ಅವಳಿಗಾಗಿ ತಮ್ಮ ನೆಚ್ಚಿನ ಮನೆ ಬಿಟ್ಟುಕೊಟ್ಟ ನಟ ಅಮಿತಾಬ್ ಬಚ್ಚನ್..! ಕಾರಣ ಏನು..?

Amitabh Bachchan Daughter : ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸಂಚಲನಾತ್ಮಕ ನಿರ್ಧಾರವನ್ನು ಕೈಗೊಂಡಿದ್ದಾರೆ. ತಮ್ಮ ನೆಚ್ಚಿನ ಮನೆಯನ್ನು ಬಿಟ್ಟು ಹೊರ ಬಂದಿದ್ದಾರೆ. ಅಷ್ಟಕ್ಕೂ ಬಿಗ್‌ ಬಾಸ್‌ ಮನೆ ಬಿಡಲು ಕಾರಣವೇನು.. ಯಾರಿಗಾಗಿ ತಮ್ಮ ಮನೆ ತೊರೆದರು ಎನ್ನುವ ಇಂಟ್ರಸ್ಟಿಂಗ್‌ ಸ್ಟೋರಿ ಇಲ್ಲಿದೆ..

Written by - Krishna N K | Last Updated : Nov 25, 2023, 04:31 PM IST
  • ನಟ ಅಮಿತಾಬ್ ಬಚ್ಚನ್ ಸಂಚಲನಾತ್ಮಕ ನಿರ್ಧಾರವನ್ನು ಕೈಗೊಂಡಿದ್ದಾರೆ.
  • ತಮ್ಮ ನೆಚ್ಚಿನ ಮನೆಯನ್ನು ಬಿಟ್ಟು ಹೊರ ಬಂದಿದ್ದಾರೆ.
  • ಯಾರಿಗಾಗಿ ತಮ್ಮ ಮನೆ ತೊರೆದರು ಎನ್ನುವ ಇಂಟ್ರಸ್ಟಿಂಗ್‌ ಸ್ಟೋರಿ ಇಲ್ಲಿದೆ..
ಅವಳಿಗಾಗಿ ತಮ್ಮ ನೆಚ್ಚಿನ ಮನೆ ಬಿಟ್ಟುಕೊಟ್ಟ ನಟ ಅಮಿತಾಬ್ ಬಚ್ಚನ್..! ಕಾರಣ ಏನು..? title=

Amitabh bachchan : 81 ವರ್ಷದ ಬಿಗ್ ಬಿ ಅಮಿತಾಬ್ ಬಚ್ಚನ್ ಕ್ರೇಜ್‌ ಇಂದಿಗೂ ಕಡಿಮೆಯಾಗಿಲ್ಲ. ಈಗಲೂ ಅದೇ ರೆಂಜ್‌ನಲ್ಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸೌಥ್‌ ಸಿನಿಮಾಗಳತ್ತ ಮುಖ ಮಾಡಿರುವ ಬಚ್ಚನ್‌ ಅವರು, ವಿಶ್ವ ಮಟ್ಟದಲ್ಲಿ ತಯಾರಾಗುತ್ತಿರುವ ಕಲ್ಕಿ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದರೆ, ದೀಪಿಕಾ ಪಡುಕೋಣೆ ನಾಯಕಿ. ಈ ಸಿನಿಮಾ ಅಲ್ಲದೆ ಸೂಪರ್ ಸ್ಟಾರ್ ರಜನಿಕಾಂತ್ ಅವರ 170ನೇ ಸಿನಿಮಾದಲ್ಲೂ ಬಿಗ್‌ ಬಿ ಅಭಿನಯಿಸಲಿದ್ದಾರೆ.

ಇವುಗಳ ಜೊತೆಗೆ ಜನಪ್ರಿಯ ಟಿವಿ ಶೋ 'ಕೌನ್ ಬನೇಗಾ ಕರೋಡ್ಪತಿ 15' ನ ನಿರೂಪಕರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಈ ಸಂಚಿಕೆಯಲ್ಲಿ ಬಿಗ್ ಬಿ ಅಮಿತಾಬ್ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರ ಶಾಕಿಂಗ್ ನಿರ್ಧಾರದಿಂದ ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ: Ileana D'Cruz: ಸಸ್ಪೆನ್ಸ್‌ಗೆ ಬ್ರೇಕ್..‌ಇಲಿಯಾನಾ ಪತಿ ಇವರೇ..! ಕ್ಲಾರಿಟಿ ಕೊಟ್ಟ ಗೋವಾ ಬ್ಯೂಟಿ

ಮಗಳಿಗಾಗಿ ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ತಮ್ಮ ನೆಚ್ಚಿನ ಜುಹು ಬಾಂಗ್ಲಾ ʼಪ್ರತೀಕ್ಷಾʼವನ್ನು ಮಗಳು ಶ್ವೇತಾ ಬಚ್ಚನ್‌ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಮುಂಬೈನ ಜುಹು ಪ್ರದೇಶ ಅತ್ಯಂತ ದುಬಾರಿ ಪ್ರದೇಶವಾಗಿದ್ದು, ಪ್ರತೀಕ್ಷಾದಲ್ಲಿ ಅಮಿತಾಬ್ ಬಚ್ಚನ್ ಎರಡು ಪ್ಲಾಟ್‌ಗಳನ್ನು ಹೊಂದಿದ್ದಾರೆ. 

ಅಮಿತಾಭ್ ಅವರು ತಮ್ಮ ತಂದೆ ತಾಯಿಗಳ ಜೊತೆ ಇಲ್ಲಿಯೇ ವಾಸಿಸುತ್ತಿದ್ದರು. ಇದೀಗ ಈ ಮನೆಯನ್ನು ಅವರ ತಮ್ಮ ಮಗಳಿಗೆ ನೀಡಿದ್ದಾರೆ. ಅಲ್ಲದೆ, ನೋಂದಣಿ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿದ್ದಾರಂತೆ. 

ಬಿಗ್ ಬಿ ಅಮಿತಾಬ್ ಮುಂಬೈನಲ್ಲಿ ಹೆಚ್ಚಿನ ಆಸ್ತಿಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಈ ವರ್ಷ ಜುಲೈನಲ್ಲಿ ಮುಂಬೈನ ಅಂಧೇರಿಯಲ್ಲಿರುವ ವಾಣಿಜ್ಯ ಸಂಕೀರ್ಣದ 21 ನೇ ಮಹಡಿಯಲ್ಲಿ ನಾಲ್ಕು ಫ್ಲಾಟ್‌ಗಳನ್ನು ಖರೀದಿಸಿದ್ದಾರೆ. ಅವುಗಳ ಬೆಲೆ ತಲಾ 7.18 ಕೋಟಿ ರೂ. ಅಲ್ಲದೆ ಕೆಲವು ವರ್ಷಗಳ ಹಿಂದೆ ಮುಂಬೈನ ಅಟ್ಲಾಂಟಿಸ್ ನಲ್ಲಿ 5,184 ಚದರ ಅಡಿ ಜಾಗವನ್ನು 31 ಕೋಟಿಗೆ ಖರೀದಿಸಿದ್ದರು ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News