Rashmika Mandanna and Vijay Deverakonda: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಆದಾಗ್ಯೂ, ಈ ವರ್ಷದ ಆರಂಭದಲ್ಲಿ, ಅವರ ಬ್ರೇಕಪ್‌ ವರದಿಗಳು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಈಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದ್ದು, ಪ್ಯಾಚ್‌ಅಪ್‌ ವದಂತಿಗಳಿಗೆ ಪುಷ್ಠಿ ನೀಡಿದೆ.


COMMERCIAL BREAK
SCROLL TO CONTINUE READING

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ತಮ್ಮ ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ನಲ್ಲಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ರೆಡ್ಡಿಟ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇದ್ದಾರೆ. ಇಬ್ಬರು ಮತ್ತೆ ಪ್ಯಾಚ್‌ಅಪ್‌ ಮಾಡಿಕೊಂಡಿದ್ದಾರೆಯೇ ಎಂದು ಅಭಿಮಾನಿಗಳು ಆಶ್ಚರ್ಯ ಪಡುವಂತೆ ಮಾಡಿದೆ.  


ಇದನ್ನೂ ಓದಿ :  ʼಸೀತಾರಾಮʼ ಧಾರಾವಾಹಿ ಲಾಂಚ್ ಬಗ್ಗೆ ಡಿಕೆಡಿ ವೇದಿಕೆಯಲ್ಲಿ ರೀವಿಲ್‌..!


ರಶ್ಮಿಕಾ ಮತ್ತು ವಿಜಯ್ ಅವರ ಬ್ರೇಕ್ ಅಪ್ ವದಂತಿಗಳ ಎರಡು ತಿಂಗಳ ನಂತರ ಈ ವಿಡಿಯೋ ವೈರಲ್‌ ಆಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಬಂದ ವರದಿಗಳ ಪ್ರಕಾರ, ರಶ್ಮಿಕಾ ಅವರು ದೇವರಕೊಂಡ ಅಲ್ಲ, ತೆಲುಗು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅವರನ್ನು ನಿಜವಾಗಿಯೂ ಇಷ್ಟಪಡುತ್ತಾರೆ ಎಂದು ಹೇಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮತ್ತು ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ವದಂತಿಗಳು ಹೆಚ್ಚಾಗಿ ಹಬ್ಬಲು ಕಾರಣವಾಗಿದೆ. 


 



 


ಆದರೆ ಕೆಲದಿನಗಳ ಹಿಂದೆ ಶ್ರೀನಿವಾಸ್ ತಮ್ಮ ಡೇಟಿಂಗ್ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ. ಅವುಗಳನ್ನು 'ಆಧಾರರಹಿತ' ಎಂದು ಕರೆದಿದ್ದಾರೆ. ತಾವಿಬ್ಬರೂ ಕೇವಲ 'ಒಳ್ಳೆಯ ಸ್ನೇಹಿತರು' ಎಂದು ಸ್ಪಷ್ಟಪಡಿಸಿದ್ದಾರೆ. 


ಇದನ್ನೂ ಓದಿ : "ಅವರನ್ನು ಬಿಟ್ಟು ಯಾರಿಗೂ ಲಿಪ್ ಲಾಕ್ ಮಾಡಲ್ಲ" ಎಂದ ಕೀರ್ತಿ ಸುರೇಶ್!?


ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಇದಕ್ಕೂ ಮೊದಲು, ಇಬ್ಬರೂ ತಮ್ಮ ಹೊಸ ವರ್ಷದಂದು ಒಂದೇ ರೀತಿಯ ಸ್ಥಳಗಳನ್ನು ಒಳಗೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಇದಕ್ಕೂ ಮೊದಲು, ಸಂದರ್ಶನ ವೊಂದರಲ್ಲಿ, ರಶ್ಮಿಕಾ ಅವರು ವಿಜಯ್ ಅವರಿಗೆ ತುಂಬಾ ಹತ್ತಿರವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.