Achara Kirk In Bachelor Party: ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಇದೇ ಜನವರಿ 26ಕ್ಕೆ ತೆರೆಗೆ ಅಪ್ಪಳಿಸಲಿದ್ದು, ದಿಗಂತ್‌, ಯೋಗಿ ಹಾಗೂ ಅಚ್ಯುತ್‌ ಕುಮಾರ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರದ ಪ್ರಚಾರದ ಕಾರ್ಯದಲ್ಲಿ ಬ್ಯುಸಿಯಾಗಿರುವ ದಿಗಂತ್‌ ಹಾಗೂ ಯೋಗಿ, ನಿರ್ಮಾಪಕರು ಸೆಟ್‌ಗೆ ಬರ್ತಿದ್ದರಾ? ಎಂಬ ಪ್ರಶ್ನೆಗೆ ಯೋಗಿ, ಶೂಟಿಂಗ್​ ಸಮಯದಲ್ಲಿ ಸೆಟ್‌ನಲ್ಲಿ ಒಂದು ಬಾರಿ ಮಾತ್ರ ನಾನು ರಕ್ಷಿತ್ ಅನ್ನು ಭೇಟಿ ಮಾಡಿದೆ ಎಂದರು. ಅದಕ್ಕೆ ದಿಗಂತ್ ಅಂದು ಆ ನಟಿ ಸೆಟ್‌ಗೆ ಬಂದಿದ್ದರು ಅದಕ್ಕೆ ಬಂದಿದ್ದ ಎಂದರು. 


COMMERCIAL BREAK
SCROLL TO CONTINUE READING

ಅವಾಗ ಯೋಗಿ ಅಯ್ಯೋ ಹೌದು, ನೋಡಿ ಬಹುಷಃ ಆ ನಟಿ ಸೆಟ್‌ಗೆ ಬಂದಿದ್ದರು ಎಂಬ ಕಾರಣಕ್ಕೆ ರಕ್ಷಿತ್ ಶೆಟ್ಟಿ ಅಲ್ಲಿಗೆ ಬಂದಿದ್ದ ಅನ್ನಿಸುತ್ತದೆ ಎಂದರು. ಅಂದಹಾಗೆ ಆ ಹುಡುಗಿ ಯಾರು ಎಂದರೇ, ಅಚಾರಾ ಕರ್ಕ್.‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಸಿನಿಮಾ ನಟರ ಜೊತೆಗೆ ಸೋಷಿಯಲ್‌ ಮಿಡಿಯಾದಲ್ಲಿ ಜನಪ್ರಿಯವಾಗಿರುವ ಹಲವರನ್ನು ಚಿತ್ರತಂಡದೊಂದಿಗೆ ಸೇರಿಸಿಕೊಳ್ಳಲಾಗಿದ್ದು, ಸಿನಿಮಾದಲ್ಲಿ ಕನ್ನಡದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ವಿಕಾಸ್‌ ನಟಿಸಿದ್ದಾರೆ. ಹಾಗೆ ಮತ್ತೊಬ್ಬ ಅಂತರಾಷ್ಟ್ರೀಯ ಯೂಟ್ಯೂಬರ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ ಅವರೇ ಅಚಾರಾ ಕರ್ಕ್.


ಇದನ್ನೂ ಓದಿ: ಟಾಲಿವುಡ್‌ ಯಂಗ್‌ ರೆಬೆಲ್‌ ಸ್ಟಾರ್‌ನ ಮೋಸ್ಟ್​ ಕಂಫರ್ಟಬಲ್ ಡೈರೆಕ್ಟರ್​ ಯಾರು ಗೊತ್ತೇ?


ಅಂತರಾಷ್ಟ್ರೀಯ ಯೂಟ್ಯೂಬರ್ ಅಚಾರಾ ಕರ್ಕ್ ಬಾಯ್​ಫ್ರೆಂಡ್ ಜೊತೆ ಸೇರಿಕೊಂಡು ರಿಯಾಕ್ಷನ್ ವಿಡಿಯೋಗಳನ್ನು ಮಾಡುತ್ತಾ ಬಹಳ ಜನಪ್ರಿಯತೆ ಗಳಿಸಿರುವ ಇವರು ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈಕೆ ಭಾರತಕ್ಕೆ ಬಂದು ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಯೋಗಿ ತಮಾಷೆಯಾಗಿ  ಮಾತನಾಡಿದ್ದು ಇದೇ ನಟಿಯ ಬಗ್ಗೆ. ಅಚಾರಾ ಕರ್ಕ್ ಹಾಗೂ ಜಾಬಿ ಕೇ ಒಟ್ಟಿಗೆ ಭಾರತೀಯ ಸಿನಿಮಾ, ಟ್ರೇಲರ್, ಭಾರತದ ವೈರಲ್ ಕಂಟೆಂಟ್​ ಗಳ ಬಗ್ಗೆ ರಿಯಾಕ್ಷನ್ ವಿಡಿಯೋಗಳನ್ನು ಕೆಲವು ವರ್ಷಗಳಿಂದ ಮಾಡುತ್ತಿದ್ದಾರೆ. 


ಭಾರತದ ಕೆಲವು ಯೂಟ್ಯೂಬರ್​ಗಳು, ಸಿನಿಮಾ ಕರ್ಮಿಗಳ ಜೊತೆಗೆ ಬಾಂಧವ್ಯವನ್ನೂ ಹೊಂದಿದ್ದು, ಭಾರತದ ಕೆಲವು ಚಿತ್ರಗಳ ಪ್ರೀಮಿಯರ್ ಶೋಗೂ ಅವರಿಗೆ ಆಹ್ವಾನ ಹೋಗುತ್ತದೆ. ಅವರೂ ಸಹ ಆಸಕ್ತಿಯಿಂದ ಭಾಗವಹಿಸುತ್ತಿದ್ದು, ಈ ಇಬ್ಬರಿಗೂ ಭಾರತದ ಕಂಟೆಂಟ್ ಬಗ್ಗೆ ಸಿನಿಮಾ ರಂಗಗಳ ಬಗ್ಗೆ ಅತೀವ ಆಸಕ್ತಿ ಹಾಗೂ ಗೌರವಗಳಿವೆ. ಇದೇ ಕಾರಣಕ್ಕೆ ‘ಬ್ಯಾಚುಲರ್ ಪಾರ್ಟಿ’ ಚಿತ್ರದ ಪಾತ್ರವೊಂದಕ್ಕೆ ಅಚಾರ ಕರ್ಕ್ ಅನ್ನು ಪರಮವಃ ಸ್ಟೂಡಿಯೋ ಆಯ್ಕೆ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.