South Actress: ಬಹು ಬೇಡಿಕೆಯ ಈ ನಟಿ ಇತ್ತೀಚೆಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಕೆಂಪು ಟೀ ಶರ್ಟ್‌ನಲ್ಲಿ ಪುಟ್ಟ ಹುಡುಗಿಯೊಬ್ಬಳು ಕ್ಯಾಮರಾಗೆ ಪೋಸ್ ನೀಡುತ್ತಿರುವುದನ್ನು ಈ ಫೋಟೋದಲ್ಲಿ ನೋಡಬಹುದು. ಅನೇಕ ಸ್ಟಾರ್‌ ನಟರೊಂದಿಗೆ ಈ ನಟಿ ಕೆಲಸ ಮಾಡಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲೇ ಅಭಿನಯ ಮತ್ತು ಬ್ಯೂಟಿಯಿಂದ ಜನರ ಮನಗೆದ್ದರು.


COMMERCIAL BREAK
SCROLL TO CONTINUE READING

ಈ ಫೋಟೋದಲ್ಲಿರುವ ಸುಂದರಿ ಬೇರೆ ಯಾರೂ ಅಲ್ಲ ರಶ್ಮಿಕಾ ಮಂದಣ್ಣ. ನಟಿ ರಶ್ಮಿಕಾ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಜನರು "ಕ್ಯೂಟಿ" ಮತ್ತು "ವೆರಿ ಸ್ವೀಟ್" ಎಂದು ಕರೆಯುತ್ತಿದ್ದಾರೆ. ಇಂದು ನಟಿ ಸ್ಟಾರ್ ಸ್ಥಾನಮಾನವನ್ನು ಗಳಿಸಿದ್ದಾರೆ. 


 


"ಆ.. ಅಡ್ಜಸ್ಟ್‌ಮೆಂಟ್‌ಗೆ ರೆಡಿ ಆಗಿದ್ದರೆ ದಳಪತಿ ವಿಜಯ್‌ಗೆ ನಾಯಕಿಯಾಗ್ತಿದ್ದೆ"


ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ ಖ್ಯಾತಿಗಳಿಸಿದ್ದಾರೆ. ಈ ಸಿನಿಮಾ ಮಾಡುವಾಗ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ನಡುವೆ ಪ್ರೀತಿ ಮೂಡಿತ್ತು. ಬಳಿಕ ಇಬ್ಬರೂ ಎಂಗೇಜ್‌ಮೆಂಟ್‌ ಕೂಡ ಮಾಡಿಕೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಈ ಸಂಬಂಧ ಮುರಿದುಬಿದ್ದಿತು. ನಿಶ್ಚಿತಾರ್ಥ ಮುರಿದ ನಂತರ ಇಬ್ಬರೂ ತಮ್ಮ ತಮ್ಮ ಕರಿಯರ್‌ನತ್ತ ಮುಖಮಾಡಿದರು. ವರದಿಯ ಪ್ರಕಾರ, ನಟಿ ಹೊಂದಾಣಿಕೆಯ ಸಮಸ್ಯೆಗಳನ್ನು ಉಲ್ಲೇಖಿಸಿ ಈ ಸಂಬಂಧ ಮುರಿದುಕೊಂಡರಂತೆ.  


2017 ರಲ್ಲಿ ಅಂಜನಿಪುತ್ರ ಮತ್ತು ಚಮಕ್ ಎಂಬ ಎರಡು ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ನಂತರ ತೆಲುಗಿನತ್ತ ವಾಲಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅವರೊಂದಿಗೆ ಗೀತ ಗೋವಿಂದಂ ಎಂಬ ದೊಡ್ಡ ಹಿಟ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 


2022 ರಲ್ಲಿ ಅವರು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗೆ ಗುಡ್ ಬೈ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇದರಲ್ಲಿ ನೀನಾ ಗುಪ್ತಾ, ಪಾವೈಲ್ ಗುಲಾಟಿ ಮತ್ತು ಸುನಿಲ್ ಗ್ರೋವರ್ ಕೂಡ ಕಾಣಿಸಿಕೊಂಡಿದ್ದರು. ನಂತರ, ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಚಿತ್ರದಲ್ಲಿ ನಟಿಸಿದರು. ಪ್ರಸ್ತುತ, ರಶ್ಮಿಕಾ ಮಂದಣ್ಣ ಅವರು ಸಂದೀಪ್ ರೆಡ್ಡಿ ವಂಗಾ ಅವರ ಅತ್ಯಂತ ಹೆಚ್ಚು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾದ ಅನಿಮಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಪುಷ್ಪಾ 2 ಚಿತ್ರೀಕರಣದಲ್ಲೂ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ.


ಇದನ್ನೂ ಓದಿ: ಬಾಕ್ಸ್ ಆಫೀಸ್ ನಲ್ಲಿ 400 ಕೋಟಿ ರೂ ಗಳಿಸಿದ ಆದಿಪುರುಷ ಚಿತ್ರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.