Rakul Preet Singh and Jackie Bhagnani Marriage: ಅನೇಕ ಬಾಲಿವುಡ್ ಸೆಲೆಬ್ರಿಟಿಗಳು 2024 ರಲ್ಲಿ ಮದುವೆಯಾಗಲು ಸಜ್ಜಾಗಿದ್ದಾರೆ. ಅಮೀರ್ ಖಾನ್ ಪುತ್ರಿ ಇರಾ ಖಾನ್ ತನ್ನ ಬಾಯ್ ಫ್ರೆಂಡ್ ನೂಪುರ್ ಶಿಖರೆ ಜೊತೆ ಜನವರಿ ಮೊದಲ ವಾರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವರ್ಷದ ಕೊನೆ ದಿನ ದಾಖಲೆಯ ಮದ್ಯ ಮಾರಾಟ: ಒಂದೇ ದಿನದಲ್ಲಿ 18.85 ಕೋಟಿ ರೂ. ವಹಿವಾಟು


ಇದೀಗ ಮತ್ತೊಂದು ಜೋಡಿ ಇದೇ ವರ್ಷ ಮದುವೆಯಾಗುವ ಸುದ್ದಿ ಮುನ್ನೆಲೆಗೆ ಬಂದಿದೆ. ಈ ಜೋಡಿ ಬೇರೆ ಯಾರೂ ಅಲ್ಲ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ. ವರದಿಗಳ ಪ್ರಕಾರ, ರಾಕುಲ್ ಮತ್ತು ಜಾಕಿ ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಮದುವೆಯ ದಿನಾಂಕವೂ ಬಹಿರಂಗವಾಗಿದೆ.


ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಫೆಬ್ರವರಿಯಲ್ಲಿ ರಾಕುಲ್ ಮತ್ತು ಜಾಕಿ ಗೋವಾದಲ್ಲಿ ವಿವಾಹವಾಗಲಿದ್ದಾರೆ. ವರದಿಯ ಪ್ರಕಾರ, ರಾಕುಲ್ ಮತ್ತು ಜಾಕಿ ಫೆಬ್ರವರಿ 22 ರಂದು ಗೋವಾದಲ್ಲಿ ಮದುವೆಯಾಗುತ್ತಿದ್ದಾರೆ.


ಈ ವಿವಾಹ ಕಾರ್ಯಕ್ರಮದಲ್ಲಿ ಖಾಸಗಿ ವ್ಯಕ್ತಿಗಳು ಮಾತ್ರ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆ, ರಾಕುಲ್ ಮತ್ತು ಜಾಕಿ ಮದುವೆಯ ದಿನಾಂಕದ ಬಗ್ಗೆ ವದಂತಿಗಳು ಹುಟ್ಟಿಕೊಂಡಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಇದೇ ಸುದ್ದಿ ಎಲ್ಲರ ಗಮನ ಸೆಳೆದಿತ್ತು. ಆದರೆ ನಂತರ ನಟಿ ಅದನ್ನು ನಿರಾಕರಿಸಿದ್ದರು.


ಇದನ್ನೂ ಓದಿ: “ಆಕೆ ನನ್ನನ್ನು ಸಾಯಿಸಿತ್ತಾಳೆ”- ಪತ್ನಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕೆಎಲ್ ರಾಹುಲ್


ಇನ್ನು ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ 2021 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ