Ram Charan : ಆಸ್ಕರ್‌ನಲ್ಲಿ ʻನಾಟು ನಾಟುʼ ಪ್ರದರ್ಶನ ನೀಡದಿರಲು ಅಸಲಿ ಕಾರಣ ಬಿಚ್ಚಿಟ್ಟ ರಾಮ್ ಚರಣ್!

Ram Charan On Oscars 2023 : ಭಾರತದಲ್ಲಿ ಸೂಪರ್‌ ಹಿಟ್‌ ಆದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಈ ಬಾರಿ ಆಸ್ಕರ್‌ ಅವಾರ್ಡ್‌ ಗೆದ್ದಿದೆ. ಇದರಿಂದಾಗಿ ಅದರ ಖ್ಯಾತಿ ವಿಶ್ವದೆಲ್ಲೆಡೆ ಹರಡಿದೆ.  ಇತ್ತೀಚಿನ ಸಂದರ್ಶನವೊಂದರಲ್ಲಿ, ಆಸ್ಕರ್‌ನ ಅನುಭವವನ್ನು ರಾಮ್‌ ಚರಣ್ ಹಂಚಿಕೊಂಡಿದ್ದಾರೆ. ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಸ್ಟೆಪ್‌ ಹಾಕದಿರಲು ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ. 

Written by - Chetana Devarmani | Last Updated : Mar 18, 2023, 01:38 PM IST
  • ಆರ್‌ಆರ್‌ಆರ್ ಸ್ಟಾರ್ ರಾಮ್ ಚರಣ್
  • ಆಸ್ಕರ್‌ ಅನುಭವವನ್ನು ಹಂಚಿಕೊಂಡ ರಾಮ್‌ ಚರಣ್
  • ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಸ್ಟೆಪ್‌ ಹಾಕದಿರಲು ಇದೇ ಕಾರಣ!
Ram Charan : ಆಸ್ಕರ್‌ನಲ್ಲಿ ʻನಾಟು ನಾಟುʼ ಪ್ರದರ್ಶನ ನೀಡದಿರಲು ಅಸಲಿ ಕಾರಣ ಬಿಚ್ಚಿಟ್ಟ ರಾಮ್ ಚರಣ್!  title=
Ram Charan

Ram Charan Latest News: ಆಸ್ಕರ್‌ನಲ್ಲಿ ಭಾರತದ ಧ್ವಜವನ್ನು ಹಾರಿಸಿದ ನಂತರ, ಆರ್‌ಆರ್‌ಆರ್ ಸ್ಟಾರ್ ರಾಮ್ ಚರಣ್ ಭಾರತಕ್ಕೆ ಮರಳಿದ್ದಾರೆ. ಅಭಿಮಾನಿಗಳು ಅವರಿಗೆ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ನೀಡಿದರು. ಉತ್ಸಾಹದಿಂದ ತುಂಬಿದ ಬೃಹತ್ ಜನಸಮೂಹವು ರಾಮ್ ಚರಣ್ ಮತ್ತು ಇತರ ತಾರೆಯರ ಉತ್ಸಾಹವನ್ನು ಹೆಚ್ಚಿಸಿತು. ಅದೇ ಸಮಯದಲ್ಲಿ, ಭಾರತಕ್ಕೆ ಬಂದ ನಂತರ, ಎಲ್ಲರೂ ರಾಮ್‌ ಚರಣ್ ಅವರನ್ನು ಸಂದರ್ಶನ ಮಾಡಲು ಬಯಸುತ್ತಿದ್ದಾರೆ. ಅಂತಹ ಇತ್ತೀಚಿನ ಸಂದರ್ಶನವೊಂದರಲ್ಲಿ, ಆಸ್ಕರ್‌ನ ಅನುಭವವನ್ನು ಹಂಚಿಕೊಂಡ ರಾಮ್‌ ಚರಣ್, ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಹಾಡಿನ ಪ್ರದರ್ಶನವನ್ನು ‌ನೀಡದಿರಲು ಕಾರಣವನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Bhumi Pednekar : ಸೆಕ್ಸಿ-ರೆಟ್ರೋ ಜಂಪ್‌ಸೂಟ್‌ನಲ್ಲಿ ಫೋಸ್‌ ನೀಡಿದ ಭೂಮಿ ಪೆಡ್ನೇಕರ್!

ಆಸ್ಕರ್ ವೇದಿಕೆಯಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಜನರು ಕೊನೆಯವರೆಗೂ ಉಸಿರು ಬಿಗಿ ಹಿಡಿದುಕೊಂಡು ಇವರ ನೃತ್ಯಕ್ಕಾಗಿ ಕಾಯುತ್ತಿದ್ದರು. ಆದರೆ ಇದು ಆಗಲಿಲ್ಲ, ಆದರೆ ವೇದಿಕೆಯಲ್ಲಿ ಇತರ ಕಲಾವಿದರು ಈ ಹಾಡಿಗೆ ಪ್ರದರ್ಶನ ನೀಡಿದರು. ಆ ಬಳಿಕ ಈ ಪ್ರದರ್ಶನದ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾದವು, ಹಾಡಿನ ಮೂಲ ಕಲಾವಿದರಿಬ್ಬರೂ ಏಕೆ ಸ್ಟೆಪ್‌ ಹಾಕಲಿಲ್ಲ ಎಂಬುದೇ ಆಶ್ಚರ್ಯವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರಾಮ್ ಚರಣ್, "ನಾವು ಕಾಯುತ್ತಿದ್ದೆವು. ಆದರೆ ಆಸ್ಕರ್ ಕಡೆಯಿಂದ ಅವರನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಅವರು ವೇದಿಕೆಯಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ" ಎಂದು ತಿಳಿಸಿದ್ದಾರೆ. 

ಅದೇ ಸಂದರ್ಶನದಲ್ಲಿ, ರಾಮ್ ಚರಣ್ ಹಾಡಿನ ಚಿತ್ರೀಕರಣಕ್ಕೆ ಸಂಬಂಧಿಸಿದ ಅನುಭವವನ್ನು ಹಂಚಿಕೊಂಡರು. ಹಾಡನ್ನು 17 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು. ಇದರ ಶೂಟಿಂಗ್ 12 ದಿನಗಳನ್ನು ತೆಗೆದುಕೊಂಡಿತು ಮತ್ತು ಅದನ್ನು 7 ದಿನಗಳ ಕಾಲ ಹಗಲು - ರಾತ್ರಿ ಅಭ್ಯಾಸ ಮಾಡಲಾಯಿತು. ಈ ಹಾಡಿನ ಸ್ಟೆಪ್ಸ್ ಮಾಡೋದು ತುಂಬಾನೇ ಕಷ್ಟ. ಆದರೆ ರಾಮ್ ಚರಣ್ ಪ್ರಕಾರ, ಅವರು ಈ ಹಿಂದೆ ಹೆಚ್ಚು ಕಷ್ಟಕರವಾದ ಸ್ಟೆಪ್ಸ್‌ ಇರುವ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಆದರೆ ಈ ಹಾಡಿನಲ್ಲಿ ಕಷ್ಟವೆಂದರೆ ಇಬ್ಬರೂ ನಟರು ಒಂದೇ ರೀತಿ ನೃತ್ಯ ಮಾಡಬೇಕಾಗಿತ್ತು. ಇದನ್ನು ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅದ್ಭುತವಾಗಿ ಅಳವಡಿಸಿಕೊಂಡಿದ್ದಾರೆ. 

ಇದನ್ನೂ ಓದಿ: "KGF2 ಸೆಟ್‌ನಲ್ಲಿ ಮುಜುಗರ, ಯಶ್‌ ಜತೆ ಇನ್ಯಾವತ್ತೂ ಕೆಲಸ ಮಾಡಲ್ಲ" ವೈರಲ್‌ ಟ್ವೀಟ್‌ಗೆ ಶ್ರೀನಿಧಿ ಶೆಟ್ಟಿ ಸ್ಪಷ್ಟನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News