ಡಿನ್ನರ್ ಡೇಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಆಲಿಯಾ - ರಣಬೀರ್, ವಿಡಿಯೋ ನೋಡಿ ಈ ಪ್ರಶ್ನೆ ಎತ್ತಿದ ಅಭಿಮಾನಿಗಳು
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಊಟಕ್ಕೆ ಜೊತೆಯಾಗಿ ಹೋಗಿದ್ದರು. ಆಲಿಯಾ ಅವರ ಸಹೋದರಿ ಶಾಹೀನ್ ಭಟ್ ಕೂಡ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ನವದೆಹಲಿ : ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಬಾಲಿವುಡ್ ನ ಫೆವರಿಟ್ ಜೋಡಿಗಳಲ್ಲಿ ಒಂದು. ಇವರಿಬ್ಬರ ಮದುವೆಯ ಸುದ್ದಿಗಾಗಿ, ಅಭಿಮಾನಿಗಳು ಕಾಯುತ್ತಿದ್ದಾರೆ. ಇಬ್ಬರೂ ಕಳೆದ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇದೀಗ ಇವರಿಬ್ಬರ ವಿಡಿಯೋವೊಂದು ವೈರಲ್ ಆಗುತ್ತಿದೆ.
ಅಭಿಮಾನಿಗಳ ಪ್ರಶ್ನೆ :
ವಾಸ್ತವವಾಗಿ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ Ranbir Kapoor) ಊಟಕ್ಕೆ ಜೊತೆಯಾಗಿ ಹೋಗಿದ್ದರು. ಆಲಿಯಾ ಅವರ ಸಹೋದರಿ ಶಾಹೀನ್ ಭಟ್ ಕೂಡ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ರಣಬೀರ್ ಮತ್ತು ಆಲಿಯಾ ಜೊತೆಯಾಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಆದರೆ ಈ ವಿಡಿಯೋದಲ್ಲಿ (Video) ಆಲಿಯಾ ಅವರನ್ನು ನೋಡಿರುವ ಅಭಿಮಾನಿಗಳು ವಿಚಿತ್ರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಇದನ್ನೂ ಓದಿ : ಗೆಳೆಯ ರೋಹ್ಮನ್ ಶಾಲ್ ಜೊತೆಗಿನ ಬ್ರೇಕಪ್ ಬಗ್ಗೆ ನಟಿ ಸುಶ್ಮಿತಾ ಸೇನ್ ಹೇಳಿದ್ದೇನು?
ಈ ವೀಡಿಯೊದಲ್ಲಿ, ಆಲಿಯಾ ಸುತ್ತ ಅನೇಕ ಜನರು ಸೇರಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಬಂದ ರಣಬೀರ್, ಆಲಿಯಾ ಭಟ್ ಅವರನ್ನು ಜನಸಂದಣಿಯಿಂದ ದೂರ ಕರೆದುಕೊಂಡು ಬಂದು ಸುರಕ್ಷಿತವಾಗಿ ಕಾರು ಹತ್ತಿಸುವುದನ್ನು ಕಾಣಬಹುದು. ಆದರೆ ಆಲಿಯಾ ಅವರನ್ನು ನೋಡಿ ಅಭಿಮಾನಿಗಳು ತರಹ ತರಹದ ಪ್ರಶ್ನೆಗಳನ್ನು ಕೇಳಿದ್ದಾರೆ. ಕೆಲವರು ಅಲಿಯಾ ನಶೆಯಲ್ಲಿದ್ದಾರೆಯೇ ಎಂದು ಪ್ರಶ್ನಿಸಿದರೆ, ಇನ್ನು ಕೆಲವರು ಆಲಿಯಾ ಅತ್ತಿದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿರುವ ಜೋಡಿ :
ಶೀಘ್ರದಲ್ಲೇ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮೊದಲ ಬಾರಿಗೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ವರ್ಷದಲ್ಲಿ ಬಹು ನಿರೀಕ್ಷಿತ ಚಿತ್ರ 'ಬ್ರಹ್ಮಾಸ್ತ್ರ'ದಲ್ಲಿ (Brahmastra) ಇಬ್ಬರೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ (Amitabh Bachchan) , ಮೌನಿ ರೈ ಜೊತೆಗೆ ಹಲವು ನಟರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಮೂರು ಭಾಗಗಳಲ್ಲಿ ತಯಾರಾಗಿದ್ದು, ಮುಂದಿನ ದೀಪಾವಳಿಗೆ ಮೊದಲ ಭಾಗ ಬಿಡುಗಡೆಯಾಗಲಿದೆ.
ಇದನ್ನೂ ಓದಿ : "ರಾಷ್ಟ್ರೀಯವಾದಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಈ ದೇಶ ಮುಂದುವರೆಸಿದೆ": ವಿಚಾರಣೆ ಬಳಿಕ ಕಂಗನಾ ಪೋಸ್ಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.