Ram Charan Daughter Name: ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ತಮ್ಮ ಮಗಳಿಗೆ ಹೆಸರಿಟ್ಟಿದ್ದಾರೆ. ಶುಕ್ರವಾರ ನಾಮಕರಣ ಸಮಾರಂಭದ ನಂತರ, ಅವರು ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಹೆಸರನ್ನು ಬಹಿರಂಗಪಡಿಸಿದ್ದಾರೆ.  ರಾಮ್ ಚರಣ್ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ, ಅವರು ಮಗಳ ಹೆಸರು ಮತ್ತು ಅದರ ಅರ್ಥವನ್ನು ಬಹಿರಂಗಪಡಿಸಿದ್ದಾರೆ. ಹೆಸರು ತುಂಬಾ ಸುಂದರವಾಗಿದೆ, ಈ ಹೆಸರಿನ ಅರ್ಥ ಕೂಡ ಚೆನ್ನಾಗಿದೆ.


COMMERCIAL BREAK
SCROLL TO CONTINUE READING

ರಾಮ್ ಚರಣ್ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗಳಿಗೆ ʻಕ್ಲಿನ್ ಕಾರಾʼ ಎಂದು ಹೆಸರಿಟ್ಟಿದ್ದಾರೆ. ಈ ಹೆಸರನ್ನು ಲಲಿತಾ ಸಹಸ್ತ್ರನಾಮದಿಂದ ಬಂದಿದೆ ಎಂದು ಹೇಳಿದ್ದಾರೆ. ಅಂದರೆ ಶಕ್ತಿಯ ಸಂಕೇತ. ಇದು ಆಧ್ಯಾತ್ಮಿಕತೆಗೆ ಸಂಬಂಧಿಸಿದೆ. 


ಇದನ್ನೂ ಓದಿ: ರಾಮ್‌ಚರಣ ಮಗಳ ನಾಮಕರಣಕ್ಕೆ 24 ಕ್ಯಾರೆಟ್‌ ಬಂಗಾರದ ತೊಟ್ಟಿಲು ಗಿಪ್ಟ್‌ ನೀಡಿದ ಅಂಬಾನಿ..!


ಹೆಸರು ಬಹಿರಂಗವಾದ ತಕ್ಷಣ, ಸೂಪರ್‌ಸ್ಟಾರ್ ಜೋಡಿಯನ್ನು ಎಲ್ಲರೂ ಅಭಿನಂದಿಸುತ್ತಿದ್ದಾರೆ. ಎಲ್ಲರೂ ಈ ಹೆಸರನ್ನು ಮೆಚ್ಚಿದ್ದಾರೆ. ಜನರು ರಾಮ್ ಚರಣ್ ಮತ್ತು ಉಪಾಸನಾಗೆ ಶುಭ ಹಾರೈಸಿದರು. ನಾಮಕರಣದ ಚಿತ್ರಗಳಲ್ಲಿ ಇಡೀ ಕುಟುಂಬವನ್ನು ಒಟ್ಟಿಗೆ ನೋಡಬಹುದಾಗಿದೆ. 


 


45 ಸೆಕೆಂಡ್ ಜಾಹೀರಾತಿಗೆ ರಾಜಮೌಳಿ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?


ಕಳೆದ ಒಂದು ವರ್ಷ ರಾಮ್ ಚರಣ್ ಗೆ ಅತ್ಯಂತ ವಿಶೇಷವಾಗಿತ್ತು. ಅವರ 2022 ರಲ್ಲಿ RRR ಬಿಡುಗಡೆಯಾಗಿ, ಸೂಪರ್‌ ಹಿಟ್‌ ಆಯಿತು. ಇದು ಅವರನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧರನ್ನಾಗಿ ಮಾಡಿತು. ಇದಾದ ನಂತರ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್‌ ಪಡೆದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.