ನವದೆಹಲಿ: 80 ಅಥವಾ 90 ರ ದಶಕದ ಟಿವಿ ಕಾರ್ಯಕ್ರಮಗಳಲ್ಲಿ ಒಂದಾದ ರಾಮಾನಂದ್ ಸಾಗರ್  ನಿರ್ದೇಶನದ  'ರಾಮಾಯಣ' ಮಹಾಕಾವ್ಯವನ್ನ ಕಳೆದ ವರ್ಷ ಟಿವಿಯಲ್ಲಿ ಮರುಪ್ರಸಾರ ಮಾಡಲಾಗಿತ್ತು ಇದನ್ನು ಪ್ರೇಕ್ಷಕರು ನೋಡಿ ಆನಂದಿಸಿದ್ದರು. ಈಗ ಮತ್ತೆ ಸಾರ್ವಜನಿಕರ ಒತ್ತಾಯದ ಮೇರೆಗೆ 'ರಾಮಾಯಣ' ಧಾರಾವಾಹಿಯನ್ನ ಮರು ಟೆಲಿಕಾಸ್ಟ್ ಮುಂದಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

ಟಿವಿಯಲ್ಲಿ ಮತ್ತೆ ಪ್ರಸಾರವಾಗಲಿದೆ 'ರಾಮಾಯಣ' : 
ಈ ಕಾರ್ಯಕ್ರಮವನ್ನು ಮತ್ತೊಮ್ಮೆ ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಕಳೆದ ವರ್ಷ ಕೊರೋನಾ(Corona) ಮಧ್ಯೆ ವೀಕ್ಷಕರು ಮಹಾಕಾವ್ಯವನ್ನು ಸಣ್ಣ ಪರದೆಯ ಮೇಲೆ ಪ್ರಸಾರ ಮಾಡಲು ಒತ್ತಾಯಿಸಿದರು. ಕುಟುಂಬದೊಂದಿಗೆ ಇಂತಹ ಪೌರಾಣಿಕ ಪ್ರದರ್ಶನವನ್ನು ವೀಕ್ಷಿಸಲು ಇದು ಮತ್ತೊಮ್ಮೆ ಸುಸಮಯವೆಂದು ಹೇಳಿದ್ದಾರೆ.


ಇದನ್ನೂ ಓದಿ- Virat-Anushka Expensive Things : ಕೊಹ್ಲಿ-ಅನುಷ್ಕಾ ಬಳಿ ಇರುವ ದುಬಾರಿ ವಸ್ತುಗಳು ಯಾವವು ಮತ್ತೆ ಎಷ್ಟಿವೆ ಗೊತ್ತಾ?


ರಾಮಾನಂದ್ ಸಾಗರ್ ಅವರ 'ರಾಮಾಯಣ'(Ramayan)ವು ಈ ಭಾರಿ 'ಸ್ಟಾರ್ ಭಾರತ್' ಟಿವಿ ಚಾನಲ್ ನಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ ಎಂದು ತನ್ನ ಅಧಿಕೃತ ಟ್ವಿಟರ್ ನಲ್ಲಿ ವಿವರಗಳನ್ನು ಟ್ವೀಟ್ ಮಾಡಿದೆ. 


Video : ತಂದೆಯ ಹೆಸರು ಕೇಳುತ್ತಲೇ ಬಿಕ್ಕಿ ಬಿಕ್ಕಿ ಅತ್ತ ನಟ ಇರ್ಫಾನ್ ಖಾನ್ ಪುತ್ರ


ಕಳೆದ ವರ್ಷ, ರಾಮಾಯಣ, ಮಹಾಭಾರತ(Mahabharat), ಓಂ ನಮ ಶಿವಾಯ ಮತ್ತು ವಿಷ್ಣು ಪುರಾಣದಂತಹ ಮಹಾಕಾವ್ಯಗಳು ಆ ಅವಧಿಯಲ್ಲಿ ಮರು ಪ್ರಸಾರ ಮಾಡಲಾಗಿತ್ತು.


ಇದನ್ನೂ ಓದಿ- ತಮನ್ನಾ ಭಾಟಿಯಾ ಫೋಟೋದಲ್ಲಿ ವಿರಾಟ್ ಕೊಹ್ಲಿ..? ಫ್ಯಾನ್ಸ್ ಹೇಳಿದ್ದೇನು ಗೊತ್ತಾ?


ರಾಮಾನಂದ್ ಸಾಗರ್ ಅವರ 'ರಾಮಾಯಣ' ದೂರದರ್ಶನ (DD) ಯಲ್ಲಿ ಮರು ಪ್ರಸಾರ ಮಾಡಿದ ನಂತರ ಟಿಆರ್‌ಪಿಯಲ್ಲಿ ಇತಿಹಾಸವನ್ನು ಸೃಷ್ಟಿಸಿತು, ಇದುವರೆಗೆ ವಿಶ್ವದಲ್ಲೇ ಅತೀ ಹೆಚ್ಚು ಟಿವಿ ವೀಕ್ಷಿಸಿದ ಟಿವಿ ಶೋಗಳಲ್ಲಿ ಇದಾಗಿದೆ. ಚಾನೆಲ್‌ಗೆ ಅತಿ ಹೆಚ್ಚು ಟಿಆರ್‌ಪಿ ನೀಡಿತು. ಸದ್ಯ ಮತ್ತೆ ಪ್ರಸಾರವಾಗುತ್ತಿರುವುದರಿಂದ ಜನರ ಪ್ರತಿ ಕ್ರಿಯೆ ಹೇಗಿರಡಲಿದೆ ಎಂಬುವುದನ್ನು ಕಾಡು ನೋಡಬೇಕಾಗಿದೆ.


ಇದನ್ನೂ ಓದಿ- MAMI ಅಧ್ಯಕ್ಷೆ ಸ್ಥಾನಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ರಾಜೀನಾಮೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.