Kiccha Sudeep: ನಟ ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಎಲ್ಲಾ ಭಾಷೆಗಳಲ್ಲಿಯೂ ಗ್ರ್ಯಾಂಡ್ ಆಗಿ ಲಾಂಚ್ ಆಗಿತ್ತು. ಚಿತ್ರದ ಪ್ರಚಾರದ ಕಾರ್ಯದಲ್ಲಿರುವ ಸುದೀಪ್ ಕಾಲಿಗೆ ಪೆಟ್ಟಾಗಿದೆ. ನಟ ಸುದೀಪ್ ಅವರ ಮಂಡಿಗೆ ಏಟು ಬಿದ್ದಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಹಠಾತ್ ಅನಾರೋಗ್ಯದಿಂದ ತಮಿಳು ನಟ ವಿಕ್ರಮ್ ಧಿಡೀರ್ ಆಸ್ಪತ್ರೆಗೆ ದಾಖಲು
‘ನಮ್ಮ ಹುಡುಗರು’ ಸಿನಿಮಾದ ಪ್ರೀ - ರಿಲೀಸ್ ಈವೆಂಟ್‌ನಲ್ಲಿ ಇದೇ ಕಾರಣಕ್ಕೆ ಸುದೀಪ್ ಭಾಗವಹಿಸಲಿಲ್ಲ. ಈ ಸಿನಿಮಾದಲ್ಲಿ ನಟ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಅಭಿನಯಿಸಿದ್ದಾರೆ. ನಮ್ಮ ಹುಡುಗರು ಚಿತ್ರದ ಪ್ರೀ - ರಿಲೀಸ್ ಈವೆಂಟ್‌ಗೆ ಹಾಗೂ ಟ್ರೈಲರ್ ಲಾಂಚ್ ಮಾಡಲು ಕಿಚ್ಚ ಸುದೀಪ್ ಅವರಿಗೆ ನಟ ಉಪೇಂದ್ರ ಆಹ್ವಾನಿಸಿದ್ದರು. ಈ ಕಾರ್ಯಕ್ರಮಕ್ಕೆ ಬರಲು ಸುದೀಪ್ ಒಪ್ಪಿಕೊಂಡಿದ್ದರು. ಆದರೆ ಕಾಲಿಗೆ ಪೆಟ್ಟು ಬಿದ್ದ ಕಾರಣ ಕಾರ್ಯಕ್ರಮಕ್ಕೆ ಹೋಗಲು ಆಗಲಿಲ್ಲ. ಅದೇ ಕಾರಣಕ್ಕೆ ಸುದೀಪ್ ವಿಡಿಯೋ ಸಂದೇಶದ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದರು.
My best wishes to the team of #NammaHudugaru.
Wishing you @niranjansudhi the best, for a wonderful and a successful career.
🥂🤜🏽🤛🏽 pic.twitter.com/yp2wRSZAax— Kichcha Sudeepa (@KicchaSudeep) July 8, 2022
ʻಉಪ್ಪಿ ಸರ್, ಕ್ಷಮಿಸಿ.. ನೀವೇ ಫೋನ್ ಮಾಡಿ ಆಹ್ವಾನಿಸಿದ್ರಿ. ನೀವು ಕರೆದಾಗ ನಾನು ಯಾವುದಕ್ಕೂ ಮಿಸ್ ಮಾಡಿಲ್ಲ. ಅದು ನಿಮಗೂ ಗೊತ್ತಿರುವ ವಿಚಾರ. ದಯವಿಟ್ಟು ಇವತ್ತೊಂದು ದಿನ ಕ್ಷಮಿಸಿʼ ಎಂದು ವಿಡಿಯೋದಲ್ಲಿ ಉಪೇಂದ್ರ ಅವರಿಗೆ ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ: ಸಿನಿಪ್ರಿಯರಿಗೆ ಸಿಹಿ ಸುದ್ದಿ.. ಒಟಿಟಿಗೆ ಎಂಟ್ರಿ ಕೊಡುತ್ತಿದೆ 777 ಚಾರ್ಲಿ