ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಸಿನಿಮಾಗಳು ಇತ್ತೀಚಿಗೆ ಬಾಕ್ಸ್ ಆಫೀಸ್ ನಲ್ಲಿ ಅಂತಹ ಸದ್ದು ಮಾಡದೆ ಇರಬಹುದು ಆದರೆ, ಅವರು ಯಾವುದೇ ಸಿನಿಮಾ ಪ್ರೊಮೋಷನ್ ಆಗಲಿ ಅವಾರ್ಡ್ ಫಂಕ್ಷನ್ ಆಗಲಿ, ಅಥವಾ ಇನ್ನ್ಯಾವುದೇ ಷೋಗಳ ಮೂಲಕ ಸದಾ ಸುದ್ದಿಯಲ್ಲಿರುವುದು ರಣವೀರ್ ಸಿಂಗ್ ಅವರ ವೈಖರಿ..


COMMERCIAL BREAK
SCROLL TO CONTINUE READING

ಹೌದು, ಈಗ ಅವರು ತಮ್ಮ ಹೊಸ ಫೋಟೋ ಶೂಟ್ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.ಇತ್ತೀಚೆಗೆ ಮುಂಬೈ ಬೀಚ್‌ನಲ್ಲಿ ರಣವೀರ್ ಸಿಂಗ್ 'ಪೇಪರ್' ಮ್ಯಾಗಜೀನ್‌ಗೆ ಬೆತ್ತಲೆಯಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರನ್ನೂ ಒಮ್ಮೆಗೆ ಹುಬ್ಬೇರಿಸುವಂತೆ ಮಾಡಿದ್ದಾರೆ.ಆಗಾಗ ಚಿತ್ರ ವಿಚಿತ್ರ ವೇಷ ಭೂಷಣಗಳನೊಂದಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ರಣವೀರ್ ಸಿಂಗ್ ರ ನಗ್ನ ಅವತಾರ ನೋಡಿದ ಪ್ರೇಕ್ಷಕರು ಆಶ್ಚರ್ಯವ್ಯಕ್ತಪಡಿಸಿದ್ದಾರೆ, ಅಷ್ಟೇ ಅಲ್ಲದೆ ಈಗ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.ಬೆತ್ತಲೆಯಾಗಿ ಕಾಣಿಸಿಕೊಂಡಿರುವ ಈ ಭಂಗಿಯು ಪುರಾತನ ಕಾಲದ ಗ್ರೀಕ್ ಪ್ರತಿಮೆಯನ್ನು ನೆನಪಿಸುತ್ತದೆ.


ಇದನ್ನೂ ಓದಿ: ಮಾವನ ಐಷಾರಾಮಿ ಬಂಗಲೆಯನ್ನು ಇಷ್ಟು ಕೋಟಿಗೆ ಮಾರಿದ ಖ್ಯಾತ ಚಿತ್ರ ನಿರ್ಮಾಪಕನ ಸೊಸೆ!


Bigg Boss Kannada: ಶುರುವಾಗಲಿದೆ ಮಿನಿ ಬಿಗ್​ಬಾಸ್! ಯಾರಿಗೆಲ್ಲ ಅವಕಾಶ?


ಇನ್ನೂ ಮುಂದುವರೆದು ಅವರು ಸಮಯ ಮತ್ತು ಜೀವನದ ಬಗೆಗಿನ ದೃಷ್ಟಿಕೋನ ಹಾಗೂ ಸಾವಿನ ವಿಚಾರವಾಗಿ ಸುದೀರ್ಘವಾಗಿ ಮಾತನಾಡುತ್ತಾ "ನಾನು ಮಲಗಿದ್ದಲ್ಲಿ ಅಥವಾ ಇನ್ನ್ಯಾವುದೋ ಸಂದರ್ಭದಲ್ಲಿ ಏನಾದರೂ ಆಗಬಹುದು, ಜೀವನ ಯಾವಾಗಲೂ ಸುಸ್ಥಿರವಲ್ಲ, ಇದನ್ನು ನಾನು ಅರ್ಥೈಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.


ಈ ಫೋಟೋ ಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಲವು ಮೀಮ್ಸ್ ಗಳು ಹಾಗೂ ಟ್ರೋಲಿಗರಿಗೆ ಆಹಾರವಾಗಿದೆ ಎಂದು ಹೇಳಬಹುದು.


ಸದ್ಯ ರಣವೀರ್ ಸಿಂಗ್ ಅವರು ರೋಹಿತ್ ಶೆಟ್ಟಿ ಅವರ 'ಸರ್ಕಸ್' ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಪೂಜಾ ಹೆಗ್ಡೆ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಕ್ರಿಸ್‌ಮಸ್ 2022 ರ ಬಿಡುಗಡೆಗೆ ಸಿದ್ಧವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.