Ranbir Kapoor viral clip: ಬಾಲಿವುಡ್ ನಟ ರಣಬೀರ್ ಕಪೂರ್ ಇತ್ತೀಚಿನ ದಿನಗಳಲ್ಲಿ ಹಲವು ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ರಣಬೀರ್‌ ಕಪೂರ್‌ ನಟನೆಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಸಿನಿಮಾ ಗೆ ಹಿಟ್‌ ಆಯಿತು. ʻಅನಿಮಲ್‌ʼ ಚಿತ್ರದಲ್ಲಿ ರಣಬೀರ್ ಕಪೂರ್ ನಟನೆ ಜನರ ಮನಗೆದ್ದಿತು. ಅನಿಮಲ್‌ ಸಿನಿಮಾ ಸಂಭಾಷಣೆಗಳು ಇನ್ನೂ ಚರ್ಚೆಯಲ್ಲಿವೆ. 


COMMERCIAL BREAK
SCROLL TO CONTINUE READING

ಇದೀಗ ರಣಬೀರ್ ಕಪೂರ್ ಮತ್ತು ಕರಣ್ ಜೋಹರ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅವಾರ್ಡ್ ಫಂಕ್ಷನ್ ನಲ್ಲಿ ಕರಣ್ ಜೋಹರ್ ಮೇಲೆ ರಣಬೀರ್ ಕಪೂರ್ ಕೂಗಾಡಿದ ವಿಡಿಯೋ ಇದಾಗಿದೆ. 


ಇದನ್ನೂ ಓದಿ: ಧ್ರುವ ಸರ್ಜಾ ವಿಮಾನ ದುರಂತದಿಂದ ಬಚಾವ್​​.. ಕೂದಲೆಳೆ ಅಂತರದಲ್ಲಿ ಪಾರಾದ ʻಮಾರ್ಟಿನ್‌ʼ ತಂಡ!! 


ಈ ವೀಡಿಯೋ ಗುಜರಾತ್‌ನ ಪ್ರಶಸ್ತಿ ಪ್ರದರ್ಶನ ಸಮಾರಂಭದ್ದಾಗಿದೆ ಎಂದು ಹೇಳಲಾಗಿದೆ. ಕರಣ್ ಜೋಹರ್ ಮತ್ತು ಆಯುಷ್ಮಾನ್ ಖುರಾನಾ ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ. ರಣಬೀರ್ ಕಪೂರ್ ಬಳಿ ಬಂದು ಸಹಾಯ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕರಣ್ ಜೋಹರ್ ಮತ್ತು ಆಯುಷ್ಮಾನ್ ಖುರಾನಾ ವೇದಿಕೆ ಮುಂದೆ ಕುಳಿತ ರಣಬೀರ್ ಬಳಿ ಬರುತ್ತಾರೆ.


ರಣಬೀರ್ ನಮಗೆ ಸಹಾಯ ಮಾಡಬೇಕು. ಈ ಸಹಾಯ ಅವರೊಬ್ಬರಿಂದಲೇ ಸಾಧ್ಯ ಎಂದು ಕರಣ್‌ ಹೇಳುತ್ತಾರೆ. ಇದೇ ಮಾತನ್ನು ಕರಣ್‌ ಜೋಹರ್‌ ಪದೆಪದೇ ಹೇಳುತ್ತಾರೆ. ಆಗ ಇರಿಟೇಟ್‌ ಆದಂತೆ ಕಂಡ ರಣಬೀರ್‌ ಕರಣ್‌ ಮೇಲೆ ಕಿರುಚಾಡುತ್ತಾರೆ. 'ನನಗೆ ಕಿವಿ ಕೇಳುತ್ತೆ, ನಾನು ಕಿವುಡನಲ್ಲ' ಎಂದು ಕೂಗಾಡುತ್ತಾರೆ. 


 



 


ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದರೆ ಇದು ರಣಬೀರ್‌ ಅವರ ಅನಿಮಲ್‌ ಸಿನಿಮಾ ಡೈಲಾಗ್‌ ಆಗಿದೆ. ಈ ವಿಡಿಯೋ ತಮಾಷೆಗಾಗಿ ಮಾಡಿರಬಹುದು ಎನ್ನಲಾಗಿದೆ. 


ಇದನ್ನೂ ಓದಿ: Mehabooba: ಜಾತಿ-ಮತ-ಧರ್ಮ ಮೀರಿದ ಮೆಹಬೂಬಕ್ಕೆ ಮುಹೂರ್ತ‌ ಫಿಕ್ಸ್! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.