ಧ್ರುವ ಸರ್ಜಾ ವಿಮಾನ ದುರಂತದಿಂದ ಬಚಾವ್​​.. ಕೂದಲೆಳೆ ಅಂತರದಲ್ಲಿ ಪಾರಾದ ʻಮಾರ್ಟಿನ್‌ʼ ತಂಡ!!

Martin movie team escaped from plane crash : ಶೂಟಿಂಗ್‌ ಮುಗಿಸಿ ವಿಮಾನದಲ್ಲಿ ದೆಹಲಿಗೆ ವಾಪಸ್‌ ಬರುತ್ತಿದ್ದರು. ಈ ವೇಳೆ ಧ್ರುವ ಸರ್ಜಾ ಹಾಗೂ ಮಾರ್ಟಿನ್‌ ಚಿತ್ರತಂಡ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

Written by - Chetana Devarmani | Last Updated : Feb 20, 2024, 07:36 AM IST
  • ಸ್ಯಾಂಡಲ್‌ವುಡ್​ ನಟ ಧ್ರುವ ಸರ್ಜಾ
  • ವಿಮಾನ ದುರಂತದಿಂದ ಪಾರು
  • ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
ಧ್ರುವ ಸರ್ಜಾ ವಿಮಾನ ದುರಂತದಿಂದ ಬಚಾವ್​​.. ಕೂದಲೆಳೆ ಅಂತರದಲ್ಲಿ ಪಾರಾದ ʻಮಾರ್ಟಿನ್‌ʼ ತಂಡ!!  title=
Dhruva Sarja

Dhruva Sarja : ನಟ ಧ್ರುವ ಸರ್ಜಾ ಸದ್ಯ ಮಾರ್ಟಿನ್‌ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹಾಡಿನ ಚಿತ್ರೀಕರಣಕ್ಕಾಗಿ ಮಾರ್ಟಿನ್‌ ಚಿತ್ರತಂಡದ ಜೊತೆ ಧ್ರುವ ಸರ್ಜಾ ಶ್ರೀನಗರಕ್ಕೆ ತೆರಳಿದ್ದರು. ಶೂಟಿಂಗ್‌ ಮುಗಿಸಿ ವಿಮಾನದಲ್ಲಿ ದೆಹಲಿಗೆ ವಾಪಸ್‌ ಬರುತ್ತಿದ್ದರು. ಈ ವೇಳೆ ಧ್ರುವ ಸರ್ಜಾ ಹಾಗೂ ಮಾರ್ಟಿನ್‌ ಚಿತ್ರತಂಡ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. 

ಕ್ರ್ಯಾಶ್ ಆಗಬೇಕಿದ್ದ ವಿಮಾನ ಪೈಲೆಟ್‌ ಸಮಯಪ್ರಜ್ಞೆಯಿಂದ ಸೇಫ್‌ ಆಗಿ ಲ್ಯಾಂಡ್‌ ಆಗಿದೆ. ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ‘ಮಾರ್ಟಿನ್​’ ಚಿತ್ರತಂಡದವರು ಈ ಸಮಯದ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. 

ಇದನ್ನೂ ಓದಿ: ಬಹುನಿರೀಕ್ಷಿತ 'ರಂಗನಾಯಕ ಚಿತ್ರದಲ್ಲಿ ಜಗ್ಗೇಶ್ ತಾಯಿ ಪಾತ್ರದಲ್ಲಿ ನಟಿ ಚೈತ್ರಾ ಕೊಟ್ಟೂರು 

ಧ್ರುವ ಸರ್ಜಾ ಸಹ ಈ ಬಗ್ಗೆ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಇಂದಿನಂತಹ ಕೆಟ್ಟ ಅನುಭವ ಇಡೀ ಜೀವನದಲ್ಲೇ ಆಗಿರಲಿಲ್ಲ. ನಾವೆಲ್ಲರೂ ಈಗ ಸೇಫ್​ ಆಗಿದ್ದೇವೆ. ಜೈ ಆಂಜನೇಯ. ಪೈಲಟ್‌ಗೆ ಧನ್ಯವಾದ" ಎಂದು ಧ್ರುವ ಸರ್ಜಾ ತಮ್ಮ ಸೋಶಿಯಲ್​ ಮೀಡಿಯಾ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ.

 

 

ಇತ್ತಿಚೆಗಷ್ಟೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಪ್ರಯಾಣಿಸುತ್ತಿದ್ದ ವಿಮಾನದಲ್ಲಿಯೂ ಇದೇ ರೀತಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ರಶ್ಮಿಕಾ ಸಹ ಸಾವಿನ ಕದ ತಟ್ಟಿ ಬಂದ ಅನುಭವ ಎಂದು ಹೇಳಿಕೊಂಡಿದ್ದರು. 

ಇದನ್ನೂ ಓದಿ:  ತೆರೆಗೆ ಬರಲು ಸಜ್ಜಾದ "ಕಪ್ಪು ಬಿಳುಪಿನ ನಡುವೆ".. ಶುಭ ಹಾರೈಸಿದ ಖ್ಯಾತ ನಟ ವಿಜಯ್ ಸೇತುಪತಿ!   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News