ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಂಗಾಳಿ ಹಾಡು ‘ಕಚ್ಚಾ ಬಾದಮ್’ ಸಾಮಾಜಿಕ ಮಾಧ್ಯಮ(Social Media)ದಲ್ಲಿ ಸಾಕಷ್ಟು ವೈರಲ್ ಆಗಿದೆ. ಅನೇಕ ಸೆಲೆಬ್ರೆಟಿಗಳು ಮತ್ತು ಸಾಮಾನ್ಯ ಜನರು ಈ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಈ ಹಾಡಿನ ಸಾಹಿತ್ಯಕ್ಕೆ ಮನಸೋತಿರುವ ಅನೇಕರು ರೀಲ್ಸ್ ಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಈ ಹಾಡನ್ನು ಇದೀಗ ರಾನು ಮಂಡಲ್(Ranu Mondal)ಕೂಡ ಹಾಡಿದ್ದು ಟ್ರೋಲ್ ಆಗಿದ್ದಾರೆ. ಭುವನ್ ಬಡ್ಯಾಕರ್


COMMERCIAL BREAK
SCROLL TO CONTINUE READING

ಪಶ್ಚಿಮ ಬಂಗಾಳದ ಕಡಲೆಕಾಯಿ ವ್ಯಾಪಾರಿ ಭೂಬನ್ ಬಡ್ಯಾಕರ್ (Bhuban Badyakar)ಹಾಡಿದ ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿದೆ. ‘ಕಚ್ಚಾ ಬಾದಾಮ್’ ಹಾಡಿನ(Kacha Badam Song) ಡಿಜೆ ಸೇರಿದಂತೆ ಹಲವು ವರ್ಶನ್‍ಗಳು ಬಂದಿವೆ. ಈ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಹಾಡು ಹಾಡುವ ಮೂಲಕ ರಾತ್ರೋರಾತ್ರಿ ಸ್ಟಾರ್‌ ಆಗಿ ಮಿಂಚಿದ್ದ ರಾನು ಮಂಡಲ್ ಈ ವೈರಲ್ ಹಾಡನ್ನು ಹಾಡಿದ್ದಾರೆ. ತಮ್ಮದೇ ಸ್ಟೈಲ್ ನಲ್ಲಿ ರಾನು ಹಾಡಿರುವ ಈ ವಿಡಿಯೋ ಕೂಡ ವೈರಲ್ ಆಗಿದೆ.


ಇದನ್ನೂ ಓದಿ: Pushpa ಚಿತ್ರದ Saami Saami ಹಾಡಿನ ಈ ಪದಗಳ ಬಳಕೆಗೆ Sunidhi Chauhan ಆಕ್ಷೇಪವಿತ್ತಂತೆ


ರಾನು ಮಂಡಲ್ ಗೇಲಿ ಮಾಡಿದ ಜನರು!


Bhuban Badyakar) ಪ್ರತಿದಿನ ಕಡಲೆಕಾಯಿ ಮಾರಾಟ ಮಾಡಲು ಸೈಕಲ್‍ನಲ್ಲಿ ಊರಿಂದೂರಿಗೆ ಪ್ರಯಾಣಿಸುತ್ತಾರೆ. ಗ್ರಾಹಕರನ್ನು ಸೇಳೆಯಲು ಅವರು ತಾವೇ ಸ್ವತಃ ವಿಶೇಷ ಸಾಹಿತ್ಯ ರಚಿಸಿ ‘ಕಚ್ಚಾ ಬಾದಾಮ್’ ಹಾಡು ಹಾಡಿದ್ದರು. ಯಾವಾಗ ಈ ವಿಡಿಯೋ ವೈರಲ್ ಆಯಿತೋ ಬಡ್ಯಾಕರ್ ಕೂಡ ಫೇಮಸ್ ಆಗಿದ್ದಾರೆ. ಈ ಹಾಡಿಗೆ ಸೋಷಿಯಲ್ ಮೀಡಿಯಾ(Social Media) ಬಳಕೆದಾರರು ಹಲವು ಮ್ಯೂಸಿಕ್‍ನೊಂದಿಗೆ ರಿಮಿಕ್ಸ್ ಮಾಡಿ ರೀಲ್ಸ್ ಮಾಡುತ್ತಾ ಖುಷಿಪಡುತ್ತಿದ್ದಾರೆ.     


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.