Rakul Preet Birthday Special: ಫ್ಯಾನ್ಸ್‌ ತಮ್ಮ ನೆಚ್ಚಿನ ಸ್ಟಾರ್‌ಗಾಗಿ ಏನು ಬೇಕಾದರು ಮಾಡುತ್ತಾರೆ. ಅದೇ ರೀತಿ ಇಲ್ಲಿ ಒಬ್ಬ ಅಭಿಮಾನಿ ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬಕ್ಕಾಗಿ ತನ್ನ ಸ್ಕೂಟಿಯಲ್ಲೇ ಸಾವಿರಾರು ಕಿಲೋಮೀಟರ್‌ ಹೋಗಿದ್ದಾನೆ. ಹಾಗಾದರೆ ಆ ಅದೃಷ್ಟವಂತ ನಟಿ ಯಾರು? ಏನು ಇದರ ಅಸಲಿ ಕಹಾನಿ? ಈ ಇಂಟೆರೆಸ್ಟಿಂಗ್ ಸ್ಟೋರಿ ಒಮ್ಮೆ ಓದಿ... 


COMMERCIAL BREAK
SCROLL TO CONTINUE READING

ಟಾಲಿವುಡ್‌ ನಟಿ ರಕೂಲ್‌ ಪ್ರೀತ್‌ ಇವರು ಮೊದಲು ಕನ್ನಡ ಸಿನಿಮಾದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ನವರಸ ನಾಯಕ ಜಗ್ಗೇಶ್‌ ಪುತ್ರ ಗುರುರಾಜ್‌ ಪುತ್ರ ಅಭಿನಯದ ಗಿಲ್ಲಿ ಸಿನಿಮಾದಲ್ಲಿ ನಾಯಕಿಯಾಗಿ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದರು. ಅಲ್ಲಿಂದ ಈ ನಟಿಗೆ ಸಾಕಷ್ಟು ಆಫರ್‌ಗಳು ಬರಲು ಶುರುವಾದವು. ಈಕೆ ಗಿಲ್ಲಿ ಸಿನಿಮಾ ನಂತರ ಮತ್ತೆ ಕನ್ನಡ ಸಿನಿಮಾಗಳತ್ತ ಮುಖ ಮಾಡದೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.


ಬಹುಭಾಷಾ ನಟಿ ಟಾಲಿವುಡ್‌ನಲ್ಲಿ ಹೆಸರಾಂತ ನಟರ ಜೊತೆ ಅಭಿನಯಿಸಿದ್ದಾರೆ. ಈಕೆ ಹೆಚ್ಚಾಗಿ ಟಾಲಿವುಡ್‌ನಲ್ಲೇ ಸುಪ್ರಸಿದ್ದಿಯಾಗಿದ್ದಾರೆ. ಹಾಗೆ ಟಾಲಿವುಡ್‌ ಮಾತ್ರವಲ್ಲದೆ ಸೌತ್‌ ಇಂಡಿಯಾದಲ್ಲಿ ಇವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇವರು ಜನಿಸಿದ್ದು ನವದೆಹಲಿಯಲ್ಲಿ ಆದರೂ ಹೆಚ್ಚು ಫೇಮಸ್‌ ಆಗಿದ್ದು ದಕ್ಷಿಣ ಭಾರತದಲ್ಲೇ. ತನ್ನ ನಟನೆಯಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಮನೆ ಮಾಡಿ, ಸಾಕಷ್ಟು ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರೆ. 


ಇದನ್ನೂ ಓದಿ- Bollywood Masala: ಈ ಒಂದೇ ಚಿತ್ರ ಇಬ್ಬರು ಸ್ಟಾರ್‌ಗಳ ಭವಿಷ್ಯವನ್ನೇ ಬದಲಾಯಿಸಿತು..!  


ಸ್ಟಾರ್‌ಗಳ ಹುಟ್ಟುಹಬ್ಬ ಎಂದರೆ ಫ್ಯಾನ್ಸ್ಗಳು ಕೇಕ್‌ ಕಟ್‌ ಮಾಡುವುದು, ತಮ್ಮ ನೆಚ್ಚಿನ ತಾರೆಯರ ಹೆಸರಿನಲ್ಲಿ ಅನ್ನದಾನ ಶಬಿರಗಳ್ನು ಏರ್ಪಡಿಸುವುದು ಇಂತಹ ಹಲವಾರು ಕೆಲಸಗಳನ್ನು ಮಾಡುತ್ತಾರೆ. ಜನರು ಅವರ ಬರ್ತ್‌ಡೇನ ಗ್ರಾಂಡ್‌ ಆಗಿ ಸೆಲೆಬ್ರೇಟ್‌ ಮಾಡುತ್ತಾರ್. ಇಲ್ಲವೇ, ಅವರ ನೆಚ್ಚಿನ ನಟ-ನಟಿಯರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಫ್ಲಾನ್‌ ಮಾಡಿ ಆಚರಿಸುತ್ತಾರೆ. ಹೀಗೆ ಇಲ್ಲೋಬ್ಬ ರಾಕುಲ್‌ ಪ್ರೀತ್‌ ಅಭಿಮಾನಿಯೊಬ್ಬನು ತನ್ನ ನೆಚ್ಚಿನ ನಟಿಯನ್ನು ಭೇಟಿಯಾಗಲು ಸಾವಿರಾರು ಕಿಲೋಮೀಟರ್‌ ತನ್ನ ದ್ವಿಚಕ್ರವಾಹನದಲ್ಲಿ ಪ್ರಯಾಣಿಸಿದ್ದಾನೆ.


ಹೌದು..  ಅಕ್ಟೋಬರ್‌ 10  ಫೇವರೇಟ್‌ ನಟಿ  ರಾಕುಲ್‌ ಪ್ರಿತ್‌ ಅವರ ಜನ್ಮದಿನಾಚರಣೆಯಲ್ಲಿ ಭಾಗಿಯಾಗಲು ಫ್ಯಾನ್‌ ಒಬ್ಬರು ತಮಿಳುನಾಡಿನಿಂದ ತಮ್ಮ ಟೂವೀಲರ್‌ನಲ್ಲಿ ಒಂದು ಸಾವಿರ ಕಿಲೋಮೀಟರ್‌ ಪ್ರಯಾಣ  ಮಾಡಿದ್ದಾರೆ. ಅವರು ಈ ನಟಿಗೆ ವಿಶ್‌ ಮಾಡುವುದರ ಜೊತೆ ಗಿಫ್ಟ್‌ ಸಹ ನೀಡಿದ್ದಾರೆ. ಈ ನಟಿ ಜೊತೆ ಆತ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಆ ಅಭಿಮಾನಿಯ ಹೆಸರು ಅಲ್ಲಾರಿ ಕಾಮೇಶ್‌ ಎಂದು ತಿಳಿದು ಬಂದಿದೆ.


ಇದನ್ನೂ ಓದಿ- ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ನಟಿ ತ್ರಿಷಾ..! ಟ್ಟಿಟ್‌ ಮಾಡಿ ವಾರ್ನಿಂಗ್‌ ನೀಡಿದ್ದು ಯಾರಿಗೆ 


ಅಲ್ಲಾರಿ ಕಾಮೇಶ್‌ ಅವರು ಬಿಸಿಲು, ಮಳೆ, ಚಳಿ ಯಾವ ತಾಪಮಾನದ ಬಗ್ಗೆ ಯೋಚನೆ ಮಾಡದೆ ಒಂದು ಸಾವಿರ ಕಿಲೋಮೀಟರ್‌ ಪ್ರಯಾಣ ಮಾಡಿ ರಾಕುಲ್‌ ಅವರನ್ನು ಭೇಟಿ ಮಾಡಿದ್ದಾರೆ. ಈತನ ಸಾಹಸವನ್ನು ಮೆಚ್ಚಲೇ ಬೇಕು. ನಟಿ ರಾಕುಲ್‌ ಈ ಅಭಿಮಾನಿಗೆ ಮಾತ್ರ ಸಮಯ ನೀಡಿಲ್ಲ. ಯಾರೇ ಫ್ಯಾನ್ಸ್‌ಗಳು ಬಂದರು ಅವರಿಗೂ ತಮ್ಮ ಸಮಯ ನೀಡುತ್ತಾರೆ. ಹಾಗೆ ಅವರ ಜೊತೆ ಚೆನ್ನಾಗಿ ಮಾತನಾಡಿಸಿ ಅಭಿಮಾನಿಗಳ ಖುಷಿಯಲ್ಲೇ ತಮ್ಮ ಖುಚಿಯನ್ನೂ ಕಾಣುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.