Ram Charan: ವಿಮಾನದಲ್ಲಿ ಸುಸ್ತಾಗಿ ಮಲಗಿದ್ದ ಮಡದಿ ಕಾಲು ಒತ್ತಿದ ಗೇಮ್ ಚೇಂಜರ್: ವೈರಲ್ ವಿಡಿಯೋ !!
Ram Charan Viral Video: ಟಾಲಿವುಡ್ ಜೂನಿಯರ್ ಮೆಗಾಸ್ಟಾರ್ ರಾಮ್ ಚರಣ್ ಇತ್ತೀಚೆಗೆ ವಿಮಾನವೊಂದರಲ್ಲಿ ತಮ್ ಪತ್ನಿ ಉಪಸನಾ ಕೊನಿಡೇಲಾ ಕಾಲನ್ನು ಮಸಾಜ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
Ram Charan Massages His Wifeʼs Feet: ಟಾಲಿವುಡ್ ಮೋಸ್ಟ್ ಕ್ಯೂಟ್ ಕಪಲ್‌ಗಳಲ್ಲಿ ಜೂನಿಯರ್ ಮೆಗಾಸ್ಟಾರ್ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಸನಾ ಕೊನಿಡೇಲಾ ಕೂಡ ಹೌದು. ಈ ಜೋಡಿ ಮುದ್ದಾಗಿ ಮಾತ್ರವಿಲ್ಲದೇ, ತುಂಬಾ ಸರಳತೆಯಿಂದ ಜೀವಿಸಿತ್ತಿರುವ ದಂಪತಿಯೂ ಸಹ. ಇತ್ತೀಚೆಗೆ ಈ ಜೋಡಿಯ ಸಿಂಪ್ಲಿಸಿಟಿಯನ್ನು ರಿವೀಲ್ ಮಾಡುವ ವಿಡಿಯೋ ಕ್ಲಿಪ್ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಹೌದು... ಎಷ್ಟೇ ದೊಡ್ಡ ಹೀರೋ ಆಗಲಿ, ಸೂಪರ್ ಸ್ಟಾರ್‌ಗಳೇ ಆಗಲಿ, ಪತ್ನಿ ಎಂದು ಬಂದಾಗ ಆತ ಪತಿಯೇ. ಆದರೆ ಮೆಗಾಪುತ್ರ ರಾಮ್‌ಚರಣ್ ಹಾಗಲ್ಲ. ನಟ ರಾಮ್ ಚರಣ್ ತಾವು ಎಷ್ಟೇ ದೊಡ್ಡ ಸ್ಟಾರ್ ಆದರೂ ಹೆಂಡತಿಯ ಕಾಲನ್ನು ಒತ್ತುತ್ತಾರೆ. ಇತ್ತೀಚೆಗೆ ವಿಮಾನದಲ್ಲಿ ರಾಮ್ ಚರಣ್ ಮಡದಿ ಉಪಸನಾ ಕೊನಿಡೇಲಾ ಕಾಲಿಗೆ ಮಸಾಜ್ ಮಾಡುತ್ತಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Saanvi Sudeep: ಸುದೀಪ್ ಪುತ್ರಿಯ ನೆಚ್ಚಿನ ನಟ ಈ ಸೌತ್ ಸೂಪರ್ ಸ್ಟಾರ್!
ಪ್ಯಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ ಪ್ರೈವೇಟ್ ಫೈಟ್‌ನಲ್ಲಿ ಹೆಂಡತಿ ಉಪಸನಾ ಕೊನಿಡೇಲಾ ಪಾದಗಳನ್ನು ಹಿಡಿದು ಮಸಾಜ್ ಮಾಡುತ್ತಿದ್ದಾರೆ. ಆಗ ಈಕೆ ಮಗುವಿನಂತೆ ಮಲಗಿ ನಿದ್ರಿಸುತ್ತಿದ್ದರು. ನಟ ರಾಮ್ ಚರಣ್ ತಮ್ಮ ಪತ್ನಿ ಉಪಾಸನಾ ಜೊತೆಗೆ ಅಂಬಾನಿ ಕುಟುಂಬದ ಮದುವೆಯ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಜೋಡಿಯಾಗಿ ತೆರಳಿದ್ದರು.
ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದಲ್ಲಿ ನಟ ರಾಮ್ ಚರಣ್ ಉಪಸನಾ ಇನ್ನೂ ಅನೇಕ ಸೆಲೆಬ್ರೆಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮದುವೆಯ ಪೂರ್ವದ ಶಾಸ್ತ್ರಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಪಾಲುಗೊಂಡ ನಟ ರಾಮ್ ಚರಣ್ ಉಪಾಸನಾ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಾಗಲೇ ಈ ವಿಡಿಯೋ ಸದ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.