Animal movie movie : ಬಿಟೌನ್‌ ನಟ ರಣಬೀರ್ ಕಪೂರ್ ಅಭಿನಯದ ʼಅನಿಮಲ್ʼ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಡಿಸೆಂಬರ್ 1ರಂದು ಈ ಚಿತ್ರ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಇನ್ನು ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಚಿತ್ರತಂಡ ಪ್ರಚಾರದ ವೇಗ ಹೆಚ್ಚಿಸಿದ್ದು, ದೇಶಾದ್ಯಂತ ಪ್ರವಾಸ ಮಾಡಿ ಪ್ರಚಾರ ನಡೆಸುತ್ತಿದೆ. ಇತ್ತೀಚಿಗೆ ಚಿತ್ರದ ಟ್ರೇಲರ್ ಬಿಡುಗಡೆಗೆ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಈ ವೇಳೆ ರಣಬೀರ್‌ ತಮ್ಮ ಪತ್ನಿ ಆಲಿಯಾ ಬಗ್ಗೆ ಹೇಳಿರುವ ಮಾತುಗಳು ಸಂಚಲನ ಸೃಷ್ಟಿಸುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ಅನಿಮಲ್‌ ಟ್ರೈಲರ್‌ ರಿಲೀಸ್‌ ಇವೆಂಟ್‌ನಲ್ಲಿ ತಮ್ಮ ಪತ್ನಿ ಆಲಿಯಾ ಭಟ್ ಬಗ್ಗೆಯೂ ಪ್ರಸ್ತಾಪಿಸಿದ ನಟ, ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ. ಚಿತ್ರದ ಕುರಿತು ಮಾತನಾಡುವ ವೇಳೆ ತಮ್ಮ ಪಾತ್ರದ ಕುರಿತು ಹೇಳಿಕೊಂಡರು. ಅಲ್ಲದೆ, ಈ ಸಿನಿಮಾದಲ್ಲಿ ನಟಿಸಿದ ಹಾಗೆ ಮನೆಗೆ ಹೋಗಿ ಮಾಡಿದ್ರೆ, ನನ್ನ ಹೆಂಡತಿ ಹೊಡೆಯುತ್ತಾಳೆ ಅಂತ ತಮಾಷೆ ಮಾಡಿದರು.


ಇದನ್ನೂ ಓದಿ: ಅವಳಿಗಾಗಿ ತಮ್ಮ ನೆಚ್ಚಿನ ಮನೆ ಬಿಟ್ಟುಕೊಟ್ಟ ನಟ ಅಮಿತಾಬ್ ಬಚ್ಚನ್..! ಕಾರಣ ಏನು..?


ಇನ್ನು ಟ್ರೈಲರ್‌ ರಿಲೀಸ್‌ ಇವೆಂಟ್‌ನಲ್ಲಿ ರಣಬೀರ್ ಕಪೂರ್, ಸಂದೀಪ್ ರೆಡ್ಡಿ ವಂಗಾ ಜೊತೆಗೆ ಬಾಬಿ ಡಿಯೋಲ್ ಮತ್ತು ರಶ್ಮಿಕಾ ಕೂಡ ಭಾಗವಹಿಸಿದ್ದರು. ಈ ಟ್ರೇಲರ್‌ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಚಿತ್ರ ಬ್ಲಾಕ್ಬಸ್ಟರ್‌ ಹಿಟ್‌ ಆಗುವ ಸಾಧ್ಯತೆ ಹೆಚ್ಚಿದೆ.


ಅನಿಮಲ್ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಬರೆದಿದೆ. ಈ ಚಿತ್ರದ ಒಟ್ಟು ಅವಧಿ ಬರೋಬ್ಬರಿ 3 ಗಂಟೆ 21 ನಿಮಿಷ. ಸಾಮಾನ್ಯ ಚಿತ್ರಗಳ ಅವಧಿಗಿಂತ ನಮ್ಮ ಸಿನಿಮಾ ಹೆಚ್ಚಿದೆ ಅಂತ ಸ್ವತಃ ನಿರ್ದೇಶಕ ಸಂದೀಪ್ ವಂಗಾ ಅವರು ಹೇಳಿಕೊಂಡಿದ್ದರು, ಇದನ್ನು ಕೇಳಿ ಪ್ರೇಕ್ಷಕರು ಆಶ್ಚರ್ಯಚಕಿತರಾಗಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.