Bollywood News: ಸಿನಿಮಾ ಕಲಾವಿದರು ತಮ್ಮ ಚಿತ್ರಕ್ಕಾಗಿ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ಎಷ್ಟೋ ನಟರು ತಮ್ಮ ಜೀವನಶೈಲಿಯನ್ನೇ ಬದಲಾಯಿಸಿಕೊಳ್ಳುತ್ತಾರೆ. ಸಿನಿಮಾಗಾಗಿ ತಮ್ಮ ಹೇರ್‌ ಸೈಲ್‌ನಿಂದ ಹಿಡಿದು ತಮ್ಮ ತೂಕದ ಬಗ್ಗೆ, ಬಾಡಿ ಶೇಪ್‌ ಬಗ್ಗೆಯು ಹೆಚ್ಚು ಗಮನ‌ ಹರಿಸುತ್ತಾರೆ. ತಮ್ಮ ಆಹಾರ ಬಗ್ಗೆಯು ನಿಗಾ ವಹಿಸುತ್ತಾರೆ. ಇನ್ನು ಹಲವು ತರಬೇತಿಗಳದಾ ಡ್ಯಾನ್ಸ್‌ ಫಾಮ್‌, ಫೈಟಿಂಗ್, ಮ್ಯಾನೆರಿಸಂ ತಿಳಿದುಕೊಳ್ಳುವ ಅವಶ್ಯಕತೆ ಇದ್ದರೆ ಅದರ ತರಬೇತಿಗಳನ್ನು ಸಹ ಪಡೆದೊಕೊಳ್ಳುತ್ತಾರೆ. 


COMMERCIAL BREAK
SCROLL TO CONTINUE READING

ಅದೇ ರೀತಿ ಪೌರಾಣಿಕ ಸಿನಿಮಾಗಳಿಗೆ ಸಹ ಹೆಚ್ಚಾಗಿ ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕುದುರೆ ಸವಾರಿ, ಕತ್ತಿ ವರ್ಸೆ, ಡೈಲಾಗ್‌ಗಳನ್ನು ಪೌರಾಣಿಕ ಶೈಲಿಯಲ್ಲಿ ಮಾತನಾಡುವುದನ್ನು, ಮ್ಯಾನೆರಿಸಂ ಹೀಗೆ ಹಲವಾರು ವಿಷಯಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವುದು, ಕಲಿಯುವುದು ತುಂಬಾನೆ ಇರುತ್ತದೆ. ಅದೇ ರೀತಿ ನಟ ರಣಬೀರ್‌ ಕಪೂರ್‌ ತಮ್ಮ ಅನಿಮಲ್‌ ಸಿನಿಮಾ ಬಿಡುಗಡೆ ಕೆಲಸಗಳ ಜೊತೆ ನೆಕ್ಸ್ಟ್‌ ಪ್ರಾಜೆಕ್ಟ್‌ ರಾಮಾಯಣ್‌ ಚಿತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ.


ಇದನ್ನೂ ಓದಿ-ಪ್ರಭುದೇವ ಅವರಂತೆ ಕಾಣುವ ಕಾರಣಕ್ಕೆ ನಯನತಾರಾ ವಿಘ್ನೇಶ್ ಶಿವನನ್ನು ಪ್ರೀತಿಸುತ್ತಿದ್ದರೇನೋ..! ಸೆಲೆಬ್ರಿಟಿ ಬಿಚ್ಚಿಟ್ಟ ಶಾಕಿಂಗ್ ಸೀಕ್ರೆಟ್


ನಟ ರಣಬೀರ್‌ ಕಪೂರ್‌ ತಮ್ಮ ರಾಮಾಯಣ್‌ ಸಿನಿಮಾಗಾಗಿ ಮದ್ಯಪಾನ ಹಾಗು ಮಾಂಸ ಸೇವನೆಯನ್ನು ಬಿಟ್ಟಿದ್ದಾರೆಯಂತೆ. ನಿರ್ದೇಶಕ ನಿತೀಶ್‌ ತಿವಾರಿ ಡೈರೆಕ್ಷನ್‌ನ ರಾಮಾಯಣ್‌ ಸಿನಿಮಾದಲ್ಲಿ ನಟ ರಣಬೀರ್‌ ರಾಮನ ಪಾತ್ರ ಮಾಡುತ್ತಿದ್ದಾರೆ. ಆದರಿಂದ ರಾಮನ ಪಾತ್ರಕ್ಕೆ ನ್ಯಾಯ ಒದಗಿಸಲು ರಣಬೀರ್‌  ಮದ್ಯಪಾನ ಹಾಗು ಮಾಂಸ ಸೇವನೆ ಮಾಡುವುದನ್ನು ತಾತ್ಕಾಲಿಕವಾಗಿ ಬಿಟ್ಟಿದ್ದಾರೆ. ಈ ಸಿನಿಮಾಗಾಗಿ ಪರಿಶುದ್ದತೆಯನ್ನು ಕಾಪಾಡಿಕೊಳ್ಳುವುಕ್ಕಾಗಿ ಈ ರೀತಿ ನಿರ್ಧಾರ ಮಾಡಿದ್ದಾರೆ. ಈ ಸಿನಿಮಾಗಾಗಿ ಇಡೀ ಚಿತ್ರತಂಡ ಮಾಂಸವನ್ನು ತ್ಯಜಿಸಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ-ಕನ್ನಡ ಬಿಗ್‌ ಬಾಸ್‌ ಇತಿಹಾಸದಲ್ಲೇ ಇದೇ ಮೊದಲು ಕಾಣಿಸಿಕೊಳ್ತು ಇಂಥದ್ದೊಂದು ಪ್ರಾಬ್ಲಮ್‌!!


ಈ ಹಿಂದೆ ಆದಿಪುರುಷ್‌ ಸಿನಿಮಾಗಾಗಿ ಪ್ರಭಾಸ್‌ ಮಾಂಸ ಸೇವನೆಯನ್ನು ಬಿಟ್ಟಿದ್ದರು. ಓ ಮೈ ಗಾಡ್‌ ಸಿನಿಮಾಗಿ ನಟ ಅಕ್ಷಯ್‌ ಕುಮಾರ್‌ ಸಹ ಕೆಲವು ಕಾಲ ಮಾಂಸ ತ್ಯಜಿಸಿದ್ದರು.ವರನಟ ಡಾ. ರಾಜ್‌ಕುಮಾರ್‌ ಅವರು ಸಹ ದೇವರು ಸಿನಿಮಾಗಳಲ್ಲಿ ಪಾತ್ರ ಮಾಡುವಾಗ ಮಾಂಸ ತಿನ್ನುತ್ತಿರಲಿಲ್ಲ. ಬರೀ ಸಿನಿಮಾ ನಟರು ಮಾತ್ರವಲ್ಲ. ಸೀರಿಯಲ್‌ ನಟ ವಿನಯ್‌ ಗೌಡ ಸಹ ʼಹರ ಹರ ಮಹದೇವʼ ಧಾರಾವಾಹಿ ಮಾಡುತ್ತರುವಾಗ ನಾನ್‌ವೆಜ್ ಆಹಾರವನ್ನು ದೂರವಿಟ್ಟಿದ್ದರು.


ನಟ ರಣಬೀರ್‌ ಕಪೂರ್‌ ಅಭಿನಯಿಸುವ ರಾಮಾಯಣ್‌ ಸಿನಿಮಾದಲ್ಲಿ ಸೌತ್‌ ನಟಿ ಸಾಯಿ ಪಲ್ಲವಿ  ಸೀತಾಮಾತೆಯ ಪಾತ್ರ ಮಾಡುತ್ತಿದ್ದಾರೆ. ಹಾಗೆ ರಾವಣನ ಪಾತ್ರವನ್ನು ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್‌ ಯಶ್‌ ಅವರು ಮಾಡುತ್ತಿದ್ದಾರೆ. ಸಿನಿಮಾಗಳಿಗಾಗಿ ಕಲಾವಿದರ ಡೆಡಿಕೇಶನ್‌ಗೆ ಹ್ಯಾಟ್ಸ್‌ ಆಫ್‌ ಹೇಳಲೇ ಬೇಕು. ಸದ್ಯ ರಣಬೀರ್‌ ಅನಿಮಲ್‌ ಸಿನಿಮಾ ಡಿಸೆಂಬರ್‌ನಲ್ಲಿ ತೆರೆ ಕಾಣುತ್ತಿದ್ದು, ರಾಮಾಯಣ್‌ ಚಿತ್ರದ ಶೂಟಿಂಗ್‌ನ್ನು ಮುಂದಿನ ವರ್ಷ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.