MC Stan : ರ‍್ಯಾಪರ್ ಎಂಸಿ ಸ್ಟ್ಯಾನ್ ಶೋಗೆ ʼಭಜರಂಗ ದಳʼ ಸದಸ್ಯರಿಂದ ಅಡ್ಡಿ..! ವಿಡಿಯೋ ವೈರಲ್
Bajrang dal MC Stan : ಹಿಂದಿ ಬಿಗ್ ಬಾಸ್ ವಿನ್ನರ್ ರ‍್ಯಾಪರ್ ಎಂಸಿ ಸ್ಟ್ಯಾನ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ವೇದಿಕೆ ಏರಿದ ಭಜರಂಗದಳದ ಸದಸ್ಯರು ಜೈ ಶ್ರೀರಾಮ್ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡಿದ ಹಿನ್ನೆಲೆ ಸ್ಟ್ಯಾನ್ ಶೋವನ್ನು ರದ್ದುಗೊಳಿಸಿರುವುದಾಗಿ ವರದಿಯಾಗಿದೆ. ಅಲ್ಲದೆ, ಈ ಕುರಿತು ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
MC Stan Hasti Ka Basti : ಖ್ಯಾತ ರ‍್ಯಾಪರ್ ಎಂಸಿ ಸ್ಟ್ಯಾನ್ ಕಳೆದ ತಿಂಗಳು ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ 16 ಅನ್ನು ಗೆಲ್ಲುವ ಮೂಲಕ ಪ್ಯಾನ್ ಇಂಡಿಯಾ ಲವೆಲ್‌ನಲ್ಲಿ ಚಿರಪರಿಚಿತರಾಗಿದ್ದಾರೆ. ಸ್ಟ್ಯಾನ್ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಿಯಾಂಕಾ ಚಾಹರ್ ಚೌಧರಿ, ಶಿವ ಠಾಕರೆ, ಅರ್ಚನಾ ಗೌತಮ್ ಮತ್ತು ಶಾಲಿನ್ ಭಾನೋಟ್ ಅವರನ್ನು ಸೋಲಿಸಿದರು. ಇದೀಗ ರಾಪರ್ ʼಎಂಸಿ ಸ್ಟಾನ್ ಹಸ್ತಿ ಕಾ ಬಸ್ತಿʼ ಎಂಬ ಹೆಸರಿನ ರಾಷ್ಟ್ರವ್ಯಾಪಿ ಪ್ರವಾಸವನ್ನು ಪ್ರಾರಂಭಿಸ್ದಾರೆ.
ʼಎಂಸಿ ಸ್ಟಾನ್ ಹಸ್ತಿ ಕಾ ಬಸ್ತಿʼ ಶೋ ಮೂಲಕ ಸ್ಟ್ಯಾನ್ ಪುಣೆ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಪ್ರದರ್ಶನ ನೀಡಿದ್ದಾರೆ. ಮಾರ್ಚ್ 17 ರ ಶುಕ್ರವಾರ ರಾತ್ರಿ ಇಂದೋರ್‌ನಲ್ಲಿ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಬಜರಂಗದಳದ ಕೆಲವು ಸದಸ್ಯರು ಸ್ಥಳದಲ್ಲಿ ಗದ್ದಲ ಸೃಷ್ಟಿಸಿದ ನಂತರ ರದ್ದುಗೊಳಿಸಲಾಯಿತು ಎಂದು ಹೇಳಲಾಗುತ್ತಿವೆ. ರ‍್ಯಾಪರ್ ತನ್ನ ಹಾಡುಗಳಲ್ಲಿ ಅಸಭ್ಯ ಪದಗಳನ್ನು ಬಳಸಿ ದೇಶದ ಯುವ ಮನಸ್ಸನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದು ಭಜರಂಗದಳ ಸದಸ್ಯರು ಆರೋಪಿಸಿದ್ದಾರೆ. ಅಲ್ಲದೆ, ವೇದಿಕೆ ವಶಪಡಿಸಿಕೊಂಡು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ಈ ಕುರಿತು ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಆಸ್ಕರ್‌ನಲ್ಲಿ ʻನಾಟು ನಾಟುʼ ಪ್ರದರ್ಶನ ನೀಡದಿರಲು ಅಸಲಿ ಕಾರಣ ಬಿಚ್ಚಿಟ್ಟ ರಾಮ್ ಚರಣ್!
ಇನ್ನು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೆ ನೆಟ್ಟಿಗರು ಭಜರಂಗದಳ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೇವರು ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಅಂತ ಹೇಳುತ್ತಿದ್ದಾರೆ. ಅಲ್ಲದೆ, ಇನ್ನು ಕೆಲವರು, ಹಿಂದೂ ಆಗಿರುವ ನಾನು ಅವರ ಪರವಾಗಿ ಕ್ಷಮೆಯಾಚಿಸುತ್ತೇನೆ, ಈ ಜನರು ನಮ್ಮ ಹೆಸರಿಗೆ ಅವಮಾನ ತಂದಿದ್ದಾರೆ, ನನ್ನನ್ನು ಕ್ಷಮಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಹಲವಾರು ರೀತಿಯ ಪ್ರತಿಕ್ರಿಯೆಗಳು ಈ ವೈರಲ್ ವಿಡಿಯೋಗೆ ಬರುತ್ತಿವೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.