ಬಾಕ್ಸ್ ಆಫೀಸ್ ನಲ್ಲಿ 400 ಕೋಟಿ ರೂ ಗಳಿಸಿದ ಆದಿಪುರುಷ ಚಿತ್ರ

ಓಂ ರಾವುತ್ ನಿರ್ದೇಶನದಲ್ಲಿ ಪ್ರಭಾಸ್ ನಟಿಸಿರುವ 'ಆದಿಪುರುಷ' ಚಿತ್ರವು  ಜಾಗತಿಕವಾಗಿ 400 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

Written by - Manjunath N | Last Updated : Jun 23, 2023, 11:48 PM IST
  • ಆರಂಭದಲ್ಲಿ ಚಿತ್ರದ ಸಂಭಾಷಣೆ ಹಾಗೂ ಕಳಪೆ ಗುಣಮಟ್ಟದ ದೃಶ್ಯ ಪರಿಣಾಮಗಳಿಂದ ಚಿತ್ರದ ಬಾಕ್ಸ್ ಆಫೀಸ್ ನಲ್ಲಿ ಪರಿಣಾಮ ಬೀರಿತ್ತು,
  • ಆದರೆ ಇದರಿಂದ ಎಚ್ಚೆತ್ತುಕೊಂಡ ಚಿತ್ರ ತಂಡವು ಅಂತಹ ವಿವಾದಾತ್ಮಕ ದೃಶ್ಯ ಹಾಗೂ ಸಂಭಾಷಣೆಗಳಿಗೆ ಕತ್ತರಿ ಹಾಕಿತ್ತು.
  • ಈ ಹಿನ್ನೆಲೆಯಲ್ಲಿ ಈಗ ಬಾಕ್ಸ್ ಆಫೀಸ್ ನಲ್ಲಿ ಮತ್ತೆ ಚೇತರಿಸಿಕೊಂಡು ಜಗತ್ತಿನಾಧ್ಯಂತ ಒಟ್ಟು 410 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರದ ಟಿ-ಸಿರೀಸ್ ಗುರುವಾರ ಟ್ವೀಟ್ ಮಾಡಿದೆ.
ಬಾಕ್ಸ್ ಆಫೀಸ್ ನಲ್ಲಿ 400 ಕೋಟಿ ರೂ ಗಳಿಸಿದ ಆದಿಪುರುಷ ಚಿತ್ರ  title=

ನವದೆಹಲಿ: ಓಂ ರಾವುತ್ ನಿರ್ದೇಶನದಲ್ಲಿ ಪ್ರಭಾಸ್ ನಟಿಸಿರುವ 'ಆದಿಪುರುಷ' ಚಿತ್ರವು  ಜಾಗತಿಕವಾಗಿ 400 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

ಆರಂಭದಲ್ಲಿ ಚಿತ್ರದ ಸಂಭಾಷಣೆ ಹಾಗೂ ಕಳಪೆ ಗುಣಮಟ್ಟದ ದೃಶ್ಯ ಪರಿಣಾಮಗಳಿಂದ ಚಿತ್ರದ ಬಾಕ್ಸ್ ಆಫೀಸ್ ನಲ್ಲಿ ಪರಿಣಾಮ ಬೀರಿತ್ತು, ಆದರೆ ಇದರಿಂದ ಎಚ್ಚೆತ್ತುಕೊಂಡ ಚಿತ್ರ ತಂಡವು ಅಂತಹ ವಿವಾದಾತ್ಮಕ ದೃಶ್ಯ ಹಾಗೂ ಸಂಭಾಷಣೆಗಳಿಗೆ ಕತ್ತರಿ ಹಾಕಿತ್ತು.ಈ ಹಿನ್ನೆಲೆಯಲ್ಲಿ ಈಗ ಬಾಕ್ಸ್ ಆಫೀಸ್ ನಲ್ಲಿ ಮತ್ತೆ ಚೇತರಿಸಿಕೊಂಡು ಜಗತ್ತಿನಾಧ್ಯಂತ ಒಟ್ಟು  410 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರದ ಟಿ-ಸಿರೀಸ್ ಗುರುವಾರ ಟ್ವೀಟ್ ಮಾಡಿದೆ.

ಜೂನ್ 16 ರಂದು ಹಿಂದಿ, ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾದ 'ಆದಿಪುರುಷ', ರಾಘವ್ (ರಾಮ್) ಆಗಿ ಪ್ರಭಾಸ್, ಜಾನಕಿ (ಸೀತಾ) ಆಗಿ ಕೃತಿ ಸನೋನ್ ಮತ್ತು ಲಂಕೇಶ್ (ರಾವಣ) ಆಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.

ಆರಂಭಿಕ ವಾರಾಂತ್ಯದಲ್ಲಿ, 500 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಚಿತ್ರವು ಕೇವಲ ಮೂರು ದಿನಗಳಲ್ಲಿ 340 ಕೋಟಿ ರೂಪಾಯಿಗಳನ್ನು ಗಳಿಸಿತ್ತು -- ಮೊದಲ ದಿನದಲ್ಲಿ 140 ಕೋಟಿ ರೂಪಾಯಿ, ನಂತರ ಎರಡು ಮತ್ತು ಮೂರನೇ ದಿನದಲ್ಲಿ ತಲಾ 100 ಕೋಟಿ ರೂಪಾಯಿ ಗಳಿಸಿತ್ತು.ಆದರೆ ಸಾಮಾಜಿಕ ಮಾಧ್ಯಮದಲ್ಲಿ ನಕಾರಾತ್ಮಕ ಬಾಯಿಯ ಮಾತುಗಳು ಹರಡಿದ್ದರಿಂದ ಚಿತ್ರದ ಬಾಕ್ಸ್ ಆಫೀಸ್ ಸ್ಕೋರ್ ತೀವ್ರ ಕುಸಿತಕ್ಕೆ ಸಾಕ್ಷಿಯಾಯಿತು. ಸೋಮವಾರದಂದು 35 ಕೋಟಿ ರೂಪಾಯಿ ಗಳಿಸಿದ್ದ ಚಿತ್ರವು ಮಂಗಳವಾರ 20 ಕೋಟಿ ರೂಪಾಯಿ ಗಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News