ಬೆಂಗಳೂರು: ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ೨ ಚಿತ್ರ ಮಾಡುತ್ತಿರುವ ಮೋಡಿಗೆ ಇಡೀ ಸಿನಿ ಜಗತ್ತೇ ಬೆಕ್ಕಸ ಬೆರಗಾಗಿದೆ, ಕೊರೊನಾ ನಂತರದ ಕಾಲಾವಧಿಯಲ್ಲಿ ಬಿಡುಗಡೆಯಾದ ಈ ಸಿನಿಮಾ ಮಾಡುತ್ತಿರುವ ದಾಖಲೆಗಳು ಒಂದಲ್ಲ ಎರಡಲ್ಲ, ಸತತ ಮೂರನೇ ವಾರವೂ ಎಲ್ಲೆಡೆ ಬಾಕ್ಸ್ ಆಫೀಸ್ ನಲ್ಲಿ ನಂಬರ್ 1 ಸ್ಥಾನದಲ್ಲಿದೆ.
ಆರಂಭದಲ್ಲಿ ಹಿಂದಿ ಸಿನಿಮಾಗಳು ಬಿಡುಗಡೆಯಾದ ನಂತರ ಕೆಜಿಎಫ್ ೨ ಚಿತ್ರದ ಬಾಕ್ಸ್ ಆಫೀಸ್ ನಾಗಾಲೋಟಕ್ಕೆ ಅಡ್ಡಿಯಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು, ಆದರೆ ಕೆಜಿಎಫ್ ಹವಾ ಮಾತ್ರ ಮೂರು ವಾರಗಳು ಕಳೆದು ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದರೂ ಕಡಿಮೆ ಮಾತ್ರ ಆಗಿಲ್ಲ, ಈ ಹಿನ್ನಲೆಯಲ್ಲಿ ಈಗ ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಚಿತ್ರದ ಯಶಸ್ಸಿನ ಬಗ್ಗೆ ಕೆಜಿಎಫ್ ೨ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ವಿಭಿನ್ನವಾಗಿ ಶ್ಲಾಘಿಸಿದ್ದಾರೆ.
I wish a very UNHAPPY Directors day to @prashanth_neel for so royally FUCKKKKING every directors mind everywhere whether it’s in BOLLYWOOD, TOLLYWOOD,KOLLYWOOD and even in SANDALWOOD ..Sir Prashant Neel, U are the VEERAPPAN of indian cinema🙏🙏🙏
— Ram Gopal Varma (@RGVzoomin) May 4, 2022
'ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಿರ್ದೇಶಕರನ್ನು ನಿದ್ದೆಗೆಡಿಸಿರುವ ಪ್ರಶಾಂತ್ ನೀಲ್ ಅವರಿಗೆ ಅನ್ ಹ್ಯಾಪಿ ನಿರ್ದೇಶಕರ ದಿನದ ಶುಭಾಶಯಗಳು, ಸರ್ ಪ್ರಶಾಂತ್ ನೀಲ್ ಅವರೇ ನೀವು ಭಾರತೀಯ ಸಿನಿಮಾದ ವೀರಪ್ಪನ್ ಇದ್ದ ಹಾಗೆ' ಎಂದು ಅವರು ತಮ್ಮದೇ ಶೈಲಿಯಲ್ಲಿ ಶ್ಲಾಘಿಸಿದ್ದಾರೆ.
'ಶ್ರೀ ಪ್ರಶಾಂತ್ ನೀಲ್ ಅವರೇ ನೀವು ಒಂದು ಕ್ವಿಂಟಾಲ್ ಹಣವನ್ನು ಮಾಡಿದ್ದೀರಿ, ಆದರೆ ಭಾರತೀಯ ಚಲನಚಿತ್ರೋದ್ಯಮವು 100 ಟನ್ಗಳಷ್ಟು ಹಣವನ್ನು ಕಳೆದುಕೊಳ್ಳುವ ವೆಚ್ಚದಲ್ಲಿ ಅವರೆಲ್ಲರೂ ರೀಶೂಟ್‌ಗಳು, ರಿಡ್ರಾಫ್ಟ್‌ಗಳು, ತಮ್ಮನ್ನು ತಾವು ಮರುಶೋಧಿಸುವಲ್ಲಿ ಮರುಚಿಂತನೆ ಮಾಡುತ್ತಾರೆ, ಕೆಜಿಎಫ್ ೨ ಚಿತ್ರ ಯಾವ ರೀತಿ ಗೆದ್ದಿದೆ ಎನ್ನುವುದು ತಿಳಿಯುತ್ತಿಲ್ಲ' ಎಂದು ಅವರು ಟ್ವೀಟ್ ಮಾಡಿದ್ದಾರೆ.
Sir @prashanth_neel u made a quintal of money but that at the cost of indian film industry losing 100’s of tonnes of money becos they will all spend on reshoots, redrafts,rethinks in reinventing themselves,but not knowing why the fucking fuck KGF 2 worked 😳#UnhappyDirectorsDay
— Ram Gopal Varma (@RGVzoomin) May 4, 2022
ಇನ್ನು ಮುಂದುವರೆದು ಅವರು 'ಶೇ 95 ರಷ್ಟು ಸಂಪ್ರದಾಯ ಆಧಾರಿತ ಸಾಂಪ್ರದಾಯಿಕ ಚಲನಚಿತ್ರೋದ್ಯಮದ ಜನರು ಕೆಜಿಎಫ್ 2 ಅನ್ನು ದ್ವೇಷಿಸಿದ್ದಾರೆ, ಇದಕ್ಕೆ ಸಾಕ್ಷಿ ಎನ್ನುವಂತೆ ಪ್ರಶಾಂತ್ ನೀಲ್ ಅವರು ಹಳೆಯ ಉದ್ಯಮವನ್ನು ಹೊರಹಾಕಿ ಈಗ ಹೊಸ ಉದ್ಯಮವನ್ನು ತಂದಿದ್ದಾರೆ.ಅದೇ ಈಗ ಕೆಜಿಎಫ್ 2' ಎಂದು ರಾಮ್ ಗೋಪಾಲ್ ವರ್ಮಾ ಕೊಂಡಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.