Rashmika Mandanna : ರಶ್ಮಿಕಾ ಮಂದಣ್ಣ ಮತ್ತು ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಡೇಟಿಂಗ್ ವದಂತಿ ಜೋರಾಗಿ ಹಬ್ಬುತ್ತಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಡೇಟಿಂಗ್ ವದಂತಿಗಳು ಕಾಲಕಾಲಕ್ಕೆ ಮುನ್ನೆಲೆಗೆ ಬರುತ್ತಿತ್ತು. ಇಬ್ಬರೂ ವಿವಿಧ ಸಮಯಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲದೆ, ಅಭಿಮಾನಿಗಳು ಶೀಘ್ರದಲ್ಲೇ ಇವರಿಬ್ಬರ ಮದುವೆಗೆ ಕಾಯುತ್ತಿದ್ದರು. ಆದರೆ ಇತ್ತೀಚೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ದೂರವಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 


COMMERCIAL BREAK
SCROLL TO CONTINUE READING

ಈ ವೇಳೆ ರಶ್ಮಿಕಾ ಮಂದಣ್ಣ ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್ ಜೊತೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳು ಈಗ ಗೊಂದಲಕ್ಕೀಡಾಗಿದ್ದು, ನಾನಾ ರೀತಿಯಲ್ಲಿ ಮಾತನಾಡತೊಡಗಿದ್ದಾರೆ. ನಂತರ, ಬೆಲ್ಲಂಕೊಂಡ ಶ್ರೀನಿವಾಸ್ ಮತ್ತು ರಶ್ಮಿಕಾ ಜೋಡಿಯಾಗಿ ಶೋ ಒಂದರಲ್ಲಿ ಭಾಗವಹಿಸಿದರು. ಅಂದಿನಿಂದ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳಲಾರಂಭಿಸಿದ್ದಾರೆ.


ಇದನ್ನೂ ಓದಿ : Mamta Kulkarni: ಟಾಪ್‌ಲೆಸ್ ಫೋಟೋಶೂಟ್‌, ಅಂಡರ್‌ವಲ್ಡ್‌ ಸಂಪರ್ಕ.. ವಿವಾದದಲ್ಲೇ ಜೀವನ ಕಳೆದ ಖ್ಯಾತ ನಟಿ!


ಏತನ್ಮಧ್ಯೆ, ರಶ್ಮಿಕಾ ಮತ್ತು ಬೆಲ್ಲಂಕೊಂಡ ಶ್ರೀನಿವಾಸ್ ಪ್ರಸ್ತುತ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅವರ ಹತ್ತಿರದ ವ್ಯಕ್ತಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದೆ. ರಶ್ಮಿಕಾಗೆ ಶ್ರೀನಿವಾಸ್ ಎಂದರೆ ತುಂಬಾ ಇಷ್ಟ, ಹೀಗಾಗಿ ಇವರಿಬ್ಬರು ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಹೆಚ್ಚಿದೆ. ಆದರೆ, ರಶ್ಮಿಕಾ ಮತ್ತು ಬೆಲ್ಲಂಕೊಂಡ ಶ್ರೀನಿವಾಸ್ ಅವರ ಡೇಟಿಂಗ್‌ ಬಗ್ಗೆ ಅಧಿಕೃತವಾಗಿ ಖಚಿತವಾಗಿಲ್ಲ. ಆದರೆ ಈ ಸುದ್ದಿ ಹೊರಬಿದ್ದಾಗಿನಿಂದಲೂ ವಿಜಯ್ ದೇವರಕೊಂಡ ಅಭಿಮಾನಿಗಳು ಕಂಗಾಲಾಗಿದ್ದಾರೆ.


ಇದಕ್ಕೂ ಮೊದಲು ರಶ್ಮಿಕಾ ಮಂದಣ್ಣ 2016 ರಲ್ಲಿ ಬಿಡುಗಡೆಯಾದ ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಪ್ರಸ್ತುತ, ಅವರು ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ನಿರ್ಮಾಣದ ರೈನ್ಬೋ ಎಂಬ ಚಿತ್ರದಲ್ಲಿ ನಟಿಸಲು ಬದ್ಧರಾಗಿದ್ದಾರೆ. ಈ ಚಿತ್ರದಲ್ಲಿ ಸಗುಂತಲಂ ನಟ ದೇವ್ ಮೋಹನ್ ಅವರ ಜೊತೆ ನಟಿಸಲಿದ್ದಾರೆ. ಸಂಗೀತ ಸಂಯೋಜಕ ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರದ ಶೂಟಿಂಗ್ ಏಪ್ರಿಲ್ 7 ರಂದು ಪ್ರಾರಂಭವಾಗಲಿದೆ.


ಇದನ್ನೂ ಓದಿ : Kiccha Sudeep : ಕಿಚ್ಚನ ರಾಜಕೀಯ ಎಂಟ್ರಿ.!? ಕಮಲ ಹಿಡಿಯೋದು ಪಕ್ಕನಾ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.