Virat-Anushka Expensive Things : ಕೊಹ್ಲಿ-ಅನುಷ್ಕಾ ಬಳಿ ಇರುವ ದುಬಾರಿ ವಸ್ತುಗಳು ಯಾವವು ಮತ್ತೆ ಎಷ್ಟಿವೆ ಗೊತ್ತಾ?

ಮುಂಬೈನ ಅತೀ ದುಂಬರಿ ಏರಿಯಾ ಅಂಧೇರಿಯಲ್ಲಿ ಅನುಷ್ಕಾ ಶರ್ಮಾ 3 ಬಿಎಚ್‌ಕೆ ಫ್ಲಾಟ್

Last Updated : Apr 13, 2021, 04:40 PM IST
  • ರೋಲೆಕ್ಸ್ ಕಾಸ್ಮೊಗ್ರಾಫ್ ಡೇಟೋನಾ ರೇನ್ ಬೋ ಎವೆರೋಸ್ ಗೋಲ್ಡ್ ವಾಚ್
  • ಅನುಷ್ಕಾ ಸ್ವಂತ ಫ್ಯಾಷನ್ ಲೇಬಲ್ ಕಂಪನಿ
  • ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯಾಗ್ರಫಿ ಕಾರ್
Virat-Anushka Expensive Things : ಕೊಹ್ಲಿ-ಅನುಷ್ಕಾ ಬಳಿ ಇರುವ ದುಬಾರಿ ವಸ್ತುಗಳು ಯಾವವು ಮತ್ತೆ ಎಷ್ಟಿವೆ ಗೊತ್ತಾ?

ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈ ದಂಪತಿಗಳಿಗೆ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಇಬ್ಬರೂ ತಮ್ಮ ವೃತ್ತಿ ಜೀವನದಲ್ಲಿ ಬಹಳ ಯಶಸ್ವಿ ಕಂಡಿದ್ದಾರೆ. ಇದರಿಂದ ಹಣ, ಆಸ್ತಿ, ಗೌರವ ಎಲ್ಲವನ್ನು ಗಳಿಸಿದ್ದಾರೆ. ಇವರ ಒಡೆತನದ ಕೆಲವು ಅತ್ಯಂತ ದುಬಾರಿ ವಸ್ತುಗಳನ್ನು ನೋಡೋಣ ಬನ್ನಿ..

1. ರೋಲೆಕ್ಸ್ ಕಾಸ್ಮೊಗ್ರಾಫ್ ಡೇಟೋನಾ ರೇನ್ ಬೋ ಎವೆರೋಸ್ ಗೋಲ್ಡ್ ವಾಚ್: 

ವಿರಾಟ್ ಕೊಹ್ಲಿ ಲಕ್ಸುರಿ ವಾಚ್ ಗಳನ್ನೂ ಇಷ್ಟಪಡುತ್ತಾರೆ. ಇವರ ಬಳಿ 'ರೋಲೆಕ್ಸ್ ಕಾಸ್ಮೊಗ್ರಾಫ್ ಡೇಟೋನಾ ರೇನ್ ಬೋ ಎವೆರೋಸ್ ಗೋಲ್ಡ್ ವಾಚ್'(Rolex Cosmograph Daytona Rainbow Everose Gold) ನ ಹೊಂದಿದ್ದಾರೆ. ಇದು ಜಗತ್ತಿನ ಅತ್ಯಂತ ದುಬಾರಿ ವಾಚ್ ಗಳಲ್ಲಿ ಒಂದಾಗಿದೆ. ಈ  ದುಬಾರಿ ವಾಚ್‌ ಅನ್ನ 56 ಕತ್ತರಿಸಿದ ವಜ್ರಗಳಿಂದ ಅಲಂಕರಿಸಲಾಗಿದ್ದು, 11 ಬ್ಯಾಗೆಟ್-ಕಟ್ ನೀಲಮಣಿಗಳು ಡಯಲ್‌ನಲ್ಲಿ ಗಂಟೆ ಚಿನ್ನೆಗಳಾಗಿ ಕಾಣಿಸಿಕೊಂಡಿವೆ. ಈ ವಾಚ್‌ನ ಮೌಲ್ಯ 69 ಲಕ್ಷ ರೂ. ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Video : ತಂದೆಯ ಹೆಸರು ಕೇಳುತ್ತಲೇ ಬಿಕ್ಕಿ ಬಿಕ್ಕಿ ಅತ್ತ ನಟ ಇರ್ಫಾನ್ ಖಾನ್ ಪುತ್ರ

2. ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯಾಗ್ರಫಿ ಕಾರ್: 

ಅನುಷ್ಕಾ ಶರ್ಮಾ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯಾಗ್ರಫಿ ಕಾರ್ (ಲಾಂಗ್ ವ್ಹೀಲ್ ಬೇಸ್)ನ(Land Rover Range Rover Autobiography) ಮಾಲೀಕರಾಗಿದ್ದಾರೆ. ಇಂಡಿಯಾ ಟುಡೆ ಪ್ರಕಾರ ಅನುಷ್ಕಾ ಶರ್ಮಾ ಅವರು 2018 ರಲ್ಲಿ ಈ ಕಾರನ್ನು ಖರೀದಿಸಿದ್ದಾರೆ. ಇದರ ಮಾರುಕಟ್ಟೆ ಬೆಲೆ 4 ಕೋಟಿ ರೂ. ಎಂದು ಪ್ರಕಟಿಸಿದೆ.

ಇದನ್ನೂ ಓದಿ- ತಮನ್ನಾ ಭಾಟಿಯಾ ಫೋಟೋದಲ್ಲಿ ವಿರಾಟ್ ಕೊಹ್ಲಿ..? ಫ್ಯಾನ್ಸ್ ಹೇಳಿದ್ದೇನು ಗೊತ್ತಾ?

3. ಬೆಂಟ್ಲೆ ಫ್ಲೈಯಿಂಗ್ ಸ್ಪರ್ ಕಾರ್:

ಕಾರ್ಟೊಕ್ ಪ್ರಕಾರ ವಿರಾಟ್ ಕೊಹ್ಲಿ ಮುಂಬೈಗೆ ಸ್ಥಳಾಂತರಗೊಂಡ ನಂತರ ಬೆಂಟ್ಲೆ ಫ್ಲೈಯಿಂಗ್ ಸ್ಪರ್ ಕಾರನ್ನು(Bentley Flying Spur) ಖರೀದಿಸಿದರು. ಇದು ವಿಶಿಷ್ಟವಾದ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳು, 6.0 ಲೀಟರ್ ಮತ್ತು ಡಬ್ಲ್ಯು 12 ಎಂಜಿನ್ ಹೊಂದಿರುವ ಸೆಡಾನ್ ಮೌಲ್ಯ 3.97 ಕೋಟಿ ರೂ. ಆಗಿದೆ.

ಇದನ್ನೂ ಓದಿ- MAMI ಅಧ್ಯಕ್ಷೆ ಸ್ಥಾನಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ರಾಜೀನಾಮೆ

4. ಆಡಿ RS5 ಕೋಪ್ ಕಾರ್: 

ಆಡಿ ಇಂಡಿಯಾದೊಂದಿಗೆ ವಿರಾಟ್ ಕೊಹ್ಲಿ(Virat Kohli) ಅವರ ಪಾಲುದಾರರಾಗಿದ್ದಾರೆ. ಹಾಗಾಗಿ ಕೊಹ್ಲಿ ವಿವಿಧ ಆಡಿ ಕಾರುಗಳನ್ನು ಬಿಡುಗಡೆ ಮಾಡಿದ್ದಾರೆ. ಅವರು ಸ್ವತಃ ಆಡಿ RS5 ಕೋಪ್ ಕಾರ್ ಸೇರಿದಂತೆ ಇದಕ್ಕಿಂತ ಹೆಚ್ಚು ಆಡಿ ಕಾರ್ ಗಳನ್ನ ಹೊಂದಿದ್ದಾರೆ. ಆಡಿ RS5 ಕೋಪ್ ಕಾರ್ ನ ಮಾರುಕಟ್ಟೆ ಬೆಲೆ 1.10 ಕೋಟಿ ರೂ. ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Babil Khan: ಇರ್ಫಾನ್ ಖಾನ್ ಪುತ್ರನಿಗೆ ಅವಕಾಶ ನೀಡಿದ ಅನುಷ್ಕಾ ಶರ್ಮಾ..!

5. ಮುಂಬೈನಲ್ಲಿ ಒಂದು ಐಷಾರಾಮಿ ಮನೆ: 

ಅನುಷ್ಕಾ ಶರ್ಮಾ(Anushka Sharma) ಮುಂಬೈನ ಐಷಾರಾಮಿ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್ ರ 20 ನೇ ಮಹಡಿಯಲ್ಲಿ ಮೂರು ಫ್ಲ್ಯಾಟ್‌ಗಳನ್ನು ಖರೀದಿಸಿದ್ದಾರೆ. ಅವುಗಳನ್ನ ಕೂಡಿಸಿ ಒಂದು ದೊಡ್ಡ ಅಪಾರ್ಟ್‌ಮೆಂಟ್ ಆಗಿ ಪರಿವರ್ತಿಸಿದ್ದಾರೆ. ಇಂಡಿಯಾ ಟುಡೆ ಪ್ರಕಾರ ಜಾಗವು 6,000 ಚದರ ಅಡಿ ಯಾಗಿದ್ದು. ಇದರ  ಮೌಲ್ಯ 10 ಕೋಟಿ ರೂ. ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Anushka Sharma ಭೇಟಿಯಾಗುವ ಮೊದಲು ಈ ನಟಿಯ ಅಭಿಮಾನಿಯಾಗಿದ್ದರಂತೆ Virat Kohli

6. ಅಂಧೇರಿಯಲ್ಲಿ 3 BHK ಮನೆ: 

ಮುಂಬೈನ ಅತೀ ದುಂಬರಿ ಏರಿಯಾ ಅಂಧೇರಿಯಲ್ಲಿ ಅನುಷ್ಕಾ ಶರ್ಮಾ 3 ಬಿಎಚ್‌ಕೆ ಫ್ಲಾಟ್ ಹೊಂದಿದ್ದಾರೆ. ಯಾಹೂ ನ್ಯೂಸ್ ಪ್ರಕಾರ ಈ ಆಸ್ತಿಯ ಮೌಲ್ಯ 4 ಕೋಟಿ ರೂ. ಎಂದು ಹೇಳಾಗುತ್ತಿದೆ.

ಇದನ್ನೂ ಓದಿ- Viral video : ನಡೆದೇ ಹೋಯಿತಾ ಗಾಯಕ ರಾಹುಲ್ ವೈದ್ಯ, ದಿಶಾ ಪರ್ಮಾರ್ ವಿವಾಹ ..!

7. 34 ಕೋಟಿ ರೂ.  ಐಷಾರಾಮಿ ಮನೆ: 

ಸಧ್ಯ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು 34 ಕೋಟಿ ರೂ.ಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ, ಇದು 7,171 ಚದರ ಅಡಿ ವಿಸ್ತೀರ್ಣದಲ್ಲಿದೆ.

8. ದುಬಾರಿ ಆಫೀಸ್ ಸ್ಪೇಸ್: 

ಅನುಷ್ಕಾ ತನ್ನ ಒಡೆತನದಲ್ಲಿ ಪ್ರೊಡಕ್ಷನ್ ಹೌಸ್ ಕ್ಲೀನ್ ಸ್ಲೇಟ್ ಫಿಲ್ಮ್ಜ್ ಅನ್ನು ನಡೆಸುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಅವರು ದುಬಾರಿ ಆಫೀಸ್ ಸ್ಪೇಸ್ ಅನ್ನು ಖರೀದಿಸಿದ್ದಾರೆ. ಯಾಹೂ ನ್ಯೂಸ್ ಪ್ರಕಾರ ಕಚೇರಿಯ ಬೆಲೆ ಸುಮಾರು 4.5 ಕೋಟಿ ರೂ. ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Janhvi Kapoor Hot Photos: 'ಬಿಕಿನಿ ಫೋಟೋ ಶೇರ್' ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನ್ವಿ ಕಪೂರ್!

9. ದೆಹಲಿಯಲ್ಲಿ ವಿಸ್ತಾರವಾದ ಬಂಗಲೆ: 

ವಿರಾಟ್ ಮತ್ತು ಅನುಷ್ಕಾ ಕೂಡ ಗುರುಗ್ರಾಮದಲ್ಲಿ ಬೃಹತ್ ಬಂಗಲೆಯೊಂದನ್ನ ಹೊಂದಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಈ ಐಷಾರಾಮಿ ಬಂಗಲೆಯ ಮೌಲ್ಯ ಒಟ್ಟು 80 ಕೋಟಿ ರೂ. ಇದೆ.

ಇದನ್ನೂ ಓದಿ- ವೈವಾಹಿಕ ವಿವಾದ ; ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೊಟ್ಟೂರು ..!

10. ಅನುಷ್ಕಾ ಸ್ವಂತ ಫ್ಯಾಷನ್ ಲೇಬಲ್ ಕಂಪನಿ: 

ಅನುಷ್ಕಾತನ್ನ ಫ್ಯಾಶನ್ ಲೇಬಲ್ ನುಶ್ ಎಂಬ ಕಂಪೆನಿಯನ್ನ ಹೊಂದಿದ್ದಾರೆ. ಇದು 2017 ರಲ್ಲಿ ಬಿಡುಗಡೆ ಮಾಡಿದರು. ಈ ಬ್ರಾಂಡ್‌ನ ಮೌಲ್ಯ 65 ಕೋಟಿ ರೂ. ಎಂದು ಹೇಳಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News