ಬೆಂಗಳೂರು: ಬೆಳಗೆದ್ದು ಯಾರ ಮುಖವ ನಾನು ನೋಡಿದೆ, ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ. ನಿನ್ನ ಕಂಡ ಕನಸು ಬ್ಲಾಕ್ ಅಂಡ್ ವೈಟು ಇಂದು ಬಣ್ಣ ಆಗಿದೆ... ನಿನ್ನ ಮೇಲೆ ಕವನ ಬರೆಯೊ ಗಮನ ಈಗ ತಾನೇ ಮೂಡಿದೆ... ಎನ್ನುತ್ತಾ ಚಂದನವನದಲ್ಲಿ ಎಲ್ಲರ ಮೈ ಮರೆಸಿದ್ದ ನಟ ರಕ್ಷಿತ್ ಶೆಟ್ಟಿ ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಜೋಡಿಯ ನಿಶ್ಚಿತಾರ್ಥ ಇಂದಿಗೆ(ಜುಲೈ 03) ಒಂದು ವರ್ಷ ಪೂರೈಸಿದೆ. ಈ ಸಂಭ್ರಮವನ್ನು ಹೆಚ್ಸಿಹ್ಸಲು ನಟ ರಕ್ಷಿತ್ ಸಾಮಾಜಿಕ ಜಾಲತಾಣದ ಮೂಲಕ ಭಾವಿ ಪತ್ನಿಗೆ ರೋಮ್ಯಾಂಟಿಕ್ ಪತ್ರವೊಂದನ್ನು ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ತಮ್ಮ ಸಂಭ್ರಮವನ್ನು ಹಂಚಿಕೊಂಡಿರುವ ರಕ್ಷಿತ್, ನಮ್ಮ ನಿಶ್ಚಿತಾರ್ಥವಾಗಿ ಒಂದು ವರ್ಷ ಆಯ್ತಾ? ನನಗೇನೋ ನಿನ್ನೆಯಷ್ಟೇ ನಮ್ಮ ನಿಶ್ಚಿತಾರ್ಥವಾದಂತಿದೆ. ನಿನ್ನ ಸುಂದರ ಉಡುಪಿಗೆ ಸರಿಹೊಂದುವ ಟೈ ಅನ್ನು ನಾನಿನ್ನೂ ಹುಡುಕುತ್ತಿದ್ದೇನೆ. ಸದ್ಯ ನಾನು ನಮ್ಮ ನಿಶ್ಚಿತಾರ್ಥದ ಫೋಟೋ, ವಿಡಿಯೋಗಳನ್ನು ನೋಡುತ್ತಿದ್ದೇನೆ. ಈ ಒಂದು ಸಾಲಿನಲ್ಲಿ ನಿನ್ನಿಂದ ನಾನು ಸಾಕಷ್ಟು ವಿಷಯ ಕಲಿತಿದ್ದೇನೆ. ನಾನು ನಿನ್ನೊಂದಿಗೆ ಇದ್ದು ಏನೋ ಸಂಪಾದನೆ ಮಾಡಿದ್ದೇನೆ. ನೀನು ನನ್ನ ಜೀವನದಲ್ಲಿ ಪರಿಚಯವಾದ ಅತ್ಯುತ್ತಮ ವ್ಯಕ್ತಿ. ನಾನು ನಿನ್ನನ್ನು ಇನ್ನೂ ಹೆಚ್ಚು ಪ್ರೀತಿಸುತ್ತೇನೆ. ನಮ್ಮ ನಿಶ್ಚಿತಾರ್ಥದ ವಾರ್ಷಿಕೋತ್ಸವದ ಶುಭಾಶಯಗಳು ಸ್ವೀಟ್ ಹಾರ್ಟ್ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.