Panama Papers Leak Case: ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (Enforcement Directorate) ಮುಂದೆ ಹಾಜರಾಗುವಂತೆ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರಿಗೆ ಸಮನ್ಸ್ ನೀಡಲಾಗಿದೆ. ಅವರು ಈ ಹಿಂದೆ ಎರಡು ಸಂದರ್ಭಗಳಲ್ಲಿ ಕಾಣಿಸಿಕೊಳ್ಳಲು ಸಮಯ ಕೋರಿದ್ದರು. ಪನಾಮಾ ಪೇಪರ್ಸ್ ಪ್ರಕರಣದ (Panama Papers Leak Case) ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಮುಂದೆ ಈ ಮುಂದೂಡಿಕೆ ಅರ್ಜಿಯನ್ನು ಅವರು ಸಲ್ಲಿಸಿದ್ದರು.
ಇದಕ್ಕೂ ಮುನ್ನ ಇಡಿ ಐಶ್ವರ್ಯಾ ಅವರ ಪತಿ ಹಾಗೂ ಸಿನಿಮಾ ನಟ ಅಭಿಷೇಕ್ ಬಚ್ಚನ್ (Abhishek Bachchan) ಅವರನ್ನು ಕೂಡ ವಿಚಾರಣೆ ನಡೆಸಿತ್ತು. ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಶೀಘ್ರದಲ್ಲೇ ಈ ವಿಷಯದಲ್ಲಿ ಅಮಿತಾಬ್ ಬಚ್ಚನ್ (Amitabh Bachchan) ಅವರನ್ನು ಕೂಡ ಪ್ರಶ್ನಿಸಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪನಾಮಾ ಪೇಪರ್ಸ್ ಪ್ರಕರಣದಲ್ಲಿ ಇಡಿ ವಿಚಾರಣೆ ಅಮಿತಾಬ್ ಬಚ್ಚನ್ ಕುಟುಂಬದ ಸಂಕಷ್ಟವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಚಿತ್ರನಟಿ ಐಶ್ವರ್ಯಾ ರೈ ಅವರನ್ನು ದೆಹಲಿಯಲ್ಲಿ ವಿಚಾರಣೆ ನಡೆಸಲಾಗುವುದು ಎನ್ನಲಾಗಿದೆ. ಪನಾಮ ಪೇಪರ್ಸ್ ಪ್ರಕರಣದಲ್ಲಿ ಭಾರತದ ಸುಮಾರು 500 ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ ಇವರಲ್ಲಿ ದೇಶದ ಅನೇಕ ನಾಯಕರು, ನಟರು, ಉದ್ಯಮಿಗಳು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಶಾಮೀಲಾಗಿದ್ದಾರೆ.
ED summoned Aishwarya Rai Bacchan in Panama Paper Leak case. ED has registered PMLA in Panama Leak case.
— Jitender Sharma (@capt_ivane) December 20, 2021
ಇದನ್ನೂ ಓದಿ-ದ್ವೇಷದ ಬೆಂಕಿ ಆರಲಿ.. ಕನ್ನಡದ ಬಾವುಟ ಹಾರಲಿ: ನಟಿ ಹರಿಪ್ರಿಯಾ
ಪನಾಮ ಪೇಪರ್ಸ್ ಹಗರಣವು ಏಪ್ರಿಲ್ 3, 2016 ರಂದು ಬೆಳಕಿಗೆ ಬಂದಿದೆ, ಕಂಪನಿಯ ಡಿಜಿಟಲ್ ಆರ್ಕೈವ್‌ಗಳಿಂದ ಸುಮಾರು 11.5 ಮಿಲಿಯನ್ ಫೈಲ್‌ಗಳು ಸೋರಿಕೆಯಾಗಿವೆ. ಈ ಪೇಪರ್ ಸೋರಿಕೆ ಹಗರಣವು ಎರಡು ದೇಶಗಳ ಸರ್ಕಾರದ ಮುಖ್ಯಸ್ಥರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತ್ತು ಮತ್ತು ಇತರ ಅನೇಕ ದೊಡ್ಡ ವ್ಯಕ್ತಿಗಳ ಖ್ಯಾತಿಗೆ ಧಕ್ಕೆ ತಂದಿತ್ತು. ಸೋರಿಕೆಯಾದ ಫೈಲ್‌ಗಳನ್ನು ಜರ್ಮನ್ ಪತ್ರಿಕೆ SZಗೆ ದೊರೆತಿವೆ. ಅದು ನಂತರ ಅವುಗಳನ್ನು ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟಕ್ಕೆ ಹಸ್ತಾಂತರಿಸಿದೆ.
ಇದನ್ನೂ ಓದಿ-Pushpa Box Office Collection:ಕೇವಲ ಎರಡೇ ದಿನಗಳಲ್ಲಿ 100 ಕೋಟಿ ಕ್ಲಬ್ ಗೆ ಶಾಮೀಲಾದ 'ಪುಷ್ಪಾ'
ನವಾಜ್ ಷರೀಫ್ ಅವರನ್ನು ಪಾಕಿಸ್ತಾನ ನ್ಯಾಯಾಲಯ ಅನರ್ಹಗೊಳಿಸಿದೆ
ನಂತರ ಈ ಸೋರಿಕೆಯಾದ ದಾಖಲೆಗಳು ಐಸ್‌ಲ್ಯಾಂಡ್‌ನ ಪ್ರಧಾನ ಮಂತ್ರಿ ಸಿಗ್ಮಂಡೂರ್ ಡೇವಿಡ್ ಗುನ್ಲಾಗ್ಸನ್ ಅವರ ರಾಜೀನಾಮೆಗೆ ಕಾರಣವಾಗಿದ್ದವು. ಇನ್ನೊಂದೆಡೆ ಈ ಹಿನ್ನೆಲೆ ಪಾಕಿಸ್ತಾನದ ನ್ಯಾಯಾಲಯವು ಆಗಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಉನ್ನತ ರಾಜಕೀಯ ಹುದ್ದೆಗೆ ಅನರ್ಹಗೊಳಿಸಿತ್ತು. ಈ ಸೋರಿಕೆ ಪ್ರಕರಣದಲ್ಲಿ ಬ್ರಿಟನ್‌ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್, ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ, ಅರ್ಜೆಂಟೀನಾ ಅಧ್ಯಕ್ಷ ಮಾರಿಶಿಯೊ ಮಸ್ರಿ ಮುಂತಾದವರ ಹೆಸರುಗಳೂ ಕೇಳಿಬಂದಿವೆ. ಯುಎಸ್ ಸೆಂಟರ್ ಫಾರ್ ಪಬ್ಲಿಕ್ ಇಂಟೆಗ್ರಿಟಿ ಪ್ರಕಾರ, ಈ ಪ್ರಕರಣಕ್ಕೆ ಸಂಬಂದಿಸಿದಂತೆ 79 ದೇಶಗಳಲ್ಲಿ ಕನಿಷ್ಠ 150 ತನಿಖೆಗಳು ಈಗಾಗಲೇ ನಡೆಯುತ್ತಿವೆ.
ಇದನ್ನೂ ಓದಿ-WATCH: ರಣವೀರ್ ಸಿಂಗ್, ಕ್ರಿಕೆಟರ್ ಶ್ರೀಕಾಂತ್ಗೆ ಕನ್ನಡ ಡೈಲಾಗ್ ಹೇಳಿಕೊಟ್ಟ ಕಿಚ್ಚ ಸುದೀಪ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.