ದುಲ್ಕರ್ ಸಲ್ಮಾನ್ ಮುಖ್ಯ ಭೂಮಿಕೆಯಲ್ಲಿರುವ ಸೀತಾ ರಾಮಂ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹನು ರಾಘವಪುಡಿ ನಿರ್ದೇಶನದ ರೋಮ್ಯಾಂಟಿಕ್ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿದ್ದಾರೆ. ನಿನ್ನೆ ಈದ್ ಉಲ್-ಅಧಾ ಸಂದರ್ಭದಲ್ಲಿ, ಸೀತಾ ರಾಮಂ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ವಿಶೇಷ ನೋಟವನ್ನು ಬಿಡುಗಡೆ ಮಾಡಿದರು. ಹಿಜಾಬ್ ಧರಿಸಿರುವ ರಶ್ಮಿಕಾ ಮಂದಣ್ಣ ಅವರು ಈದ್ ಉಲ್-ಅಧಾ ಶುಭಾಶಯಗಳನ್ನು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bigg Boss Kannada: ಶುರುವಾಗಲಿದೆ ಮಿನಿ ಬಿಗ್​ಬಾಸ್! ಯಾರಿಗೆಲ್ಲ ಅವಕಾಶ?


ಅಫ್ರೀನ್ ಎಂಬ ಕಾಶ್ಮೀರಿ ಮುಸ್ಲಿಂ ಹುಡುಗಿಯಾಗಿ ರಶ್ಮಿಕಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಮುಸ್ಲಿಂ ಮಹಿಳೆ ಉಡುಗೆಯಲ್ಲಿ ಸಲಾಮ್ ಹೇಳುತ್ತಿದ್ದಾರೆ. ಲೆಫ್ಟಿನೆಂಟ್ ರಾಮ್ ಆಗಿ ದುಲ್ಕರ್ ಸಲ್ಮಾನ್ ಮತ್ತು ಸೀತೆಯಾಗಿ ಮೃಣಾಲ್ ಠಾಕೂರ್ ಕಾಣಿಸಿಕೊಳ್ಳಲಿದ್ದಾರೆ. 


 


Kiccha Sudeep: ನಟ ಸುದೀಪ್ ಕಾಲಿಗೆ ಪೆಟ್ಟು.. ಉಪೇಂದ್ರ ಅವರಿಗೆ ಕ್ಷಮೆ ಕೇಳಿದ ಕಿಚ್ಚ


ಬ್ರಿಗೇಡಿಯರ್ ವಿಷ್ಣು ಶರ್ಮಾ ಪಾತ್ರದಲ್ಲಿ ಸುಮಂತ್ ನಟಿಸುತ್ತಿದ್ದಾರೆ. ಸ್ವಪ್ನಾ ಸಿನಿಮಾ ಬ್ಯಾನರ್‌ ಅಡಿಯಲ್ಲಿ ಅಶ್ವಿನಿ ದತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿಶಾಲ್ ಚಂದ್ರಶೇಖರ್ ಸಂಗೀತ ನೀಡುತ್ತಿದ್ದು, ವೈಜಯಂತಿ ಮೂವೀಸ್ ಪ್ರಸ್ತುತಪಡಿಸುವ ಈ ಸೀತಾ ರಾಮಂ ಚಲನಚಿತ್ರವು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಆಗಸ್ಟ್ 5, 2022 ರಂದು ಬಿಡುಗಡೆಯಾಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.