`AI ಲಾಜಿಕ್ ಮೇಲೆ ಕೆಲಸ ಮಾಡುತ್ತದೆ, ಭಾವನೆಗಳ ಮೇಲೆ ಅಲ್ಲ` : ರಕ್ಷಿತ್ ಶೆಟ್ಟಿ
Rakshith Shetty: ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿಯ ಆರ್ಟಿಫಶಿಯಲ್ ಇಂಟೆಲಿಜೆನ್ಸ್ ಬಗ್ಗೆ ಮಾತನಾಡುವುದರ ಜೊತೆ, AIನ ಅನುಕೂಲ ಹಾಗೂ ಅನಾನುಕೂಲಗಳನ್ನು ಹಂಚಿಕೊಂಡಿದ್ದಾರೆ.
Rakshith Shetty Talks About AI: ಕನ್ನಡ ಚಿತ್ರರಂದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ಟ್ರೇಲರ್ ಬಿಡುಗಡೆಯಾಗಿದುದು, ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. ಹಾಗೆಯೇ ಈ ಚಿತ್ರದ ಹಾಡುಗಳು ಸಹ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.ಇನ್ನೇ ಈ ಸಿನಿಮಾ ಇದೇ ತಿಂಗಳು 17ರಂದು ತೆರೆ ಮೇಲೆ ಅಪ್ಪಳಿಸಲಿದೆ.
ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ, ಇತ್ತೀಚೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. AIನ ಅನುಕೂಲ ಹಾಗೂ ಅನಾನುಕೂಲದ ಬಗ್ಗೆ ಮಾತನಾಡುವುದರ ಜೊತೆಗೆ ಚಲನಚಿತ್ರಗಳಲ್ಲಿ AI ಯ ಬಳಕೆ ಮತ್ತು ಚಲನಚಿತ್ರ ನಿರ್ಮಾಪಕರ ಸೃಜನಾತ್ಮಕ ಪ್ರಕ್ರಿಯೆಯ ಭಾಗವಾಗುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ.
ಇದನ್ನು ಓದಿ: ಸಲ್ಮಾನ್ ಖಾನ್‌ಗೆ 5 ಜನ ಗರ್ಲ್‌ಫ್ರೆಂಡ್ಸ್ : ಇದು ಸುಳ್ಳುಯೆಂದ ಕಾಜೋಲ್ ವಿಡಿಯೋ ವೈರಲ್.!
ರಕ್ಷಿತ್ , "ಸಿನಿಮಾ ನಿರ್ಮಾಪಕ ಕ್ರಿಸ್ಟೋಫರ್ ನೋಲನ್ ಒಂದು ಸಂದರ್ಶನವೊಂದರಲ್ಲಿ, ಅವರು ಚಲನಚಿತ್ರಗಳನ್ನು ಎರಡು ರೀತಿಯಲ್ಲಿ ಸಂಪರ್ಕಿಸುತ್ತಾರೆ - ವ್ಯಕ್ತಿನಿಷ್ಠ ಮತ್ತು ವಸ್ತುನಿಷ್ಠ. ಅದು ಮೊದಲು ನನಗೆ ಆಶ್ಚರ್ಯ ಪಡುವಂತೆಯಿತ್ತು. ಸುಮಾರು ವರ್ಷಗಳ ಬಳಿಕ ಪ್ರತಿಯೊಂದಕ್ಕೂ ತಾರ್ಕಿಕ ಮತ್ತು ಅರ್ಥಗರ್ಭಿತ ಅಂಶವಿದೆ ಎಂದು ನಾನು ಅರಿತುಕೊಂಡೆ ಹಾಗೂ ವಿಶೇಷವಾಗಿ ಕಲೆಯ ವಿಚಾರಕ್ಕೆ ಬಂದಾಗ ಎಲ್ಲರೂ ಕೈಜೋಡಿಸಬೇಕು" ಎಂದಸು ಹೇಳಿದರು.
ಸಿಂಪಲ್ ಸ್ಟಾರ್ ಚಿತ್ರಕಥೆ ಬಗ್ಗೆ ಹಂಚಿಕೊಳ್ಳುತ್ತಾ "AI ಮತ್ತು ಚಾಟ್ GPT ತರ್ಕ ಮತ್ತು ಭಾವನೆಗಳ ಮೇಲೆ ಕೆಲಸ ಮಾಡುತ್ತವೆ . ಇದು ತಾರ್ಕಿಕ ಮಟ್ಟದಲ್ಲಿ ಹೆಚ್ಚಿನ ಸ್ಕ್ರಿಪ್ಟ್‌ಗಳನ್ನು ವಿಶ್ಲೇಷಿಸಬಹುದು ಮತ್ತು ಬರಬಹುದು, ಆದರೆ ಒಳಗಿನಿಂದ ಬರುವ ವ್ಯಕ್ತಿನಿಷ್ಠ ಬರವಣಿಗೆ, ಮತ್ತು ಅದು, ಯಾವುದೇ AI ಅಥವಾ ಕಂಪ್ಯೂಟರ್ ತರಲು ಸಾಧ್ಯವಿಲ್ಲ. ತಂತ್ರಜ್ಞಾನದ ವಿಕಾಸವನ್ನು ನೀವು ಗಮನಿಸಿದರೆ, ವಿಶೇಷವಾಗಿ ಚಿತ್ರರಂಗದಲ್ಲಿ, ಇದು ಚಲನಚಿತ್ರ ನಿರ್ಮಾಪಕ ಅಥವಾ ಕಥೆಗಾರನಿಗೆ ಹೆಚ್ಚುವರಿ ಪ್ರಯೋಜನವಾಗಿದೆ" ಎಂದು ಮಾತನಾಡಿದರು.
ಇದನ್ನು ಓದಿ: ವಿರಾಟ್ ಕೊಹ್ಲಿ ಬರ್ತ್ ಡೇಗೆ ಅನುಷ್ಕಾ ಮುದ್ದಾದ ವಿಶ್.. ಎಲ್ಲರೂ ಕಾದಿದ್ದ ಆ ಗುಟ್ಟು ಬಿಟ್ಟು ಕೊಟ್ರಾ?
ನಟ ರಕ್ಷಿತ್ AI ಬಗ್ಗೆ ತಮ್ಮ ಅನಿಸಿಕೆ ಹೊರಹಾಕುತ್ತಾ "AI ಶೀಘ್ರದಲ್ಲೇ ನಮಗೆ ಹೆಚ್ಚುವರಿ ಪ್ರಯೋಜನವಾಗಬಹುದು ಎಂದು ನಾನು ನಂಬುತ್ತೇನೆ. ಜನರು ಒಳಗಿನಿಂದ ಕಥೆಗಳೊಂದಿಗೆ ಬರಬೇಕಾಗುತ್ತದೆ ಮತ್ತು ಅದನ್ನು ಉತ್ತಮಗೊಳಿಸಲು ಅಥವಾ ಆಯ್ಕೆಗಳನ್ನು ಪಡೆಯಲು AI ನಿಂದ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಬ್ಬ ಒಳ್ಳೆಯ ಕಲಾವಿದ ಖಂಡಿತವಾಗಿಯೂ ಅದನ್ನು ತನ್ನ ಉತ್ತಮ ಪ್ರಯೋಜನಕ್ಕಾಗಿ ಬಳಸಿಕೊಳ್ಳುತ್ತಾನೆ. ಮುಂದೆ, ಇದು ಒಂದು ಅಡಚಣೆಯಾಗುವುದಿಲ್ಲ ಎಂದು ನಾನು ನಂಬುತ್ತೇನೆ" ಎಂದು ಅಭಿಪ್ರಾಯ ತಿಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.