ಸಲ್ಮಾನ್‌ ಖಾನ್‌ಗೆ 5 ಜನ ಗರ್ಲ್‌ಫ್ರೆಂಡ್ಸ್‌ : ಇದು ಸುಳ್ಳುಯೆಂದ ಕಾಜೋಲ್‌ ವಿಡಿಯೋ ವೈರಲ್.!

Salmaan Khan: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ತಮಗೆ ಐದು ಜನ ಗರ್ಲ್‌ಫ್ರೆಂಡ್ಸ್‌  ಇದ್ದಾರೆಂಬ ವಿಷಯವನ್ನು ರಿವಿಲ್‌ ಮಾಡಿದ್ದಾರೆ. ಈ ನಟನಿಗೆ ಹಿಂದಿನ ಗೆಳತಿಯರ ಬಗ್ಗೆ ಅಜಯ್ ದೇವಗನ್ ಮತ್ತು ಕಾಜೋಲ್ ಅವರನ್ನು ಚುಡಾಯಿಸಿದ ಹಳೆಯ ವೀಡಿಯೊ ವೈರಲ್ ಆಗುತ್ತಿದೆ.   

Written by - Zee Kannada News Desk | Last Updated : Nov 5, 2023, 12:12 PM IST
  • ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಐದು ಜನ ಗರ್ಲ್‌ಫ್ರೆಂಡ್ಸ್‌
  • ಕಳೆದ ಹಿಂದಿ ಬಿಗ್‌ಬಾಸ್‌ ಸೀಸನ್‌ನಲ್ಲಿ ಅಜಯ್ ಮತ್ತು ಕಾಜೋಲ್ ಜೋಡಿ, ಒಂದು ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿದ್ದರು.
  • ಅಜಯ್ ಮತ್ತು ಕಾಜೋಲ್ ಜೋಡಿ, ಸಲ್ಮಾನನ್ನು "ಸುಳ್ಳು ಪತ್ತೆ ಪರೀಕ್ಷೆ"ಗೆ ಒಳಪಡಿಸಿದರು
ಸಲ್ಮಾನ್‌ ಖಾನ್‌ಗೆ 5 ಜನ ಗರ್ಲ್‌ಫ್ರೆಂಡ್ಸ್‌ : ಇದು ಸುಳ್ಳುಯೆಂದ ಕಾಜೋಲ್‌ ವಿಡಿಯೋ ವೈರಲ್.!  title=

Salmaan Khan Reveals About His Girl Friends: ದೊಡ್ಡ ದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರಾದ, ಬಾಲಿವುಡ್‌ ನಟ ಸಲ್ಮಾನ್ ಖಾನ್, 1988ರಲ್ಲಿ ʼಬಿವಿ ಹೋ ತೋ ಐಸಿʼ ಚೊಚ್ಚಲ ಚಿತ್ರದಿಂದ ಮೂರು ದಶಕಗಳಿಗೂ ಹೆಚ್ಚು ಕಾಲ ಸುಪ್ರಸಿದ್ಧ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ. ಸಲ್ಮಾನ್ ತಮ್ಮ ವೃತ್ತಿಜೀವನದ ಜೊತೆಗೆ, ವೈಯಕ್ತಿಕ ಜೀವನದಿಂದ ಸಹ ಸುದ್ದಿಯಾಗಿದ್ದಾರೆ. ಈ ನಟ ಒಂದು ಹಳೆಯ ವೀಡಿಯೊದಲ್ಲಿ, ಅಜಯ್ ದೇವಗನ್ ಮತ್ತು ಕಾಜೋಲ್ ಇಬ್ಬರು ಎಷ್ಟು ಮಹಿಳೆಯರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಹೌದು.. ಕಳೆದ ಹಿಂದಿ ಬಿಗ್‌ಬಾಸ್‌ ಸೀಸನ್‌ನಲ್ಲಿ ಅಜಯ್ ಮತ್ತು ಕಾಜೋಲ್ ಜೋಡಿ, ಒಂದು ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿದ್ದು, ಸಲ್ಮಾನನ್ನು "ಸುಳ್ಳು ಪತ್ತೆ ಪರೀಕ್ಷೆ"ಗೆ ಒಳಪಡಿಸಿದರು. ನಂತರ ಕಾಜೋಲ್ ಸಲ್ಮಾನ್‌ಗೆ  “ನಿಮಗೆ 5 ಜನಕ್ಕಿಂತ ಕಡಿಮೆ ಗೆಳತಿಯರು ಇದ್ದಾರೆಯೇ?” ಎಂದು ಕೇಳಿದರು, ಆಗ ಅಜಯ್ "ಒಂದು ಸಮಯದಲ್ಲಿ?" ಎಂದು ತಮಾಷೆಯಾಗಿ ಹೇಳಿದರು. ಅದಕ್ಕೆ ಸಲ್ಮಾನ್ "ನಿಮಗೆ ಗೊತ್ತಾ, ನನ್ನ ಜೀವನದುದ್ದಕ್ಕೂ, ನನಗೆ ಕೇವಲ ಐದು ಗೆಳತಿಯರನ್ನು ಇದ್ದಾರೆ ಹಾಗೆ ಅವರು ಬಹಳ ಸಮಯದಿಂದ ಇದ್ದಾರೆ. ಆ ಸಮಯದಲ್ಲಿ ನನಗೆ ಅವರ ಜೊತೆವಿರಲು ಕಷ್ಟವಾಗುತ್ತಿತು." ಎಂದು ಉತ್ತರಿಸಿದರು.

ಇದನು ಓದಿ: ʼಕೆಜಿಎಫ್‌ ಪಾರ್ಟ್-1ʼ ನಲ್ಲಿ ಶಿವರಾಜ್‌ ಕೆ.ಆರ್‌ ಪೆಟೆಯ ಸೀನ್‌ಗಳಿಗೆ ಕತ್ತರಿ ಹಾಕಿದ್ದಾರೆ: ಇದಕ್ಕೆ ಯಶ್‌ ಕರೆಮಾಡಿ ನೀಡಿದ ಕಾರಣವೇನು?

ಅದಕ್ಕೆ ಕಾಜೋಲ್ ಸಲ್ಮಾನ್‌ನ್ನು ನಂಬುವುದಿಲ್ಲ ಮತ್ತು ನೀನು ಡೇಟ್ ಮಾಡಿದ ಮಹಿಳೆಯರ ಸಂಖ್ಯೆಯನ್ನು ಎಣಿಸುವಂತೆ ನಟಿಸಿದ್ದಾರು. ಸಲ್ಮಾನ್, "ಅಧಿಕೃತ ಮತ್ತು ಅನಧಿಕೃತ" ಎಂದು ಸೇರಿಸಿದರು. ಅಜಯ್ ದೇವಗನ್ " ಇಪ್ಪತ್ತೈದು" ಎಂದು ವ್ಯಂಗ್ಯವಾಡಿದರು. ಸಲ್ಮಾನ್ ನಂಬರ್ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದೂ ಕಾಜೋಲ್ ಲೇವಡಿ ಮಾಡಿದ್ದಾರೆ.

ಈ ಹಿಂದೆ ಆಪ್ ಕಿ ಅದಾಲತ್‌ನಲ್ಲಿ ಸಲ್ಮಾನ್ ಕಾಣಿಸಿಕೊಂಡಾಗ, ತನ್ನ ಸಂಬಂಧವನ್ನು ಕೊನೆಗೊಳಿಸಿದ್ದು ತನ್ನ ತಪ್ಪು ಎಂದು ಹೇಳಿದ್ದರು. ಸಲ್ಮಾನ್, “ವಾಸ್ತವವಾಗಿ, ಅವರೆಲ್ಲರೂ ಒಳ್ಳೆಯವರಾಗಿದ್ದರು. ಇದು ನನ್ನ ತಪ್ಪು... ಬಹುಶಃ ಅವರು ಬಯಸಿದ ರೀತಿಯ ಜೀವನ ಮತ್ತು ಸಂತೋಷವನ್ನು ನಾನು ಅವರಿಗೆ ನೀಡಲು ಸಾಧ್ಯವಾಗುವುದಿಲ್ಲ ಎಂಬ ಭಯವಾಗಿತ್ತು." ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News