ಟಾಲಿವುಡ್‌ ಯಂಗ್‌ ರೆಬೆಲ್‌ ಸ್ಟಾರ್‌ನ ಮೋಸ್ಟ್​ ಕಂಫರ್ಟಬಲ್ ಡೈರೆಕ್ಟರ್​ ಯಾರು ಗೊತ್ತೇ?

Salaar Interview: ಕಳೆದ ತಿಂಗಳು ಸಲಾರ್‌ ಚಿತ್ರ ತೆರೆಕಂಡು ಸೂಪರ್‌ ಹಿಟ್‌ ಆಗಿದ್ದು, ಸಿನಿಮಾದ ಯಶಸ್ಸಿನ ಸೆಲೆಬ್ರೇಷನ್‌ ಮಧ್ಯೆ, ಚಿತ್ರತಂಡದ ಚಿಟ್‌ ಚಾಟ್‌ ವಿಡಿಯೋವನ್ನು ಹೊಂಬಾಲೇ ಸಂಸ್ಥೆ ರಿಲೀಸ್‌ ಮಾಡಿದ್ದಾರೆ. ಇದರಲ್ಲಿ ಪ್ರಭಾಸ್‌ ತಮ್ಮ ಮೊಸ್ಟ್‌ ಕಂಫರ್ಟಬಲ್ ಡೈರೆಕ್ಟರ್ ಯಾರು ಎಂದು ಹೇಳಿದ್ದಾರೆ. ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.  

Written by - Zee Kannada News Desk | Last Updated : Jan 18, 2024, 09:19 AM IST
  • ಸಲಾರ್ ಸಿನಿಮಾದ ಸಕ್ಸಸ್​ ಖುಷಿಯನ್ನು ಚಿತ್ರತಂಡ ಸೆಲೆಬ್ರೆಟ್​ ಮಾಡುವುದರ ನಡುವೆ ಹೊಂಬಾಳೆ ಎಕ್ಸ್​ಕ್ಲೂಸಿವ್ ಚಿಟ್​ ಚಾಟ್ ವಿಡಿಯೋ ಬಿಡುಗಡೆ ಮಾಡಿದೆ.
  • ನಟಿ ಶೃತಿ ಹಾಸನ್‌ ಪ್ರಶಾಂತ್ ನೀಲ್ ಸಿನಿಮಾ ಕುರಿತ ಮೊದಲ ನಿರೂಪಣೆ ನನ್ನಲ್ಲಿ ತುಂಬಾ ಗೊಂದಲ ಮೂಡಿಸಿತ್ತು ಎಂದು ​ ಹೇಳಿದಾಗ, ಪೃಥ್ವಿರಾಜ್ ಕೂಡ ಹೌದು ಮೊದಲ ಬಾರಿ ನನಗೂ ಕನ್ಫೂಜ್ ಆಯ್ತು ಎಂದಿದ್ದಾರೆ.
  • ಪ್ರಭಾಸ್‌ ಇಂತಹ ಸಂಬಂಧ ಬೆಳೆಯೋದು ತೀರ ವಿರಳ ಅಷ್ಟೇ ಅಲ್ಲದೇ ಪ್ರಶಾಂತ್ ಸಖತ್ ಸಾಫ್ಟ್​, ಕೂಲ್ , ಫನ್ನಿ​ ಹಾಗೂ ಎಂಟರ್ಟೈನ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಟಾಲಿವುಡ್‌ ಯಂಗ್‌ ರೆಬೆಲ್‌ ಸ್ಟಾರ್‌ನ ಮೋಸ್ಟ್​ ಕಂಫರ್ಟಬಲ್ ಡೈರೆಕ್ಟರ್​ ಯಾರು ಗೊತ್ತೇ? title=

Salaar Team Chit Chat: ಕಳೆದ ವರ್ಷ ಕೊನೆಯಲ್ಲಿ ತೆರೆಕಂಡ ಸಲಾರ್​ ಸಿನಿಮಾ ಬ್ಲಾಕ್​ ಬಸ್ಟರ್ ಹಿಟ್ ಆಗಿ, ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ದಾಖಲೆ ಬರೆದಿದೆ. ಸಲಾರ್‌ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಅಲ್ಲಿಯ ಭಾಷೆಯಲ್ಲಿ ದಬ್‌ ಆಗಿ ಚಿತ್ರ ರಿಲೀಸ್‌ ಆಗಿದೆ. ಸಿನಿಮಾದ ಸಕ್ಸಸ್​ ಖುಷಿಯನ್ನು ಚಿತ್ರತಂಡ ಸೆಲೆಬ್ರೆಟ್​ ಮಾಡುವುದರ ನಡುವೆ ಹೊಂಬಾಳೆ ಎಕ್ಸ್​ಕ್ಲೂಸಿವ್ ಚಿಟ್​ ಚಾಟ್ ವಿಡಿಯೋ ಬಿಡುಗಡೆ ಮಾಡಿದೆ. ಅದರಲ್ಲಿ ನಟ ಪ್ರಭಾಸ್​, ಶೃತಿ ಹಾಸನ್ ಹಾಗೂ ಪೃಥ್ವಿರಾಜ್​ ಸುಕುಮಾರನ್​ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಬಹಿರಂಗಪಡಿಸುವುದರ ಜೊತೆಗೆ, ಪ್ರಶಾಂತ್ ನೀಲ್ ಡೈರೆಕ್ಷನ್​ ಅನ್ನು ಮೂವರು ಕೊಂಡಾಡಿದ್ದಾರೆ.   

ಆ ಸಂದರ್ಭದಲ್ಲಿ ನಟಿ ಶೃತಿ ಹಾಸನ್‌ ಪ್ರಶಾಂತ್ ನೀಲ್ ಸಿನಿಮಾ ಕುರಿತ ಮೊದಲ ನಿರೂಪಣೆ ನನ್ನಲ್ಲಿ ತುಂಬಾ ಗೊಂದಲ ಮೂಡಿಸಿತ್ತು ಎಂದು ​ ಹೇಳಿದಾಗ, ಪೃಥ್ವಿರಾಜ್ ಕೂಡ ಹೌದು ಮೊದಲ ಬಾರಿ ನನಗೂ ಕನ್ಫೂಜ್ ಆಯ್ತು ಎಂದಿದ್ದಾರೆ. ನಂತರ ಇಬ್ಬರು ಒಟ್ಟಿಗೆ ಮಾತಾಡಿದ ಬಳಿಕ ಗೊಂದಲಕ್ಕೆ ಉತ್ತರ ಸಿಕ್ಕಿತು ಎಂದಿದಕ್ಕೆ, ಪ್ರಭಾಸ್‌ ಸಹ ನನಗೂ ಕೂಡ ಹೇಳಿದ್ದಾರೆ. ಸಲಾರ್‌ ಸೆಟ್‌ನಲ್ಲಿ ಪ್ರಶಾಂತ್ ಜೊತೆ ಮಾತಾಡಿದಾಗ ಅವರು ಅದ್ಭುತ ವ್ಯಕ್ತಿ ಎಂದು ತಿಳಿಯಿತು ಎಂದು ಶೃತಿ ಹಾಸನ್ ಮಾತನಾಡಿದರು.

ಇದನ್ನೂ ಓದಿ: ʼಹನುಮಾನ್‌ʼ ಸಿನಿಮಾ ನೋಡಿ ನಿರ್ದೇಶಕನ್ನು ಮೆಚ್ಚಿಕೊಂಡ ರಿಷಬ್‌..! ನಟನ ಬಗ್ಗೆ ಶೆಟ್ರು ಹೇಳಿದ್ದೇನು.?

ನಟ ಪೃಥ್ವಿರಾಜ್ ಸಲಾರ್‌ ಸಿನಿಮಾ ಸೆಟ್​ನಲ್ಲಿ ಪ್ರಶಾಂತ್ ನೀಲ್​ ಕಾರ್ಯವೈಖರಿಯನ್ನು  ಕೊಂಡಾಡುತ್ತಾ, ಅವರ ಕೆಜಿಎಫ್, ಸಲಾರ್ ಯಾವುದೇ ಸಿನಿಮಾ ಆಗಿರಲಿ, ಸಿನಿಮಾಟ್ರೋಗ್ರಫಿ, ಕಥೆ, ಆ್ಯಕ್ಷನ್ ಏನೇ ಇದ್ದರೂ ಪ್ರಶಾಂತ್​ ಸೆಟ್‌ನಲ್ಲಿ  ನಟರಿಗಾಗಿ ನಿರ್ದೇಶನ ಮಾಡ್ತಾರೆ. ಪಾತ್ರಗಳ ನಿರೂಪಣೆ ಮುಖ್ಯವಾಗಿರುತ್ತಿದ್ದು, ಪ್ರಶಾಂತ್ ನಟರ ಮೇಲೆ ತೋರಿಸುವ ಕಾಳಜಿ ಅದ್ಬುತ ಎಂದಿದ್ದಾರೆ.

ಇತ್ತ ಪ್ರಭಾಸ್‌ ನನ್ನ 21 ವರ್ಷದ ಸಿನಿ ಕೆರಿಯರ್​ನಲ್ಲಿ ಪ್ರಭಾಸ್​ ನನಗೆ ಮೋಸ್ಟ್​ ಕಂಫರ್ಟಬಲ್ ಡೈರೆಕ್ಟರ್ ಅಂದ್ರೆ ಅದು ಪ್ರಶಾಂತ್ ನೀಲ್​ ಎಂದು ಹೇಳಿತ್ತಾ, ಎರಡು ವರ್ಷ ಅವರ ಜೊತೆ ಕೆಲಸ ಮಾಡಿದ್ದೇನೆ. ದಿ ಬೆಸ್ಟ್​, ಸೂಪರ್​ ಡೈರೆಕ್ಟರ್. ಸಿನಿಮಾ ಕೆಲಸ ಮುಗಿದ ಮೇಲೂ ನಾವು ಒಟ್ಟಿಗೆ ಸೇರೋದು ಮಾತಾಡೋದು ಮಾಡುತ್ತಿದ್ದೇವೆ.ಇಂತಹ ಸಂಬಂಧ ಬೆಳೆಯೋದು ತೀರ ವಿರಳ ಅಷ್ಟೇ ಅಲ್ಲದೇ ಪ್ರಶಾಂತ್ ಸಖತ್ ಸಾಫ್ಟ್​, ಕೂಲ್ , ಫನ್ನಿ​ ಹಾಗೂ ಎಂಟರ್ಟೈನ್ ಆಗಿದ್ದಾರೆ. ನಟರನ್ನು ಅವರು ಉತ್ತಮ ಸ್ಥಾನದಲ್ಲಿಟ್ಟು ನೋಡ್ತಾರೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಬಗ್ಗೆ ಗುಣಗಾನ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News