ಪವನ್ ಕಲ್ಯಾಣ್ ವಿರೋಚಿತ ಗೆಲುವಿಗೆ ಈ ಅದೃಷ್ಟ ದೇವತೆಯೇ ಕಾರಣ..! ಯಾರದು ಗೊತ್ತೆ..?
Ram Charan : ಲೋಕಸಭೆ ಮತ್ತು ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ ಮುಖ್ಯಸ್ಥ, ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಭರ್ಜರಿ ಜಯ ಗಳಿಸಿದ್ದಾರೆ. ಇದರ ಬೆನ್ನಲ್ಲೆ, ಮೆಗಾ ಕುಟುಂಬದಲ್ಲಿ ಸಾಲು ಸಾಲು ಯಶಸ್ಸು ಸಿಗುತ್ತಿರುವ ವಿಚಾರಕ್ಕೆ ಸಂಬಂಧಿಸಿ ಹೊಸ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ..
Ram Charan daughter : ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಅದ್ಬುತ ಗೆಲುವು ಮೆಗಾ ಫ್ಯಾಮಿಲಿಗೆ ಮತ್ತು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಸುಮಾರು 14 ವರ್ಷಗಳ ಕಾಲ ಹಲವು ಅವಮಾನಗಳನ್ನು ಎದುರಿಸಿ.. ಪಕ್ಷವನ್ನು ತಳ ಮಟ್ಟದಿಂದ ಕಟ್ಟಿಕೊಂಡು ಬಂದಿರುವ ಪವರ್.. ಈ ಬಾರಿ ಎಲ್ಲಾ ಕಡೆ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಇದೀಗ ಮೆಗಾ ಕುಟುಂಬದಲ್ಲಿ ಜರುಗುತ್ತಿರುವ ಸಾಲು ಸಾಲು ಯಶಸ್ಸಿನ ಕುರಿತು ಪ್ರಬಲ ಚರ್ಚೆ ನಡೆಯುತ್ತಿದೆ.
ಮೆಗಾ ಹೀರೋಗಳಿಗೆಲ್ಲ ಶುಭಶಕುನ ಪ್ರಾರಂಭವಾಗಿದೆ. ಕ್ಲಿಂಕಾರ ಹುಟ್ಟಿದ ನಂತರ ಚಿರು ಫ್ಯಾಮಿಲಿಯಲ್ಲಿ ಎಲ್ಲವೂ ಕೂಡಿ ಬರುತ್ತಿದೆ ಎನ್ನಲಾಗುತ್ತಿದೆ. ಸದ್ಯ, ಪವನ್ ಕಲ್ಯಾಣ್ ಜಗನ್ ಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಎಪಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ, ಕಳೆದ ಕೆಲವು ತಿಂಗಳುಗಳ ಹಿಂದೆ ಮೆಗಾಸ್ಟಾರ್ ಚಿರಂಜೀವಿಗೆ ಪದ್ಮವಿಭೂಷಣ ಗೌರವ, ರಾಮ್ ಚರಣ್‌ಗೆ ಆಸ್ಕರ್ ಗೌರವ ದೊರಕಿದೆ... ಇದೀಗ ಇದೆಲ್ಲಕ್ಕೆ ಕಾರಣ ಕ್ಲಿಂಕಾರ ಎಂಬ ಮಾತು ಕೇಳಿ ಬರುತ್ತಿದೆ..
ಇದನ್ನೂ ಓದಿ:ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?
ಹೌದು.. ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಕ್ಲಿಂಕಾರ ಹುಟ್ಟಿದಾಗಿನಿಂದಲೂ ಮೆಗಾ ಫ್ಯಾಮಿಲಿಯಿಂದ ಗುಡ್ ಟೈಮ್ ಪ್ರಾರಂಭವಾಗಿದೆ. ಮೆಗಾ ಅಲ್ಲು ಫ್ಯಾಮಿಲಿಗಳ ನಡುವೆ ಗ್ಯಾಪ್ ಇದೆ ಎಂಬ ಮಾತು ಕೇಳಿ ಬರುತ್ತಿತ್ತು.. ಎಲ್ಲರೂ ಸೇರಿ ಹಬ್ಬಗಳನ್ನು ಆಚರಿಸಿ ಈ ವಂದತಿಗೆ ಬ್ರೇಕ್ ಹಾಕಿದ್ದರು. ಸಧ್ಯ ಇದಕ್ಕೆಲ್ಲಾ ಕಾರಣ ಮೆಗಾ ಮೊಮ್ಮಗಳು ಕ್ಲಿಂಕಾರ ಎನ್ನುತ್ತಾರೆ ಅಭಿಮಾನಿಗಳು.
ಕ್ಲಿಂಕಾರ ಹುಟ್ಟಿದ ನಂತರ ಮೆಗಾ ಪವರ್ ಸ್ಟಾರ್ ಅಭಿನಯದ RRR ಚಿತ್ರಕ್ಕೆ ಎರಡು ಆಸ್ಕರ್ ಸಿಕ್ಕಿದೆ. ತೆಲುಗು ಚಿತ್ರವೊಂದು ಆಸ್ಕರ್ ಗೆದ್ದಿರುವುದು ಇದೇ ಮೊದಲು.. ಮೆಗಾ ಫ್ಯಾಮಿಲಿ ಹೀರೋ ಅಲ್ಲು ಅರ್ಜುನ್ ಕೂಡ ಪುಷ್ಪ ಚಿತ್ರದ ಮೂಲಕ ಬೆಸ್ಟ್ ಹೀರೋ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ರಾಮ್ ಚರಣ್ ವ್ಯಾಪಾರದಲ್ಲೂ ಸಾಕಷ್ಟು ಲಾಭ ಗಳಿಸುತ್ತಿದ್ದಾರೆ. ಇವೇಲ್ಲವನ್ನು ನೋಡಿದ ನೆಟ್ಟಿಗರು ಕ್ಲಿಂಕಾರ ಮೆಗಾ ಕುಟುಂಬದ ಅದೃಷ್ಟ ದೇವತೆ ಎನ್ನುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.