ನವದೆಹಲಿ: ಹಿರಿಯ ಚಲನಚಿತ್ರ ನಿರ್ಮಾಪಕ ಬಿ.ಆರ್.ಚೋಪ್ರಾ ಅವರ ಬಂಗಲೆಯನ್ನು ಮಾರಾಟ ಮಾಡಲಾಗಿದೆ. ದಿವಂಗತ ಚಿತ್ರ ನಿರ್ಮಾಪಕರ ಸೊಸೆ ಕುಟುಂಬದ ಒಪ್ಪಿಗೆಯೊಂದಿಗೆ ಈ ಬಂಗಲೆಯನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಮುಂಬೈನ ಐಷಾರಾಮಿ ಪ್ರದೇಶವಾದ ಜುಹುದಲ್ಲಿ ಸಾವಿರಾರು ಚದರ ಅಡಿಗಳಷ್ಟು ಹರಡಿರುವ ಅವರ ಬಂಗಲೆ ತುಂಬಾ ಐಷಾರಾಮಿಯಾಗಿತ್ತು. ಸುಮಾರು 25 ಸಾವಿರ ಚದರಡಿ ಭೂಮಿಯಲ್ಲಿ ನಿರ್ಮಿಸಲಾದ ಈ ಐಷಾರಾಮಿ ಬಂಗಲೆ ಜುಹು ಪ್ರದೇಶದಲ್ಲಿ ಸುಮಾರು 1 ಎಕರೆ ಪ್ರದೇಶದಲ್ಲಿ ಹರಡಿದೆ.
ಇಷ್ಟು ಕೋಟಿಗೆ ಬಂಗಲೆ ಮಾರಾಟ
ಬಿ.ಆರ್.ಚೋಪ್ರಾ ಅವರು ತಮ್ಮ ಚಿತ್ರಗಳ ಜೊತೆಗೆ ಐಷಾರಾಮಿ ಬಂಗಲೆ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಿದ್ದರು. ಆದರೆ ಈಗ ಅವರ ಪ್ರೀತಿಯ ಬಂಗಲೆ ಮಾರಾಟವಾಗಿದೆ. ಈ ಬಂಗಲೆಯನ್ನು ಬಿ.ಆರ್.ಚೋಪ್ರಾರ ಸೊಸೆ ಮತ್ತು ರವಿ ಚೋಪ್ರಾರ ಪತ್ನಿ ರೇಣು ಚೋಪ್ರಾ ಅವರು ಸುಮಾರು 183 ಕೋಟಿ ರೂ.ಗೆ ರಿಯಲ್ ಎಸ್ಟೇಟ್ ಡೆವಲಪರ್‌ಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Sudeep in DKD: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲಿ ಕಿಚ್ಚ ಸುದೀಪ್! ಈ ದಿನದಂದು ಪ್ರಸಾರವಾಗಲಿದೆ ಶೋ
11 ಕೋಟಿ ರೂ. ಮುದ್ರಾಂಕ ಶುಲ್ಕ ಪಾವತಿ
ವರದಿಯ ಪ್ರಕಾರ ಈ ಬಂಗಲೆಯನ್ನು ಕಹೇಜಾ ಕಾರ್ಪ್ ಖರೀದಿಸಿದೆ. ಒಪ್ಪಂದದ ನಂತರ ಕಂಪನಿಯು ಸುಮಾರು 11 ಕೋಟಿ ರೂ.ಗಳ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದೆ. ಈ ಮನೆಯು ಬಿ.ಆರ್.ಚೋಪ್ರಾ ಅವರು ವ್ಯಾಪಾರ ಮಾಡುತ್ತಿದ್ದ 'ಸೀ ಪ್ರಿಸನ್ ಹೋಟೆಲ್' ಮುಂಭಾಗದಲ್ಲಿದೆ.
2008ರಲ್ಲಿ ನಿಧನರಾದ ಬಿ.ಆರ್.ಚೋಪ್ರಾ
ಸತತ ಫ್ಲಾಪ್ ಚಿತ್ರಗಳಿಂದ ಬಿ.ಆರ್.ಚೋಪ್ರಾರ ಪುತ್ರ ನಡೆಸುತ್ತಿರುವ ಪ್ರೊಡಕ್ಷನ್ ಹೌಸ್ ನಷ್ಟದಲ್ಲಿ ಸಾಗುತ್ತಿದೆ ಎಂದು ವರದಿಯಾಗಿದೆ. 2013ರಲ್ಲಿ ರವಿ ಚೋಪ್ರಾ ಅವರು ಈ ಬಂಗಲೆಯನ್ನು ಖಾಲಿ ಮಾಡಿದ್ದರು. ಈಗ ಈ ಬಂಗಲೆಯನ್ನು ಮಾರಾಟ ಮಾಡಲಾಗಿದೆ. ಬಿ.ಆರ್.ಚೋಪ್ರಾ ಅವರು ‘ಮಹಾಭಾರತ’ ಟಿವಿ ಶೋ ನಿರ್ಮಿಸಿದ್ದರು. ಈ ಪ್ರದರ್ಶನವು ಸಾಕಷ್ಟು ಪ್ರಸಿದ್ಧವಾಗಿತ್ತು. ಬಿ.ಆರ್.ಚೋಪ್ರಾ ಅವರು 2008ರಲ್ಲಿ ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು.
ಇದನ್ನೂ ಓದಿ: ಕಾಜೋಲ್, ಸೂರ್ಯ, ರೀಮಾ ಸೇರಿ ಆರು ಭಾರತೀಯರು ಆಸ್ಕರ್ ಸಮಿತಿಗೆ ಆಯ್ಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ