Rashmika Mandanna Deepavali Celebration : ಪ್ರತಿ ಚಿತ್ರರಂಗದಲ್ಲೂ ನಾಯಕ-ನಾಯಕಿ ನಡುವಿನ ಲವ್ ಬಗ್ಗೆ ನಾನಾ ರೀತಿಯ ಸುದ್ದಿಗಳು ಬರುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದ ನಟರ ನಡುವಿನ ಸಂಬಂಧಗಳು ಕೂಡ ಹೈಲೈಟ್ ಆಗುತ್ತಿವೆ. ಸದ್ಯ ಟಾಲಿವುಡ್ ನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಪ್ರೇಮ ಸಂಬಂಧವಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಹಿನ್ನೆನಲೆಯಲ್ಲಿ ಇತ್ತೀಚೆಗಷ್ಟೇ ಇಬ್ಬರೂ ಸೇರಿ ದೀಪಾವಳಿ ಆಚರಿಸಿದ ಸುದ್ದಿಯೊಂದು ವೈರಲ್‌ ಆಗಿದೆ.  


COMMERCIAL BREAK
SCROLL TO CONTINUE READING

ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆ ನಂತರ ತೆಲಗು ಸಿನಿಮಾದಲ್ಲಿಯೂ ನಟಿಸಿದರು. ಒಂದಷ್ಟು ಸಿನಿಮಾಗಳನ್ನೂ ಮಾಡಿ ಸ್ಟಾರ್ ಆದರು. ರಶ್ಮಿಕಾ ಮಂದಣ್ಣ ಈಗ ಸೌತ್‌ ಸಿನಿಮಾಗಳ ಜೊತೆಗೆ ಬಾಲಿವುಡ್‌ನಲ್ಲಿಯೂ ಸದ್ದು ಮಾಡುತ್ತಿದ್ದಾರೆ. ಪುಷ್ಪಾ 2 ಸಿನಿಮಾದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಬಾಲಿವುಡ್ ನಲ್ಲಿಯೂ ಕೆಲಸ ಮಾಡುತ್ತಿದ್ದಾರೆ. 


ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಹೊಸ ಲುಕ್ ನಲ್ಲಿ ಮಾಲಾಶ್ರೀ ಹಾಗೂ ಆರಾಧನಾ .. 


ರಶ್ಮಿಕಾ ಮಂದಣ್ಣ ಅವರು ತಮ್ಮ ಚಿತ್ರರಂಗದ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಕನ್ನಡದ ನಾಯಕ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಕೆಲ ದಿನಗಳ ನಂತರ ಸಂಬಂಧ ಮುರಿದುಕೊಂಡರು.. ತೆಲುಗಿಗೆ ಎಂಟ್ರಿ ನೀಡಿದ ನಂತರ, ವಿಜಯ್ ದೇವರಕೊಂಡ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. 


 


ಬಿಗ್ ಬಾಸ್ ನಿಯಮ ಮೀರಿ ಅರ್ಧಕ್ಕೆ ಹೊರ ಬರುವವರಿಗೆ ಬೀಳುತ್ತೆ ಭಾರೀ ದಂಡ.!


ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹಂಚಿಕೊಂಡ ಫೋಟೋಗಳಲ್ಲಿ, ಕೆಲವು ಸಾಮಾನ್ಯ ಅಂಶಗಳು ಕಂಡುಬಂದಿವೆ. ಇದರಿಂದಾಗಿ ಇಬ್ಬರೂ ಒಂದೇ ಕಡೆ ದೀಪಾವಳಿ ಹಬ್ಬ ಆಚರಿಸಿದ್ದಾರೆ ಎನ್ನಲಾಗ್ತಿದೆ. ಅನೇಕ ನೆಟಿಜನ್‌ಗಳು ಈ ಫೋಟೋಗಳಲ್ಲಿನ ಸಾಮಾನ್ಯ ಅಂಶಗಳನ್ನು ಗುರುತಿಸಿದ್ದಾರೆ ಮತ್ತು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಟಾಲಿವುಡ್ ನಲ್ಲೂ ಹೈಲೈಟ್ ಆಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.