ಕೆಜಿಎಫ್ 3 ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆಯೇ ರಾಣಾ ದಗ್ಗುಬಟಿ..?
ಕೆಜಿಎಫ್ ಫ್ರಾಂಚೈಸಿನ ಮೊದಲ ಎರಡು ಅಧ್ಯಾಯಗಳು ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಈಗ ಮೂರನೇ ಚಾಪ್ಟರ್ ನಲ್ಲಿ ರಾಣಾ ದಗ್ಗುಬಟಿ ನಟಿಸಲಿದ್ದಾರೆ ಎನ್ನುವ ಸುದ್ದಿ ಈಗ ಹರಿದಾಡುತ್ತಿದೆ.ಈಗಾಗಲೇ ಕೆಜಿಎಫ್ 2 ಚಿತ್ರದಲ್ಲಿ ಅಧೀರಾ ಪಾತ್ರ ಸತ್ತಿರುವುದರಿಂದ ಮುಂಬರುವ ಕೆಜಿಎಫ್ 3 ನಲ್ಲಿ ರಾಣಾ ದಗ್ಗುಬಟಿ ಪ್ರಮುಖ ಖಳನಾಯಕನ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು: ಕೆಜಿಎಫ್ ಫ್ರಾಂಚೈಸಿನ ಮೊದಲ ಎರಡು ಅಧ್ಯಾಯಗಳು ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಈಗ ಮೂರನೇ ಚಾಪ್ಟರ್ ನಲ್ಲಿ ರಾಣಾ ದಗ್ಗುಬಟಿ ನಟಿಸಲಿದ್ದಾರೆ ಎನ್ನುವ ಸುದ್ದಿ ಈಗ ಹರಿದಾಡುತ್ತಿದೆ.ಈಗಾಗಲೇ ಕೆಜಿಎಫ್ 2 ಚಿತ್ರದಲ್ಲಿ ಅಧೀರಾ ಪಾತ್ರ ಸತ್ತಿರುವುದರಿಂದ ಮುಂಬರುವ ಕೆಜಿಎಫ್ 3 ನಲ್ಲಿ ರಾಣಾ ದಗ್ಗುಬಟಿ ಪ್ರಮುಖ ಖಳನಾಯಕನ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: 'ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ವೀರಪ್ಪನ್ ಇದ್ದ ಹಾಗೆ'
ಸುದ್ದಿ ಮೂಲಗಳ ಪ್ರಕಾರ "ಕೆಜಿಎಫ್ 2 ನಲ್ಲಿ ಅಧೀರ ಸಾವನ್ನಪ್ಪಿರುವುದರಿಂದ ಮೂರನೇ ಭಾಗದಲ್ಲಿ ಪ್ರಬಲ ಖಳನಾಯಕನ ಪಾತ್ರಕ್ಕಾಗಿ ರಾಣಾ ದಗ್ಗುಬಟಿ ಅವರನ್ನು ಸಂಪರ್ಕಿಸಲಾಗುತ್ತಿದೆ ಎಂದು ವರದಿ ಹೇಳಿದೆ.ಇನ್ನೊಂದೆಡೆಗೆ ರಾಣಾ ಅವರು ಇತ್ತೀಚಿಗೆ ಕೆಜಿಎಫ್ ೨ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.ಈಗ ಶೀಘ್ರದಲ್ಲೇ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಹೈದರಾಬಾದ್ ನಲ್ಲಿ ರಾಣಾ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.ಕೇವಲ 3 ವಾರಗಳಲ್ಲಿ 1084.37 ಕೋಟಿ ರೂ ಗಳಿಸಿದ ಕೆಜಿಎಫ್ 2..!
ಆದರೆ ಈ ವಿಚಾರವಾಗಿ ಅಧಿಕೃತವಾಗಿ ರಾಣಾ ದಗ್ಗುಬಟಿಯಾಗಲಿ, ನಿರ್ದೇಶಕ ಪ್ರಶಾಂತ್ ನೀಲ್, ಮತ್ತು ಹೊಂಬಾಳೆ ಫಿಲಂಸ್ ಖಚಿತಪಡಿಸಿಲ್ಲ ಎನ್ನಲಾಗಿದೆ.ಈಗ ಪ್ರಶಾಂತ್ ನೀಲ್ ಅವರು ಸಲಾರ್ ಚಿತ್ರೀಕರಣ ಪೂರ್ಣಗೊಂಡ ನಂತರ ಕೆಜಿಎಫ್ 3 ಚಿತ್ರೀಕರಣಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನೂ ಚಿತ್ರದ ಬಾಕ್ಸ್ ಆಫೀಸ್ ವಿಚಾರಕ್ಕೆ ಬಂದರೆ ಕೆಜಿಎಫ್ 2 ಚಿತ್ರವು ವಿಶ್ವದಾದ್ಯಂತ 1100 ಕೋಟಿ ರೂ.ಗಳನ್ನು ಬಾಚಿದ್ದು, ಹಿಂದಿ ಬೆಲ್ಟ್ ನಲ್ಲಿ ಸುಮಾರು 400 ಅಧಿಕ ಕೋಟಿ.ರೂ ಗಳನ್ನು ಗಳಿಸಿದೆ. ಆ ಮೂಲಕ ಈಗ ಬಾಹುಬಲಿ 2 ಚಿತ್ರದ ನಂತರ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕೆಜಿಎಫ್ ೨ ಚಿತ್ರವು ಪಾತ್ರವಾಗಿದೆ.ಅಷ್ಟೇ ಅಲ್ಲದೆ ನಾಲ್ಕು ಭಾಷೆಗಳಲ್ಲಿ 100 ಕೋಟಿ ರೂ ಸಂಪಾದನೆ ಮಾಡಿದ ಭಾರತದ ಮೊದಲ ಸಿನಿಮಾ ಎನ್ನುವ ಹಿರಿಮೆಗೂ ಚಿತ್ರ ಪಾತ್ರವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.