ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?

Anushka Sharma Education: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಓದಿದ್ದು ಕೇವಲ 12ನೇ ತರಗತಿ. ಆದರೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಪದವೀಧರೆಯಾಗಿದ್ದು, ಶಿಕ್ಷಣದಲ್ಲಿ ಟಾಪರ್ ಆಗಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಓದಿದ್ದು ಕೇವಲ 12ನೇ ತರಗತಿ. ಆದರೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಪದವೀಧರೆಯಾಗಿದ್ದು, ಶಿಕ್ಷಣದಲ್ಲಿ ಟಾಪರ್ ಆಗಿದ್ದರು.

2 /7

ನಾವಿಂದು ಈ ವರದಿಯಲ್ಲಿ ಅನುಷ್ಕಾ ಶರ್ಮಾ ವಿದ್ಯಾರ್ಹತೆ ಮತ್ತು ಅವರು ಓದಿರುವ ಬೆಂಗಳೂರಿನ ಪ್ರಖ್ಯಾತ ಶಾಲೆಯೊಂದರ ಬಗ್ಗೆ ಮಾಹಿತಿ ನೀಡಲಿದ್ದೇವೆ,

3 /7

ನಟಿ ಅನುಷ್ಕಾ ಶರ್ಮಾ ಬಾಲಿವುಡ್’ನಲ್ಲಿ ತನ್ನದೇ ವಿಶೇಷ ಗುರುತನ್ನು ಸೃಷ್ಟಿಸಿದ್ದಾರೆ. ಬಾಲಿವುಡ್‌ ಹಿನ್ನಲೆ ಹೊಂದಿಲ್ಲದಿದ್ದರೂ, ತನ್ನ ಪ್ರತಿಭೆಯಿಂದಲೇ ಜನಮನ ಗೆದ್ದಿರುವ ಈಕೆ ಮೊದಲು ನಟಿಯಾಗಬೇಕು ಎಂದು ಬಯಸಿರಲಿಲ್ಲವಂತೆ. ಈ ಬಗ್ಗೆ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.

4 /7

ಅನುಷ್ಕಾ ಶರ್ಮಾ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 1 ಮೇ 1988 ರಂದು ಜನಿಸಿದರು. ಅವರ ತಂದೆ ಕುಮಾರ್ ಶರ್ಮಾ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ತಾಯಿ ಆಶಿಮಾ ಶರ್ಮಾ ಗೃಹಿಣಿ. ಸಹೋದರ ಕರ್ಣೇಶ್ ಶರ್ಮಾ ಮರ್ಚೆಂಟ್ ನೇವಿಯಲ್ಲಿದ್ದರು ಮತ್ತು ಈಗ ಚಲನಚಿತ್ರ ನಿರ್ಮಾಪಕರಾಗಿದ್ದಾರೆ. ಸೇನೆಯ ಹಿನ್ನೆಲೆಯಿಂದ ಬಂದ ಅನುಷ್ಕಾ ಅವರ ಬಾಲ್ಯ ಸಾಕಷ್ಟು ಶಿಸ್ತಿನಲ್ಲಿಯೇ ಕಳೆದಿತ್ತು.

5 /7

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ಶಾಲಾ ಶಿಕ್ಷಣವನ್ನು ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಟಾಪರ್ ಆಗಿದ್ದರು.

6 /7

ಅನುಷ್ಕಾ ಶರ್ಮಾ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಓದಿರುವ ಅವರು, ಕಾಲೇಜಿನಲ್ಲಿಯೂ ಟಾಪರ್ ಆಗಿದ್ದರು. ಅನುಷ್ಕಾ ಶರ್ಮಾ ಕಾಲೇಜು ಮುಗಿಸಿದ ನಂತರ ಮಾಡೆಲಿಂಗ್ ಕಡೆಗೆ ಗಮನ ಹರಿಸಲು ಬಯಸಿದ್ದರು.

7 /7

ಪದವಿ ಮುಗಿದ ನಂತರ ಅನುಷ್ಕಾ ಶರ್ಮಾ ಮುಂಬೈಗೆ ತೆರಳಿ, ಅಲ್ಲಿ ಮಾಡೆಲಿಂಗ್‌’ನಲ್ಲಿ ವೃತ್ತಿಜೀವನ ಮಾಡಲು ಎಲೈಟ್ ಮಾಡೆಲ್ ಮ್ಯಾನೇಜ್‌ಮೆಂಟ್‌ಗೆ ಸೇರಿದರು. 2007 ರಲ್ಲಿ ಲ್ಯಾಕ್ಮೆ ಫ್ಯಾಶನ್ ವೀಕ್‌’ನಲ್ಲಿ ಪಾದಾರ್ಪಣೆ ಮಾಡಿದ ಅವರು, ಅನೇಕ ಬ್ರ್ಯಾಂಡ್‌’ಗಳಿಂದ ಆಫರ್’ಗಳನ್ನು ಪಡೆದರು. ಅದಾದ ಬಳಿಕ ನಟನಾ ಶಾಲೆಗೆ ಪ್ರವೇಶ ಪಡೆದ ಅವರು, ಆಡಿಷನ್ ಕೂಡ ನೀಡಲು ಪ್ರಾರಂಭಿಸಿದರು.