ಹುಟ್ಟುಹಬ್ಬದ ಪ್ರಯುಕ್ತ ಶ್ರುತಿ ಹಾಸನ್ ಪಾತ್ರ ಅನಾವರಣಗೊಳಿಸಿದ ಸಲಾರ್ ಚಿತ್ರ ತಂಡ

 ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಇಂದು ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.ಶೃತಿ ಹಾಸನ್ ಮತ್ತು ಪ್ರಭಾಸ್ ಅವರ ಮುಂಬರುವ ಪ್ಯಾನ್ ಇಂಡಿಯಾ ಚಿತ್ರ ಸಲಾರ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ.

Written by - Zee Kannada News Desk | Last Updated : Jan 28, 2022, 05:32 PM IST
  • ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಇಂದು ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
  • ಶೃತಿ ಹಾಸನ್ ಮತ್ತು ಪ್ರಭಾಸ್ ಅವರ ಮುಂಬರುವ ಪ್ಯಾನ್ ಇಂಡಿಯಾ ಚಿತ್ರ ಸಲಾರ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ.
 ಹುಟ್ಟುಹಬ್ಬದ ಪ್ರಯುಕ್ತ ಶ್ರುತಿ ಹಾಸನ್ ಪಾತ್ರ ಅನಾವರಣಗೊಳಿಸಿದ ಸಲಾರ್ ಚಿತ್ರ ತಂಡ title=
Photo Courtesy: Twitter

ಮುಂಬೈ: ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಇಂದು ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.ಶೃತಿ ಹಾಸನ್ ಮತ್ತು ಪ್ರಭಾಸ್ ಅವರ ಮುಂಬರುವ ಪ್ಯಾನ್ ಇಂಡಿಯಾ ಚಿತ್ರ ಸಲಾರ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಏನಂದ್ರೂ ಅನುರಾಗ್ ಕಶ್ಯಪ್?

ಈ ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು, ಇಂದು ಬಾಹುಬಲಿ ಪ್ರಭಾಸ್ ಅವರ ಸಲಾರ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಇದರಲ್ಲಿ ನಟಿ ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಶ್ರುತಿ ಹಾಸನ್ ಅವರ 36 ನೇ ಹುಟ್ಟುಹಬ್ಬದಂದು ಪ್ರಭಾಸ್ ಮತ್ತು ಚಿತ್ರದ ನಿರ್ದೇಶಕರು ಅವರ ಪಾತ್ರದ ಫಸ್ಟ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

ಸಲಾರ್ ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ, ಈ ಸಿನಿಮಾ ಒಟ್ಟು ಬಜೆಟ್ 150 ಕೋಟಿ ರೂ.ಎಂದು ತಿಳಿದುಬಂದಿದೆ.

ಇದನ್ನೂ ಓದಿ:​ಕಿಚ್ಚನ ಅಭಿಮಾನಿಗಳಿಗೆ ನಿರಾಸೆ , ಸದ್ಯಕ್ಕಿಲ್ಲ ಬೆಳ್ಳಿ ಪರದೆ ಮೇಲೆ ವಿಕ್ರಾಂತ ರೋಣನ ದರ್ಶನ ..!

ಜನವರಿ 28, 1986 ರಂದು ಜನಿಸಿದ ಶ್ರುತಿ ಹಾಸನ್ ಅವರು ಚಲನಚಿತ್ರ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಮತ್ತು ನಟಿ ಸಾರಿಕಾ ಠಾಕೂರ್ ಅವರ ಪುತ್ರಿ.ಕಮಲ್ ಹಾಸನ್ ಮತ್ತು ಸಾರಿಕಾ ಠಾಕೂರ್ ವಿವಾಹವಾದಾಗ ಶೃತಿಗೆ ಎರಡು ವರ್ಷ.ಕಮಲ್ ತನ್ನ ಮೊದಲ ಪತ್ನಿ ವಾಣಿ ಗಣಪತಿಗೆ ವಿಚ್ಛೇದನ ನೀಡಿ ಸಾರಿಕಾ ಅವರನ್ನು ವಿವಾಹವಾದರು.

ಇದನ್ನೂ ಓದಿ: One Cut Two Cut Trailer Out Now : ಡ್ಯಾನಿಶ್ ಸೇಟ್ ಅಭಿನಯದ ಕನ್ನಡ ಕಾಮಿಡಿ-ಸಾಹಸ

ಶ್ರುತಿ ಹಾಸನ್ ಕೇವಲ ಆರನೇ ವಯಸ್ಸಿನಲ್ಲಿ ಹಿನ್ನೆಲೆ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ತಮ್ಮ ತಂದೆ ಕಮಲ್ ಹಾಸನ್ ಅವರ ತಮಿಳು ಚಿತ್ರ ತೇವರ್ ಮಗನ್ ಗಾಗಿ ಮೊದಲ ಹಾಡನ್ನು ಹಾಡಿದರು.

2000 ರಲ್ಲಿ, ಕಮಲ್ ಹಾಸನ್ ಅವರ ಹೇ ರಾಮ್ ಚಿತ್ರದಲ್ಲಿ ಒಂದು ಸಣ್ಣ ಪಾತ್ರದೊಂದಿಗೆ ಶ್ರುತಿ ಚಿತ್ರರಂಗಕ್ಕೆ ಕಾಲಿಟ್ಟರು.ಇದರ ನಂತರ, 2009 ರಲ್ಲಿ, ಅವರು ಸೋಹಮ್ ಶಾ ನಿರ್ದೇಶನದ ಬಹುತಾರಾಗಣದ ಚಿತ್ರ 'ಲಕ್' ನಲ್ಲಿ ನಟಿಯಾಗಿ ಕಾಣಿಸಿಕೊಂಡರು.ಈ ಚಿತ್ರದಲ್ಲಿ ಶ್ರುತಿ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಇದಾದ ನಂತರ ಶೃತಿ ಹಿಂದಿ ಹಾಗೂ ತಮಿಳು ಮತ್ತು ತೆಲುಗಿನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News