Archana Joglekar : ಶೂಟಿಂಗ್ ಸಮಯದಲ್ಲಿ ನಟರಿಗೆ ಅಪಘಾತವಾಗುವುದು ಸಾಮಾನ್ಯ, ಆದರೆ ಶೂಟಿಂಗ್ ಸಮಯದಲ್ಲಿ ನಟಿಯ ಮೇಲೆ ಅತ್ಯಾಚಾರ ನಡೆದಿರುವುದನ್ನು ನೀವು ಎಂದಾದರು ಕೇಳಿದ್ದೀರಾ..? ಹೌದು, 80-90 ರ ದಶಕದ ಜನಪ್ರಿಯ ನಟಿಯಾಗಿದ್ದ ನಟಿ ಅರ್ಚನಾ ಜೋಗ್ಲೇಕರ್ ಮೇಲೆ ಈ ರೀತಿಯ ಒಂದು ಕೃತ್ಯ ನಡೆದಿತ್ತು.


COMMERCIAL BREAK
SCROLL TO CONTINUE READING

ಅರ್ಚನಾ ಜೋಗ್ಲೇಕರ್ ಉತ್ತಮ ನಟಿ ಮಾತ್ರವಲ್ಲದೆ ಅತ್ಯುತ್ತಮ ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು. ಅವರು ತಮ್ಮ ಶಾಸ್ತ್ರೀಯ ನೃತ್ಯ ಕೌಶಲ್ಯವನ್ನು ತಾಯಿ ಆಶಾ ಜೋಗ್ಲೇಕರ್ ಅವರಿಂದ ಕಲಿತರು ಎಂದು ಹೇಳಲಾಗುತ್ತದೆ. ಅರ್ಚನಾ ಅವರ ತಾಯಿ ಆಶಾ ಅವರು ಮುಂಬೈನಲ್ಲಿ ಅರ್ಚನಾ ನೃತ್ಯಾಲಯ ಎಂಬ ಹೆಸರಿನಲ್ಲಿ ತಮ್ಮದೇ ಆದ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ.


ಇದನ್ನೂ ಓದಿ: ‘ಡ್ರೋನ್ʼದು ರೆಕ್ಕೆ ಪುಕ್ಕ ಎಲ್ಲಾ ಕಿತ್ತಾಕ್ತೀನಿ’.. vinay 'ಪ್ರತಾಪ'ಕ್ಕೆ ಕಣ್ಣೀರಟ್ಟ ಪ್ರತಾಪ್


ಅರ್ಚನಾ ಜೋಗ್ಲೇಕರ್ ಅವರು ಕಿಸ್ಸಾ ಶಾಂತಿ ಕಾ, ಕರ್ಮಭೂಮಿ ಮತ್ತು ಫೂಲ್ವತಿ ಸೇರಿದಂತೆ ಅನೇಕ ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಈ ಧಾರಾವಾಹಿಗಳು ಮೂಲಕ ಅರ್ಚನಾ ಮನೆಮಾತಾಗಿದ್ದರು. ಬಾಲಿವುಡ್ ಸೇರಿದಂತೆ ಹಲವು ಪ್ರಾದೇಶಿಕ ಸಿನಿಮಾಗಳಲ್ಲಿಯೂ ಸಹ ಅರ್ಚನಾ ನಟಿಸಿದ್ದಾರೆ.


ಸಧ್ಯ ಮಾಧ್ಯಮ ವರದಿಗಳ ಪ್ರಕಾರ, ಒಡಿಯಾ ಸಿನಿಮಾದ ಚಿತ್ರೀಕರಣದ ವೇಳೆ ವ್ಯಕ್ತಿಯೊಬ್ಬ ಅರ್ಚನಾ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದನಂತೆ. ಆದರೆ ಅದೃಷ್ಟವಶಾತ್ ಕೆಲವರು ಕೊನೆಯ ಕ್ಷಣದಲ್ಲಿ ನಟಿಯನ್ನು ರಕ್ಷಿಸಿದ್ದರಂತೆ. ನಂತರ ಆ ವ್ಯಕ್ತಿಯನ್ನು ಬಂಧಿಸಲಾಯಿತು, ಅಲ್ಲದೆ, ಆರೋಪಿಗೆ 18 ತಿಂಗಳ ಶಿಕ್ಷೆಯನ್ನೂ ವಿಧಿಸಲಾಯಿತು.


ಇದನ್ನೂ ಓದಿ: ಸ್ನೇಹಿತ್ ಅನ್ ಸ್ನೇಹಿತ್ ಆಗಿದ್ದಾರೆಯಂತೆ! ಮನೆ ನಾಯಕನ ವಿರುದ್ದ ನಮೃತಾ ಮುನಿಸು


2010ರಲ್ಲಿ ನಡೆದ ಈ ಘಟನೆ ಅಂದು ಬಹಳ ಗಾಂಭಿರ್ಯತೆಯನ್ನು ಪಡೆದುಕೊಂಡಿತ್ತು. ಸ್ಟಾರ್‌ಗಿರಿ ಬರುವ ಹೊತ್ತಿನಲ್ಲಿ ನಟಿ ಅರ್ಚನಾ ಗ್ಲಾಮರ್ ಜಗತ್ತನ್ನು ತೊರೆದು ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿದರು. ಸಧ್ಯ ಅವರು ನ್ಯೂಜೆರ್ಸಿಯಲ್ಲಿ ಅರ್ಚನಾ ನೃತ್ಯ ಶಾಲೆ ನಡೆಸುತ್ತಿದ್ದಾರೆ ಎನ್ನಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.