Rakshith Shetty : ಕಳೆದ ವರ್ಷ ತೆರೆಕಂಡ 777 ಚಾರ್ಲಿ ಸಿನಿಮಾ ಚಿತ್ರತಂಡಕ್ಕೆ ದೊಡ್ಡ ಸಕ್ಸಸ್‌ ತಂದು ಕೊಟ್ಟಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿಯಲ್ಲಿ ರಿಲೀಸ್‌ ಆಗಿತ್ತು. ಇದು ರಕ್ಷಿತ್ ಶೆಟ್ಟಿಗೆ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುವಂತೆ ಮಾಡಿದ ಸಿನಿಮಾ. ಅಲ್ಲದೆ, ಈ ಸಿನಿಮಾ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದಿದೆ. 


COMMERCIAL BREAK
SCROLL TO CONTINUE READING

ಆಕ್ಟೋಬರ್‌ 12ರಂದು ಇನೋವೇಟಿವ್‌ ಇಂಟರ್‌ ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ನಟ ರಕ್ಷಿತ್‌ ಶೆಟ್ಟಿ ಭಾಗಿಯಾಗಿದ್ದರು. ಅವರಿಗೆ ಅಲ್ಲಿ ಐಕಾನಿಕ್‌ ಸ್ಟಾರ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ನಟ ರಕ್ಷಿತ್‌ ಶೆಟ್ಟಿ, 777 ಚಾರ್ಲಿ ನನ್ನ ವೃತ್ತಿ ಜೀವನದಲ್ಲಿ ಸ್ಪೆಷಲ್‌ ಸಿನಿಮಾ, ಈ ಸಿನಿಮಾಗಾಗಿ ನನಗೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟಿದಕ್ಕೆ ಧನ್ಯವಾದಗಳು. ಮನುಷ್ಯರ ಜೊತೆ ನಟಿಸಬಹುದು. ಆದರೆ ಚಾರ್ಲಿಯ ಜೊತೆ ನಟಿಸುವುದು ಅಷ್ಟೊಂದು ಸುಲಭದ ಕೆಲಸ ಆಗಿರಲಿಲ್ಲ. 


ಇದನ್ನೂ ಓದಿ: ‘ಗನ್ಸ್ ಆಂಡ್ ರೋಸಸ್’ ಹಿಡಿದು “108ಗೆ ಫೋನ್ ಮಾಡೋ ಶಿಷ್ಯ” ಎಂದ ವಿಜಯ್ ಪ್ರಕಾಶ್!


120 ದಿನಗಳ ಚಿತ್ರೀಕರಣದಲ್ಲಿ, ಪ್ರತಿಬಾರಿಯ 40 ಟೇಕ್‌ ಮಾಡಬೇಕಿತ್ತು. ಯಾಕಂದ್ರೆ ಚಾರ್ಲಿ ಯಾವಾಗ ಚೆನ್ನಾಗಿ ಆಕ್ಟ್‌ ಮಾಡ್ತಾಳೆ ಅನ್ನೋದೆ ದೊಡ್ಡ ಸಮಸ್ಯೆಯಾಗಿತ್ತು. ಹಾಗಾಗಿ ಈ ಕೆಲಸ ತುಂಬಾ ಸವಾಲಿನಿಂದ ಕೂಡಿತ್ತು. 777 ಚಾರ್ಲಿ ಸಿನಿಮಾ ಶೂಟಿಂಗ್‌ ಕೊನೆಯಲ್ಲಿ ನಿರ್ದೇಶಕ ಕಿರಣ್‌ ರಾಜ್‌ ಚಾರ್ಲಿ-2 ಸಿನಿಮಾ ಮಾಡೋಣ ಅಂತ ಹೇಳಿದರು. ಅದಕ್ಕೆ ನಾನು ನೀವು ಪಾರ್ಟ್-2 ಮಾಡಿ ನಾನು ಬರಲ್ಲ ಎಂದು ಹೇಳಿದೆ. 


ಒಬ್ಬ ನಟನ ಜೊತೆ ನಟಿಸುವಾಗ ಎಷ್ಟು ಎಂಜಾಯ್‌ ಮಾಡ್ತೀರೋ ಚಾರ್ಲಿ ಜೊತೆ ನಟಿಸುವಾಗ ಅಷ್ಟು ಕಷ್ಟ ಪಡಬೇಕಾಗುತ್ತದೆ. ಆದರೆ ಆ ಕಷ್ಟಕ್ಕೆ ಮೆಚ್ಚುಗೆ ಬಂದಾಗ ನೋವು ಮರೆತುಹೋಗುತ್ತದೆ. ಪ್ರಾಣಿ ಹಿಂಸೆ ಮಾಡಿ ಯಾವ ಸಿನಿಮಾ ಚಿತ್ರೀಕರಣ ಮಾಡುವ ಸಾಹಸ ಬೇಡ ಎಂದು ಹೇಳಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.