ಒಂದೇ ಬಾಲ್‌... ಬ್ಯಾಟ್ಸ್‌ʼಮನ್‌ʼಗೆ ದಕ್ಕಿದ್ದು 286 ರನ್:‌ ವರ್ಲ್ಡ್ ಕ್ರಿಕೆಟ್‌ʼನ ಅಸಂಭವ... ಅರ್ತ್ಯಾಶ್ಚರ್ಯಕರ ಇನ್ನಿಂಗ್ಸ್‌ ಇದು

Unique Cricket Record: 1894 ರಲ್ಲಿ ಕ್ರಿಕೆಟ್ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಬ್ಯಾಟ್ಸ್‌ಮನ್‌ʼಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ODI ಪಂದ್ಯದ ಸ್ಕೋರ್ ಮಾಡಿದ್ದರು.

Written by - Bhavishya Shetty | Last Updated : Sep 5, 2024, 07:48 PM IST
    • ಕ್ರಿಕೆಟ್‌ ಅಂದ್ರೆ ಸಿಕ್ಸರ್‌-ಬೌಂಡರಿಗಳು ಸಾಮಾನ್ಯ.
    • ಆದ್ರೆ ಇಲ್ಲೊಂದು ಕ್ರಿಕೆಟ್‌ ತಂಡ ಒಂದೇ ಒಂದು ಸಿಕ್ಸರ್‌ ಆಗಲಿ ಬೌಂಡರಿ ಆಗಲಿ ಹೊಡೆಯದೆ ದ್ವಿಶತಕ ಪೇರಿಸಿದೆ
    • ಈ ದಾಖಲೆ ಇಂದಿನದಲ್ಲ, ಬದಲಾಗಿ ಸುಮಾರು 130 ವರ್ಷಗಳಷ್ಟು ಹಳೆಯದ್ದು.
ಒಂದೇ ಬಾಲ್‌... ಬ್ಯಾಟ್ಸ್‌ʼಮನ್‌ʼಗೆ ದಕ್ಕಿದ್ದು 286 ರನ್:‌ ವರ್ಲ್ಡ್ ಕ್ರಿಕೆಟ್‌ʼನ ಅಸಂಭವ... ಅರ್ತ್ಯಾಶ್ಚರ್ಯಕರ ಇನ್ನಿಂಗ್ಸ್‌ ಇದು title=
File Photo

Unique Cricket Record: ಕ್ರಿಕೆಟ್‌ ಅಂದ್ರೆ ಸಿಕ್ಸರ್‌-ಬೌಂಡರಿಗಳು ಸಾಮಾನ್ಯ. ಇವಿಲ್ಲ ಅಂದ್ರೆ ಮಜಾನೇ ಇರಲ್ಲ. ಆದ್ರೆ ಇಲ್ಲೊಂದು ಕ್ರಿಕೆಟ್‌ ತಂಡ ಒಂದೇ ಒಂದು ಸಿಕ್ಸರ್‌ ಆಗಲಿ ಬೌಂಡರಿ ಆಗಲಿ ಹೊಡೆಯದೆ ದ್ವಿಶತಕ ಪೇರಿಸಿದೆ. ಇದು ಅಚ್ಚರಿ ಎನಿಸಿದ್ರೂ ನಿಜ. ಆದರೆ ಈ ದಾಖಲೆ ಇಂದಿನದಲ್ಲ, ಬದಲಾಗಿ ಸುಮಾರು 130 ವರ್ಷಗಳಷ್ಟು ಹಳೆಯದ್ದು.

ಇದನ್ನೂ ಓದಿ: ಶೂಟಿಂಗ್‌ ವೇಳೆ ನನಗೂ ʼಆʼ ಅನುಭವ ಆಗಿದೆ: ಕಾಸ್ಟಿಂಗ್‌ ಕೌಚ್‌ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಶಾಕಿಂಗ್‌ ಹೇಳಿಕೆ ವೈರಲ್!‌

1894 ರಲ್ಲಿ ಕ್ರಿಕೆಟ್ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಬ್ಯಾಟ್ಸ್‌ಮನ್‌ʼಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ODI ಪಂದ್ಯದ ಸ್ಕೋರ್ ಮಾಡಿದ್ದರು. ESPN Cricinfo ಪ್ರಕಾರ, ಜನವರಿ 1894 ರಲ್ಲಿ ಲಂಡನ್‌ʼನಿಂದ ಪ್ರಕಟವಾದ ಪತ್ರಿಕೆ 'ಪಾಲ್-ಮಾಲ್ ಗೆಜೆಟ್' ನಲ್ಲಿ ಈ ಬಗ್ಗೆ ವರದಿ ಪ್ರಕಟಿಸಲಾಯಿತು. ಇದರಲ್ಲಿ ಈ ಅದ್ಭುತ ದಾಖಲೆಯನ್ನು ಉಲ್ಲೇಖಿಸಲಾಗಿದೆ.

1894ರ ಆ ಪಂದ್ಯದಲ್ಲಿ ನಡೆದ ಯಾವುದೇ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಆದರೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ, 1894 ರ ಜನವರಿ 15 ರಂದು ವೆಸ್ಟರ್ನ್ ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯಾ ಮತ್ತು 'ಸ್ಕ್ರ್ಯಾಚ್-ಇಲೆವೆನ್' ಹೆಸರಿನ ಎರಡು ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಈ ಪಂದ್ಯಕ್ಕೆ ಬೋನ್ಬರಿ ಮೈದಾನ ಸಾಕ್ಷಿಯಾಗಿತ್ತು.

ವಿಕ್ಟೋರಿಯಾ ತಂಡದ ಬ್ಯಾಟ್ಸ್‌ಮನ್‌ʼಗಳು ಕ್ರೀಸ್‌ʼನಲ್ಲಿದ್ದರು. ಒಬ್ಬ ಬ್ಯಾಟ್ಸ್‌ಮನ್ ಚೆಂಡನ್ನು ಮರದ ಮೇಲೆ ಸಿಲುಕಿಕೊಳ್ಳುವ ರೀತಿಯಲ್ಲಿ ಬಾರಿಸಿದ್ದನು. ಆ ಬಾಲ್‌ ತೆಗೆಯಲೆಂದು ಎದುರಾಳಿ ತಂಡ ಪ್ರಯತ್ನಿಸುತ್ತಿದ್ದರೆ, ಈ ಬ್ಯಾಟ್ಸ್‌ʼಮನ್‌ʼಗಳು ಕ್ರೀಸ್‌ʼನಲ್ಲಿ ರನ್ ಗಳಿಸಲು ಓಡಿದ್ದಾರೆ. ಮರದಲ್ಲಿ ಸಿಕ್ಕಿಬಿದ್ದ ಚೆಂಡನ್ನು ತೆಗೆಯುವುದು ಬಹುತೇಕ ಅಸಾಧ್ಯವಾಗಿತ್ತು. ಇದರಿಂದಾಗಿ ಬೌಲಿಂಗ್ ತಂಡವು ಚೆಂಡನ್ನು ಕಳೆದುಕೊಂಡಿದೆ ಎಂದು ಘೋಷಿಸಲು ಅಂಪೈರ್‌ʼಗಳಿಗೆ ಮನವಿ ಮಾಡಿತು. ಹೀಗೆ ಘೋಷಣೆ ಮಾಡಿದರೆ ಬ್ಯಾಟ್ಸ್‌ಮನ್‌ʼಗಳು ರನ್ ಗಳಿಸುವುದನ್ನು ತಡೆಯಬಹುದು.

ಆದರೆ ಅಂಪೈರ್‌ʼಗಳು ಆ ಮನವಿಯನ್ನು ತಿರಸ್ಕರಿಸಿದರು. ಫೀಲ್ಡಿಂಗ್ ತಂಡವು ಮರವನ್ನು ಕತ್ತರಿಸಲು ನಿರ್ಧರಿಸಿತು. ಆದರೆ ಕೊಡಲಿ ಪತ್ತೆಯಾಗಲಿಲ್ಲ ಎಂದು ವರದಿ ಹೇಳುತ್ತದೆ. ಕೊನೆಗೆ ಹಲವಾರು ಗಂಟೆಗಳ ನಂತರ, ರೈಫಲ್‌ʼನಲ್ಲಿ ಗುರಿಯಿಟ್ಟು ಚೆಂಡನ್ನು ಮರದಿಂದ ಬೀಳಿಸಲಾಯಿತು. ಇಷ್ಟು ಹೊತ್ತಿಗಾಗಲೇ  ಬ್ಯಾಟ್ಸ್‌ಮನ್‌ʼಗಳು 286 ರನ್ ಗಳಿಸಿದ್ದರು. ಅಷ್ಟೇ ಅಲ್ಲದೆ ಆ ಬ್ಯಾಟ್ಸ್‌ಮನ್‌ʼಗಳು 6 ಕಿಲೋಮೀಟರ್‌ʼಗಳಷ್ಟು ಪಿಚ್‌ʼನಲ್ಲಿ ಓಡಿದ್ದರು.

ಇದನ್ನೂ ಓದಿ: 4 ವರ್ಷಗಳ ಪ್ರೀತಿ... ಈಕೆ ಜೊತೆ ಪ್ರೀತಿ ನಿಜವೆಂದ ರಿಷಬ್‌ ಪಂತ್! ಆ ಚೆಲುವೆ ಯಾರು?

ಈ ಘಟನೆಯನ್ನು ಇಂದಿನ ಅನೇಕ ಜನರು ನಂಬುವುದಿಲ್ಲ. ಆದರೆ ವರದಿಗಳಲ್ಲಿ ಈ ಘಟನೆಯನ್ನು ನಿಜವೆಂದು ವಿವರಿಸಲಾಗಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News