್, ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಿಂದಲೂ ಗಣ್ಯರು ಆಗಮಿಸಿದ್ದರು. 

ಇದನ್ನೂ ಓದಿ: ಭಾವಿ ಪತ್ನಿಗೆ ರಕುತದಿ ಬರೆದ ʼಒಲವಿನ ಉಡುಗೊರೆʼ ಕೊಟ್ಟ ಜೂ. ಅಂಬಿ..!

ಸಡಗರ ಸಂಭ್ರಮದಿಂದ ನಡೆದ ಅಂಬಿ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ ಮದುವೆಗೆ ಚಿತ್ರರಂಗ, ರಾಜಕೀಯರಂಗದ ಹಲವರು ಸಾಕ್ಷಿಯಾದರು. ರಜನಿಕಾಂತ್, ಮೋಹನ್ ಬಾಬು, ಸುಹಾಸಿನಿ, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. 

ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಜೊತೆ ಕಿಚ್ಚ ಸುದೀಪ್ ಅಭಿ - ಅವಿವಾ ಮದುವೆಗೆ ಆಗಮಿಸಿದ್ದರು. ಸಿಂಪಲ್‌ ಆದ್ರೂ ಕಣ್ಮನ ಸೆಳೆಯುವ ಲುಕ್‌ನಲ್ಲಿ ಎಂಟ್ರಿ ಕೊಟ್ಟ ಸುದೀಪ್‌ ಎಲ್ಲರ ಗಮನಸೆಳೆದರು. ಮದುವೆ ಮನೆಯಲ್ಲಿ ಫ್ಯಾನ್ಸ್‌ ಜೊತೆ ಫೋಟೋಗೆ ಪೋಸ್‌ ಕೂಡ ನೀಡಿದ್ರು. 

ಇದನ್ನೂ ಓದಿ:  ‘ಭೈರತಿ ರಣಗಲ್​’ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಯಾರು ಗೊತ್ತಾ?

ಇದೀಗ ಪ್ರಮುಖ ವಿಚಾರ ಅಂದ್ರೆ ಅಭಿಷೇಕ್‌ ಮದುವೆಯಲ್ಲಿ ಕಿಚ್ಚ ಸುದೀಪ್‌ ದುಬಾರಿ ಉಡುಗೊರೆ ನೀಡಿದ್ದಾರೆ. ಅಭಿ ಕೊರಳಿಗೆ ಚಿನ್ನದ ಸರ ಹಾಕಿ, ಪ್ರೀತಿಯಿಂದ ಅಪ್ಪುಗೆ ನೀಡಿ ಸುದೀಪ್‌ ಶುಭ ಹಾರೈಸಿದ್ದಾರೆ. ಈ ವಿಡಿಯೋ ಎಲ್ಲೆಲ್ಲೂ ಸಖತ್‌ ವೈರಲ್ ಆಗುತ್ತಿದೆ. ಅಲ್ಲದೇ, ಇಲ್ಲಿ ಮತ್ತೊಂದು ವಿಚಾರ ಎಲ್ಲರ ಗಮನಸೆಳೆದಿದೆ. ಸುದೀಪ್‌ ತಾವೇ ಮೊಬೈಲ್ ತೆಗೆದುಕೊಂಡು ನವ ದಂಪತಿಯ ಜೊತೆ ಕೆಲವರ ಫೋಟೊ ಕೂಡ ತೆಗೆದಿದ್ದಾರೆ. ಒಟ್ಟಾರೆ ಅದ್ಧೂರಿ ಮದುವೆಯಲ್ಲಿ ಕಿಚ್ಚನ ಕೆಲವು ವಿಡಿಯೋಗಳು ನೆಟ್ಟಿಗರ ಮನಗೆಲ್ಲುತ್ತಿವೆ. 

Kichcha Sudeep gift for Abhishek Ambarish wedding

ಇದನ್ನೂ ಓದಿ: ಸಿನಿಮಾ ಸೆಟ್‌ನಲ್ಲಿ ಪ್ರಶಾಂತ್​ ನೀಲ್​ ಹೀಗಿರ್ತಾರೆ ನೋಡಿ.. ‘ಸಲಾರ್​’ ಚಿತ್ರತಂಡದಿಂದ ಸ್ಪೆಷಲ್‌ ವಿಡಿಯೋ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News