Ram Charan Baths Baby Elephant: ಟಾಲಿವುಡ್‌ ಮೆಗಾ ಪವರ್‌ ಸ್ಟಾರ್ ನಟ ರಾಮ್ ಚರಣ್  ಹಾಗೂ ಅವರ ಮಡದಿ ಉಪಾಸನಾ ಕೊನಿಡೆಲಾ ಥೈಲ್ಯಾಂಡ್‌ನ ಕೊ ಸಮುಯಿಗೆ ತಮ್ಮ ಮಗಳು ಕ್ಲಿನ್ ಕಾರಾ ಹಾಗೂ ಮುದ್ದಿನ ನಾಯಿಮರಿ ರೈಮ್ ಜೊತೆಗೆ ಟ್ರಿಪ್‌ಗೆ ಹೋಗಿದ್ದಾರೆ. ಥೈಲ್ಯಾಂಡ್‌ನಲ್ಲಿ ನಟ ರಾಮ್ ಚರಣ್, ಉಪಾಸನಾ ಮತ್ತು ಕ್ಲಿನ್ ಕಾರಾ ಆನೆ ಪಾರುಗಾಣಿಕಾ ಶಿಬಿರದಲ್ಲಿ ಆನೆಮರಿಗೆ ಸ್ನಾನವನ್ನು ಮಾಡಿಸಿದ್ದಾರೆ.


COMMERCIAL BREAK
SCROLL TO CONTINUE READING

ನಟ ರಾಮ್‌ ಚರಣ್‌ ಆನೆ ಮರಿಗೆ ಪೈಪ್‌ ಹಿಡಿದುಕೊಂಡು ನೀರು ಬಿಡುತ್ತಿದ್ದರೇ, ಉಪಸನಾ ಒಂದು ಕೈಯಲ್ಲಿ ತಮ್ಮ ಪುತ್ರಿಯನ್ನು ಎತ್ತಿಕೊಂಡು ಮತ್ತೊಂದು ಕೈಯಲ್ಲಿ ಆನೆಮರಿಯ ಮೈಯನ್ನು ಉಜ್ಜುತ್ತಿದ್ದಾರೆ. ಈ ಫೋಟೋವನ್ನು ರೈಮ್ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ಗೆ  ಇಪ್ಪತ್ತೆಂಟು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿವೆ.


 ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣದ "O2" ರಿಲೀಸ್‌ ಡೇಟ್‌ ಫಿಕ್ಸ್!!  


ಆನೆಮರಿಗೆ ಸ್ನಾನ ಮಾಡಿಸುತ್ತಿರುವ ಪೋಸ್ಟ್‌ ಕ್ಯಾಪ್ಶನ್‌ನಲ್ಲಿ "ಪಾರುಗಾಣಿಕಾ ಶಿಬಿರದಲ್ಲಿ ಆನೆ ರಕ್ಷಣೆಯ ಬಗ್ಗೆ ಕಲಿಯುವುದು ಇಷ್ಟವಾಯಿತು. ಅದ್ಭುತ ಆರೈಕೆ ಮತ್ತು ನನ್ನ ಹೊಸ ಥಾಯ್ ಕಟ್‌ಗಾಗಿ ಪುಯಿ ಮತ್ತು ಗೆಟ್ಟಿ ಅವರಿಗೆ ದೊಡ್ಡ ಧನ್ಯವಾದಗಳು" ಎಂದು ರೈಮ್‌ ಅಭಿಪ್ರಾಯ ಹೇಳಿರುವಂತೆ ಬರೆದಿದ್ದಾರೆ. 


ಕಳೆದ ತಿಂಗಳು ಕೂಡ ರಾಮ್‌ ಚರಣ್‌ ತನ್ನ ಕುಟುಂಬದೊಂದಿಗೆ ಆಂಧ್ರಪ್ರದೇಶದ ವೈಜಾಗ್‌ನ ಬೀಚ್‌ನಲ್ಲಿ ಮೋಜು ಮಸ್ತಿಯನ್ನು ಮಾಡಿದ್ದಾರೆ. ಗೇಮ್ ಚೇಂಜರ್‌ ಸಿನಿಮಾ ಶೂಟಿಂಗ್‌ ಕರಾವಳಿ ತಾಣದಲ್ಲಿ ನಡೆದಿದ್ದಾಗ, ಅಲ್ಲಿಗೆ ಈ ನಟ ತನ್ನ ಪತ್ನಿ ಹಾಗೂ ಮಗಳನ್ನು ಕರೆಸಿಕೊಂಡಿದ್ದರು. ಆ ಫೋಟೋ ಹಾಗೂ ವಿಡಿಯೋ ಸಹ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿತ್ತು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.