bigg boss 10 : ಸ್ನೇಹಿತ್ ಅನ್ ಸ್ನೇಹಿತ್ ಆಗಿದ್ದಾರೆಯಂತೆ! ಮನೆ ನಾಯಕನ ವಿರುದ್ದ ನಮೃತಾ ಮುನಿಸು

Biggboss Kannada : ಪವರ್ ಬಂದಾಗ ಬಹುಶಃ ಮೈಂಡ್‌ಸೆಟ್ ಬದಲಾಗುತ್ತೆ ಅನ್ನೋದು ಈಗ ಸದ್ಯ ದೊಡ್ಡ ಮನೆಯಲ್ಲಿ ಕೇಳಿಬರುತ್ತಿರುವ ಮಾತು. ಅಲ್ಲ್ದೆಸ್ನೇಹಿತ್ ಅಂ ಸ್ನೇಹಿತ ಆಗಿದ್ದಾರೆ ಅನ್ನುವ ಕುಹಕ ಕೂಡಾ ಇಲ್ಲಿದೆ. 

Written by - Ranjitha R K | Last Updated : Oct 13, 2023, 06:07 PM IST
  • ಮನೆ ನಾಯಕನ ವಿರುದ್ದ ಮನೆ ಮಂದಿ ಅಸಮಾಧಾನ
  • ಸ್ನೇಹಿತ್ ಆಗಿದ್ದರೆಯಂತೆ ಅನ್ ಸ್ನೇಹಿತ್
  • ನಮೃತಾಗೆ ಸ್ನೇಹಿತ್ ಮೇಲೆ ಮುನಿಸು
bigg boss 10 : ಸ್ನೇಹಿತ್ ಅನ್  ಸ್ನೇಹಿತ್ ಆಗಿದ್ದಾರೆಯಂತೆ! ಮನೆ ನಾಯಕನ ವಿರುದ್ದ  ನಮೃತಾ ಮುನಿಸು  title=

Biggboss Kannada :ಈ ಬಾರಿಯ ಬಿಗ್ ಬಾಸ್ ಸೀಸನ್ ನ ಮನೆಯ ಮೊದಲ ಕ್ಯಾಪ್ಟನ್  ಸ್ನೇಹಿತ್‌ ಇದ್ದಕ್ಕಿದ್ದಂಗೆ ಬದಲಾಗಿದ್ದಾರಾ? ಹೌದು, ಕ್ಯಾಪ್ಟನ್ ಆದ ಮೇಲೆ ಸ್ನೇಹಿತ್ ಬದಲಾಗಿದ್ದಾರೆ ಅನ್ನೋ ಮಾತು ದೊಡ್ಡ ಮನೆಯಲ್ಲಿ ಹರಿದಾಡ್ತಿದೆ.  ಪವರ್ ಬಂದಾಗ ಬಹುಶಃ ಮೈಂಡ್‌ಸೆಟ್ ಬದಲಾಗುತ್ತೆ ಅನ್ನೋದು ಈಗ ಸದ್ಯ ದೊಡ್ಡ ಮನೆಯಲ್ಲಿ ಕೇಳಿಬರುತ್ತಿರುವ ಮಾತು. ಅಲ್ಲ್ದೆಸ್ನೇಹಿತ್ ಅಂ ಸ್ನೇಹಿತ ಆಗಿದ್ದಾರೆ ಅನ್ನುವ ಕುಹಕ ಕೂಡಾ ಇಲ್ಲಿದೆ. 

ಇಶಾನಿಗೆ ಹಾಡು ಹೇಳ್ತಾ, ನಮ್ರತಾ ಜೊತೆಗೂ ಫ್ಲರ್ಟ್‌ ಮಾಡ್ತಾ ಎಲ್ಲರ ಜೊತೆಗೆ ಸ್ನೇಹದಿಂದ ಇದ್ದ ಸ್ನೇಹಿತ್‌ ಇದ್ದಕ್ಕಿದ್ದಂಗೆ ಬದಲಾಗಿದ್ದಾರಂತೆ. ಬಿಗ್ ಬಾಸ್ ಮನೆ ಮಂದಿಗೆ ಸದ್ಯ ಮನೆ ನಾಯಕನ ಮೇಲಿರುವ ದೂರು ಇದು. ಕ್ಯಾಪ್ಟನ್‌ಷಿಪ್‌ ಬಂದ ಮೇಲೆ ಸ್ನೇಹಿತ್ ವರ್ತನೆಯಲ್ಲಿ ಬದಲಾವಣೆ  ಕಾಣಿಸುತ್ತಿದೆ ಎನ್ನುವ ಆರೋಪ ಸ್ನೇಹಿತ್ ಸ್ನೇಹಿತರದ್ದೇ. 

ಇದನ್ನೂ ಓದಿ : Rachita Ram: ಅಭಿಮಾನಿ ಬೆನ್ನಮೇಲೆ ಬುಲ್‌ಬುಲ್‌ ಬೆಡಗಿ ಟ್ಯಾಟೋ..ವಿಡಿಯೋ ವೈರಲ್‌

ಇಂಥದೊಂದು ಚರ್ಚೆ ಬಿಗ್‌ಬಾಸ್ ಮನೆಯಲ್ಲಿ ಜೋರಾಗಿಯೇ ನಡೆದಿದೆ. ಅಡುಗೆಮನೆಯಲ್ಲಿ ಕಾರ್ತಿಕ್ ಬ್ಲ್ಯಾಕ್ ಕಾಫಿ ಕುಡಿಯುತ್ತಿದ್ರೆ, ಡ್ರೋನ್ ಪ್ರತಾಪ್ ಮೂಲೆಯಲ್ಲಿ ಸುಮ್ಮನೆ ಕೂತಿರ್ತಾರೆ. ಸಂಗೀತಾ ಮತ್ತು ತನಿಷಾ ನಡುವೆ ಕ್ಯಾಶುವಲ್‌ ಮಾತುಕತೆ ನಡೆಯುತ್ತಿತ್ತು. ಆಗ ಅಲ್ಲಿಗೆ ಬಂದ ನಮ್ರತಾ ಮೂಲೆಯಲ್ಲಿ ಕೂತಿದ್ದ ಡ್ರೋನ್‌ ಪ್ರತಾಪ್‌ ಕಡೆಗೆ ನೋಡಿ, ‘ಡ್ರೋಣೂ… ಏನಾಯ್ತು?’ ಅಂತ ಕೇಳಿದ್ದಾರೆ. ಅದಕ್ಕೆ ಡ್ರೋಣ್ ಪ್ರತಾ ಪ್, ‘ಬೇಜಾರಾಯ್ತು. ನೀವು ಟಾಸ್ಕ್ ಗೆಲ್ಲಲಿಲ್ವಲ್ಲಾ ಅದ್ಕೆ’ ಎಂದು ಹೇಳಿದ್ದಾರೆ. 

ನೀವು ಗೆದ್ದಿದ್ರೆ ನಾನು ಆರಾಮಾಗಿರ್ತಿದ್ದೆ ಅನ್ನೋದನ್ನು ಕೂಡಾ ಪ್ರತಾಪ ಇಲ್ಲಿ ಸೇರಿಸ್ತಾರೆ. ಅದಕ್ಕೆ ನಮ್ರತಾ, ‘ಅಲ್ವಾ? ನಾನು ಗೆದ್ದಿದ್ರೆ ನಿಮ್ಮನ್ನು ಟಾಪ್‌ನಲ್ಲಿಡ್ತಿದ್ದೆ ಅಂತಾರೆ. ‘ನಂಗಂತೂ ಸಹಾಯ ಮಾಡ್ತಿದ್ರಲ್ಲಾ’ ಎಂದು ಕೇಳಿದ್ದಾರೆ ಪ್ರತಾಪ್. ಅದ್ಕೆ ನಮ್ರತಾ, ‘ಗೊತ್ತಿಲ್ಲ. ಪವರ್ ಬಂದಾಗ್ಲೇ ಅಲ್ವಾ ಗೊತ್ತಾಗೋದು.ಪವರ್ ಬಂದಾಗ ಬಹುಶಃ ಮೈಂಡ್‌ಸೆಟ್ ಬದಲಾಗತ್ತೆ ಅನ್ಸತ್ತೆ. ಈಗ ಸ್ನೇಹಿತ್ ಅನ್‌ಸ್ನೇಹಿತ್ ಆಗ್ಲಿಲ್ವಾ?’ ಎಂದು ಹೇಳಿ ನಕ್ಕಿದ್ದಾರೆ. 

ಇದನ್ನೂ ಓದಿ : ಇಶಾನಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಕುಳಿತ ಮೈಕಲ್‌: ಬಿಗ್‌ಬಾಸ್‌ನಲ್ಲಿ ಹೊಸ ಪ್ರೇಮ್‌ ಕಹಾನಿ.! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News