Prerana Kambam in Bigg Boss: ತೆಲುಗಿನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ಕಾರ್ಯಕ್ರಮ ಬಿಗ್ ಬಾಸ್. ಈ ಶೋನ ಹೊಸ ಸೀಸನ್‌ ಸೆಪ್ಟೆಂಬರ್ 1 ರಂದು ಪ್ರಾರಂಭವಾಗಿದೆ. ನಟ ನಾಗಾರ್ಜುನ ಅಕ್ಕಿನೇನಿ ಈ ರಿಯಾಲಿಟಿ ಶೋ ಅನ್ನು ಹೋಸ್ಟ್‌ ಮಾಡಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಒಂದೇ ಬಾಲ್‌, ಬ್ಯಾಟ್ಸ್‌ʼಮನ್‌ʼಗೆ ದಕ್ಕಿದ್ದು 286 ರನ್:‌ ಕ್ರಿಕೆಟ್‌ʼನ ಆಶ್ಚರ್ಯಕರ ಇನ್ನಿಂಗ್ಸ್‌


ಅಂದಹಾಗೆ ಈ ಶೋನಲ್ಲಿ ನಿಖಿಲ್ ಮಲಯಕ್ಕಲ್ ಎರಡನೇ ಸ್ಪರ್ಧಿ, ಮೂರನೇ ಸ್ಪರ್ಧಿಯಾಗಿ ಅಭಯ್ ನವೀನ್, ನಾಲ್ಕನೇ ಸ್ಪರ್ಧಿಯಾಗಿ ಪ್ರೇರಣಾ, ಐದನೇ ಸ್ಪರ್ಧಿಯಾಗಿ ಆದಿತ್ಯ ಓಂ, ಆರನೇ ಸ್ಪರ್ಧಿಯಾಗಿ ಸೋನಿಯಾ, ಏಳನೇ ಸ್ಪರ್ಧಿಯಾಗಿ ಮಧು ನೆಕ್ಕಂಟಿ (ಬೆಜವಾಡ ಬೇಬಕ್ಕ), ಎಂಟನೇ ಸ್ಪರ್ಧಿಯಾಗಿ ಆರ್ ಜೆ ಶೇಖರ್ ಭಾಷಾ, ಒಂಬತ್ತನೇ ಸ್ಪರ್ಧಿಯಾಗಿ ಕಿರಕ್ ಸೀತಾ, ಹತ್ತನೇ ಸ್ಪರ್ಧಿಯಾಗಿ ನಾಗಮಣಿಕಂಠ, ಹನ್ನೊಂದನೇ ಸ್ಪರ್ಧಿಯಾಗಿ ಪೃಥ್ವಿರಾಜ್, ವಿಷ್ಣುಪ್ರಿಯಾ ಹನ್ನೆರಡನೇ ಸ್ಪರ್ಧಿ, ಹದಿಮೂರನೇ ಸ್ಪರ್ಧಿಯಾಗಿ ನೈನಿಕಾ ಮತ್ತು ನಬೀಲ್ ಅಫ್ರಿದಿ ಹದಿನಾಲ್ಕನೇ ಸ್ಪರ್ಧಿಯಾಗಿ ಪ್ರವೇಶ ಪಡೆದಿದ್ದಾರೆ.   


ಇದರಲ್ಲಿ ನಾಲ್ಕನೇ ಸ್ಪರ್ಧಿಯಾಗಿ ಪ್ರವೇಶ ಪಡೆದವರು ಕನ್ನಡದ ಸ್ಟಾರ್‌ ನಟಿ. ಜೂನ್ 18, 1996 ರಂದು ಜನಿಸಿದ ಪ್ರೇರಣಾ ಮೂಲತಃ ತೆಲಂಗಾಣದ ಹೈದರಾಬಾದ್‌ʼನವರು. "ಹರ ಹರ ಮಹಾದೇವ" ಧಾರಾವಾಹಿಯ ಮೂಲಕ ಕನ್ನಡ ಧಾರಾವಾಗಿ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು.


2018 ರಲ್ಲಿ ಪ್ರೇರಣಾ "ಚೂರಿಕಟ್ಟೆ" ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಲ್ಲದೆ, ಪ್ರೇರಣಾ ಕನ್ನಡ ಚಲನಚಿತ್ರಗಳಾದ ಆನ, ಪೆಂಟಗನ್, ಫಿಸಿಕ್ಸ್ ಟೀಚರ್‌ ಮುಂತಾದವುಗಳಲ್ಲಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ: ಬೇರಿನಿಂದಲೇ ಬಿಳಿಕೂದಲನ್ನು ಕಡುಕಪ್ಪಾಗಿಸಲು ಈ ಹಣ್ಣಿನ ಒಂದೇ ಒಂದು ಪೀಸ್ ತಿನ್ನಿ


ಇನ್ನು 2021 ರಲ್ಲಿ, ಪ್ರೇರಣಾ ಬಿಗ್ ಬಾಸ್ ಕನ್ನಡ ಮಿನಿ-ಸೀಸನ್‌ʼನಲ್ಲಿ ಸ್ಪರ್ಧಿಯಾಗಿ ಆಗಮಿಸಿದ್ದರು. ಪ್ರೇರಣಾ ಅವರ ಪತಿ ಹೆಸರು ಶ್ರೀಪಾದ್ ದೇಶಪಾಂಡೆ. ಅಂದಹಾಗೆ ರಶ್ಮಿಕಾ ಮಂದಣ್ಣ ಮತ್ತು ನಾನು ಕ್ಲೋಸ್‌ ಫ್ರೆಂಡ್, ಒಟ್ಟಾಗಿ ಆಡಿಷನ್‌ʼಗಳಿಗೆ ಹೋಗುತ್ತಿದ್ದೆವು ಎಂದು ಪ್ರೇರಣಾ ಒಂದೊಂಮೆ ಹೇಳಿಕೊಂಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.