Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರ ರಾಜಕೀಯ ಪ್ರವೇಶದ ಬಗ್ಗೆ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಪಕ್ಷ, ಸ್ಥಾನ ಸೇರಿದಂತೆ ರಶ್ಮಿಕಾ ಶೀಘ್ರದಲ್ಲೇ ಸಂಸದೆಯಾಗುತ್ತಾರೆ ಎಂದು ಹೇಳಿದ್ದಾರೆ.  ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರ ಇತ್ತೀಚಿನ ಮಾತುಗಳು ವೈರಲ್ ಆಗಿವೆ. ಸೆಲೆಬ್ರಿಟಿಗಳ ಪರ್ಸನಲ್ ವಿಚಾರಗಳ ಬಗ್ಗೆ ವೇಣು ಸ್ವಾಮಿ ಅವರ ಇತ್ತೀಚಿನ ವಿಡಿಯೋ ವೈರಲ್ ಆಗುತ್ತಿದೆ. ಇಂಡಸ್ಟ್ರಿಯಲ್ಲಿಯೂ ಅವರಿಗೆ ಒಂದಷ್ಟು ವಿಶ್ವಾಸಾರ್ಹತೆ ಇದೆ. ಸೆಲೆಬ್ರಿಟಿಗಳು ಅವರ ಮಾತನ್ನು ನಂಬುತ್ತಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದಿವಂಗತ ಸಂಚಾರಿ ವಿಜಯ್‌ ಸಿನಿಮಾಗೆ ಮತ್ತೊಂದು ರಾಷ್ಟ್ರಪಶಸ್ತಿ..!


ಇತ್ತೀಚಿನ ಸಂದರ್ಶನದಲ್ಲಿ, ವೇಣು ಸ್ವಾಮಿ ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನ ಮತ್ತು ರಾಜಕೀಯ ಪ್ರವೇಶದ ಬಗ್ಗೆ ಆಸಕ್ತಿದಾಯಕ ಮಾತುಗಳನ್ನು ಆಡಿದ್ದಾರೆ. ಅವರು ನಿರ್ದಿಷ್ಟ ಪಕ್ಷದಿಂದ ಸಂಸದರಾಗುತ್ತಾರೆ ಎಂದು ಹೇಳಿದ್ದಾರೆ. ಹೈದರಾಬಾದ್‌ನಲ್ಲಿರುವ ರಶ್ಮಿಕಾ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಈಗ ಅವರು ನ್ಯಾಷನಲ್‌ ಕ್ರಶ್ ಆಗಿದ್ದಾರೆ. ಚಿತ್ರಕ್ಕೆ 6 ರಿಂದ 7 ಕೋಟಿ ರೂಪಾಯಿ ಸಂಬಾವನೆ ತೆಗೆದುಕೊಳ್ಳುತ್ತಿದ್ದಾರೆ. ಅವರು ಶೀಘ್ರದಲ್ಲೇ ಸಂಸದೆಯೂ ಆಗಲಿದ್ದಾರೆ. ಕರ್ನಾಟಕ ರಾಜ್ಯದಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಲೋಕಸಭೆಗೆ ಆಯ್ಕೆಯಾಗಲಿದ್ದಾರೆ. ಇದನ್ನು ಅವರ ಜಾತಕದಲ್ಲಿ ಬರೆಯಲಾಗಿದೆ. ರಶ್ಮಿಕಾಗೆ ಆ ಯೋಗವಿದೆ. ಹಾಗಾಗಿ ರಶ್ಮಿಕಾ ಶೀಘ್ರದಲ್ಲೇ ಸಂಸದೆಯಾಗಲಿದ್ದಾರೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.


ಅದೇ ಸಮಯದಲ್ಲಿ ಪಕ್ಷ ಮತ್ತು ಸ್ಥಳವನ್ನು ಉಲ್ಲೇಖಿಸಿದ ವೇಣು ಸ್ವಾಮಿ ಅವರ ಈ ಮಾತುಗಳು ಫುಲ್‌ ವೈರಲ್ ಆಗಿವೆ. ಸ್ಟಾರ್ ಹೀರೋಯಿನ್ ಆಗಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ರಾಜಕೀಯದ ಕಡೆಗೇಕೆ ಹೋಗುತ್ತಿದ್ದಾರೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ವೇಣು ಸ್ವಾಮಿ ರಶ್ಮಿಕಾ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಕೆಲವು ಮಾತುಗಳನ್ನು ಹೇಳಿದ್ದಾರೆ.


ನಾಗ ಚೈತನ್ಯ ಮತ್ತು ಸಮಂತಾ ಬೇರೆಯಾಗುತ್ತಾರೆ ಎಂದು ಹೇಳಿದ್ದೆ: 


ನಾಗ ಚೈತನ್ಯ ಮತ್ತು ಸಮಂತಾ ಬೇರೆಯಾಗುತ್ತಾರೆ ಎಂದು ಈ ಹಿಂದೆ ಹೇಳಿದ್ದೆ ಎಂದ ವೇಣುಸ್ವಾಮಿ, ನಾನು ಮೊದಲೇ ಹೇಳಿದಂತೆ, ದಂಪತಿಗಳು ವಿಚ್ಛೇದನ ಪಡೆದರು ಎಂದಿದ್ದಾರೆ. 


ಪವನ್ ಕಲ್ಯಾಣ್ ಗೆ ರಾಜಕೀಯ ಭವಿಷ್ಯವಿಲ್ಲ:


ಪವನ್ ಕಲ್ಯಾಣ್ ಗೆ ರಾಜಕೀಯ ಭವಿಷ್ಯವಿಲ್ಲ, ಶ್ರೀಜಾ ನಾಲ್ಕು ಮದುವೆಯಾಗಬಹುದು ಎಂದು ವೇಣು ಸ್ವಾಮಿ ಬಾಂಬ್ ಸಿಡಿಸಿದ್ದಾರೆ. ಚಿರಂಜೀವಿ ಪುತ್ರಿ ಶ್ರೀಜಾ ತನ್ನ ಎರಡನೇ ಪತಿ ಕಲ್ಯಾಣ್ ದೇವ್‌ನಿಂದ ಬೇರ್ಪಟ್ಟಿದ್ದು ಗೊತ್ತೇ ಇದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ, ದಂಪತಿಗಳು ಬಹಳ ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮತ್ತೊಂದೆಡೆ, ಶ್ರೀಜಾ ಮೂರನೇ ಬಾರಿಗೆ ಮದುವೆಯಾಗಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಸಮಯದಲ್ಲಿ ವೇಣು ಸ್ವಾಮಿ ಮಾತು ಮಹತ್ವ ಪಡೆದುಕೊಂಡಿದೆ.  


ಇದನ್ನೂ ಓದಿ: Vikrant Rona: ವಿಕ್ರಾಂತ್‌ ರೋಣ ಮುಂಗಡ ಟಿಕೆಟ್‌ ಬುಕಿಂಗ್‌ಗಾಗಿ ಕಾಯ್ತಿದ್ದೀರಾ? ಇಲ್ಲಿದೆ ಮಹತ್ವದ ಅಪ್‌ಡೇಟ್‌


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.