ಒನ್ ಫಿಲ್ಮ್ ಸೇವ್ 2 ಆಕ್ಟರ್ಸ್ ಕೆರಿಯರ್: ಸಿನಿಮಾ ಜಗತ್ತಿನಲ್ಲಿ ಕೆಲವು ತಾರೆಯರು ಇಂದಿಗೂ ತಮ್ಮ ಆಕರ್ಷಣೆ ಮತ್ತು ಮೋಡಿಯನ್ನು ಉಳಿಸಿಕೊಂಡಿದ್ದಾರೆ. ಈ ಇಬ್ಬರು ನಟರು ಬೇರಾರು ಅಲ್ಲ ಅಜಯ್ ದೇವಗನ್ ಮತ್ತು ಸುನಿಲ್ ಶೆಟ್ಟಿ. ಈ ಇಬ್ಬರೂ ಸ್ಟಾರ್‌ಗಳು ಸಾಕಷ್ಟು ಬಾಕ್ಸ್ ಆಫೀಸ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವರು ಅನೇಕ ಕೆಲವು ಚಿತ್ರಗಳು ಬ್ಲಾಕ್‍ಬಸ್ಟರ್ ಆಗಿದ್ದರೆ, ಕೆಲವು ಸೂಪರ್ ಡೂಪರ್ ಹಿಟ್ ಆಗಿವೆ. ಆದರೆ ಈ ಇಬ್ಬರು ನಟರು ತಮ್ಮ ಕೆರಿಯರ್‌ನಲ್ಲಿ ವೈಫಲ್ಯ ಅನುಭವಿಸಿದ್ದರು.
ಇನ್ನೇನು ಈ ಇಬ್ಬರು ಬಾಲಿವುಡ್ ನಟರ ಕೆರಿಯರ್ ಪ್ಲಾಫ್ ಆಯಿತು ಅನ್ನೋವಷ್ಟರಲ್ಲಿ ಒಂದೇ ಒಂದು ಚಿತ್ರ ಇವರಿಗೆ ಮತ್ತೆ ಮರುಜೀವ ನೀಡಿತು. ಹೀಗಾಗಿ ಬಹುತೇಕ ಮುಳುಗುತ್ತಿದ್ದ ತಮ್ಮ ವೃತ್ತಿಜೀವನದಿಂದ ಈ ನಟರು ಪಾರಾದರು. ಇದು ಆಗದೇ ಇದ್ದಿದ್ದರೆ ಇವರಿಬ್ಬರೂ ಫ್ಲಾಪ್ ನಟರೆಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತಿದ್ದರು. ಇವರಿಬ್ಬರ ಅದೃಷ್ಟವನ್ನೇ ಬದಲಿಸಿದ ಆ ಚಿತ್ರ ಯಾವುದು ಅನ್ನೋದರ ಬಗ್ಗೆ ತಿಳಿಯಿರಿ.
ಇದನ್ನೂ ಓದಿ: ʼಪ್ರಭಾಸ್ʼ ನಟನೆಯ ಈ ಸಿನಿಮಾದ ಫೋಟೋ, ವಿಡಿಯೋ ಶೇರ್ ಮಾಡಿದ್ರೆ ಕಠಿಣ ಕ್ರಮ..!
ನಟರ ಅದೃಷ್ಟವನ್ನೇ ಬದಲಾಯಿಸಿದ ‘ದಿಲ್ವಾಲೆ’!
'ದಿಲ್ವಾಲೆ' ಚಿತ್ರವನ್ನು ಹ್ಯಾರಿ ಬವೇಜಾ ನಿರ್ದೇಶಿಸಿದ್ದಾರೆ. ಈ ಚಿತ್ರ 1994ರಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿತ್ತು. ಯಾವುದೇ ಒಂದು ಚಿತ್ರ ಹಿಟ್ ಆಗಲು ಬೇಕಾದ ಎಲ್ಲಾ ಮಸಾಲೆಗಳನ್ನು ಈ ಚಿತ್ರ ಹೊಂದಿತ್ತು. ಪ್ರೀತಿ, ದ್ರೋಹ, ಪ್ರಣಯ, ಹಂಬಲದ ಜೊತೆಗೆ ಪ್ರಾಮಾಣಿಕ ಪೊಲೀಸ್ ಪಾತ್ರವನ್ನು ಸಹ ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ಸುನೀಲ್ ಶೆಟ್ಟಿ ಜೊತೆಗೆ ರವೀನಾ ಟಂಡನ್ ಸಹ ನಟಿಸಿದ್ದರು.
ಅಜಯ್ ದೇವಗನ್ ಲಕ್ ಬದಲಿಸಿದ ಚಿತ್ರ!
'ಫೂಲ್ ಔರ್ ಕಾಂತೆ' ಫ್ಲಾಪ್ ನಂತರ ಅಜಯ್ ದೇವಗನ್ ಅವರ ಸ್ಟಾರ್‍ಗಿರಿ ಅವನತಿಯ ಅಂಚಿಗೆ ತಲುಪಿತ್ತು. ಈ ಸ್ಟಾರ್ ನಟ 3 ವರ್ಷಗಳಿಂದ ಯಾವುದೇ ಹಿಟ್ ಚಿತ್ರ ನೀಡಲಿಲ್ಲ, ಆದರೆ ಇವರ ಫ್ಲಾಪ್ ಚಿತ್ರಗಳ ಸರಣಿ ನಿರಂತರವಾಗಿ ಬೆಳೆಯುತ್ತಿದೆ. ಈ 3 ವರ್ಷಗಳಲ್ಲಿ ಅಜಯ್ ಅನೇಕ ಚಿತ್ರಗಳನ್ನು ಮಾಡಿದರೂ ಅವೆಲ್ಲವೂ ಫ್ಲಾಪ್ ಆಗಿದ್ದವು. ಈ ಚಿತ್ರಗಳಲ್ಲಿ 'ಜಿಗರ್', 'ದಿವ್ಯ ಶಕ್ತಿ', 'ಪ್ಲಾಟ್‌ಫಾರ್ಮ್', 'ಶಕ್ತಿಮಾನ್', 'ದಿಲ್ ಹೈ ಬೇತಾಬ್', 'ಏಕ್ ಹಿ ರಾಸ್ತಾ' ಮತ್ತು 'ಧನ್ವಾನ್' ಸೇರಿವೆ. ಈ ಚಿತ್ರಗಳ ಫ್ಲಾಪ್ ನಂತರ ಅಜಯ್ ದೇವಗನ್ ಹ್ಯಾರಿ ಬವೇಜಾ ಅವರ 'ದಿಲ್ವಾಲೆ' ಚಲನಚಿತ್ರದಲ್ಲಿ ನಟಿಸಿದರು. ಇದು ಅವರ ಅದೃಷ್ಟವನ್ನೇ ಬದಲಾಯಿಸಿತು.
ಇದನ್ನೂ ಓದಿ: ʼದಿ ವಿಲನ್ʼ ನಟಿಯ ವಿಚಿತ್ರ ಹೇರ್‌ಸ್ಟೈಲ್..! ಆಮಿ ಜಾಕ್ಸನ್ ಫೋಟೋಸ್ ವೈರಲ್
ಸುನೀಲ್ ಶೆಟ್ಟಿ ಕೂಡ ಹಿಟ್ ಆದರು!
ಒಂದೆಡೆ 'ದಿಲ್ವಾಲೆ' ಅಜಯ್ ದೇವಗನ್ ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿದರೆ, ಇದು ಸುನೀಲ್ ಶೆಟ್ಟಿಯ ಭವಿಷ್ಯವನ್ನೂ ಬದಲಾಯಿಸಿತು. 1992ರಲ್ಲಿ ತೆರೆಕಂಡ 'ಬಲವಾನ್' ಸುನಿಲ್ ಶೆಟ್ಟಿಯವರ ಚೊಚ್ಚಲ ಚಿತ್ರ. ಇದಾದ ನಂತರ ಬಿಡುಗಡೆಯಾದ ಎರಡೂ ಚಿತ್ರಗಳು ಸೋತಿದ್ದವು. ಹೀಗಿರುವಾಗ ಸುನೀಲ್ ಶೆಟ್ಟಿಗೆ ‘ದಿಲ್ವಾಲೆ’ ಸಿಕ್ಕಾಗ ಅದರಲ್ಲಿನ ಪ್ರಾಮಾಣಿಕ ಪೊಲೀಸ್ ಪಾತ್ರ ಅವರ ಅದೃಷ್ಟದ ಬಾಗಿಲನ್ನು ತೆರೆಯಿತು.
ಹಿಟ್ ಆದ 2 ಕೋಟಿ ಬಜೆಟ್ ಚಿತ್ರ!
'ದಿಲ್ವಾಲೆ' ಚಿತ್ರದ ಬಜೆಟ್ ಬಗ್ಗೆ ಹೇಳುವುದಾದರೆ ಅದನ್ನು 2 ಕೋಟಿ ರೂ.ನಲ್ಲಿ ನಿರ್ಮಿಸಲಾಗಿತ್ತು. ಆದರೆ ಇದರ ಕಲೆಕ್ಷನ್ 12 ಕೋಟಿ ರೂ. ಆಗಿತ್ತು. ಈ ಚಿತ್ರ ಸೂಪರ್ ಹಿಟ್ ಆಗಿ ಜನಮಣ್ಣನೆ ಗಳಿಸಿತು. 1994ರಲ್ಲಿ ಬಿಡುಗಡೆಯಾಗಿದ್ದ ‘ದಿಲ್‌ವಾಲೆ’ ಚಿತ್ರ ತೆರೆಕಂಡು ಇಂದಿಗೆ 29 ವರ್ಷಗಳು ಕಳೆದಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.