Rashmika Mandanna Birthday Special Gift: ಸ್ಯಾಂಡಲ್‌ವುಡ್‌ನ ಬಹುಭಾಷಾ ನಟಿ ಹಾಗೂ ನ್ಯಾಷನಲ್ ಕ್ರಶ್ ಎಂಬ ಬಿರುದನ್ನು ಪಡೆದ ನಟಿ ರಶ್ಮಿಕಾ ಮಂದಣ್ಣ ಇದೇ ಏಪ್ರಿಲ್ 5ರಂದು ತಮ್ಮ 28ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್‌ ಮಾಡಲಿದ್ದಾರೆ. ಈ ನಟಿಯ ಜನಪ್ರಿಯತೆ ಕರುನಾಡುನಿಂದ ಶುರುವಾಗಿ, ಇದೀಗ ಬಾಲಿವುಡ್‌ವರೆಗೂ ತಲುಪಿದೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟಿ, ಸದ್ಯ ತಮ್ಮ ಬರ್ತ್‌ಡೇ ವಿಶೇಷವಾಗಿ ಫ್ಯಾನ್ಸ್‌ಗೆ  ಸ್ವೆಷಲ್‌ ಉಡುಗರೆಯನ್ನು ನೀಡಲಿದ್ದಾರೆ.


COMMERCIAL BREAK
SCROLL TO CONTINUE READING

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಜನ್ಮದಿನದಂದು ತಾವು ಅಭಿನಯಿಸುತ್ತಿರುವ ಬಹುನಿರೀಕ್ಷಿತ 'ದಿ ಗರ್ಲ್‌ಫ್ರೆಂಡ್‌'ನ ಮೊದಲ ಟೀಸರ್ ರಿಲೀಸ್ ಆಗಲಿದೆ. ಈ ಚಿತ್ರದ ಕಥೆ ಏನು, ಇದು ಎಂತಹ ಸಿನಿಮಾ, ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಮಾಡುತ್ತಿರುವುವ ಪಾತ್ರವಾದರೂ ಯಾವುದು ಎಂಬ ಕುತೂಹಲಕ್ಕೆ ಉತ್ತರ ಚಿತ್ರದ ಟೀಸರ್‌ ಮೂಲಕ ಸಿಗಲಿದೆ. ಹಾಗೆಯೇ ಈ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬರಲಿದ್ದು, ಎಲ್ಲಾ ಭಾಷೆಗಳಲ್ಲೂ ನಟಿ ರಶ್ಮಿಕಾನೇ ಧ್ವನಿ ನೀಡಲಿದ್ದಾರೆಂಬುದೇ ಇನ್ನೊಂದು ವಿಶೇಷವಾಗಿದೆ.


ಇದನ್ನೂ ಓದಿ: ಧೋನಿ ಬ್ಯಾಟಿಂಗ್‌ ನೋಡಿ ಮೈದಾನಲ್ಲೇ ಜಿಗಿದಾಡಿದ ಬಿಗ್‌ಬಾಸ್‌ ಬ್ಯೂಟಿ..! ಈಕೆಗೆ MSD ಅಂದ್ರೆ ಪ್ರಾಣ


ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಈಕೆ ಅಲ್ಲು ಅರ್ಜುನ್ ಜೊತೆಗೆ  ನಟಿಸಿರುವ 'ಪುಷ್ಪ: ಪಾರ್ಟ್ 2', ಮಹಿಳಾ ಪ್ರಧಾನ ಚಿತ್ರ'ರೈನ್‌ಬೋ', ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ಅಭಿನಯದ 'ಛಾವಾ', ಕಾಲಿವುಡ್‌ ಸ್ಟಾರ್‌ ಧನುಷ್ ಜೊತೆಗೆ 'ಕುಬೇರ' ಮುಂತಾದ ಚಿತ್ರಗಳಲ್ಲಿಯೂ ಈ ನಟಿ ಬಣ್ಣ ಹಚ್ಚಿದ್ದಾರೆ. ಮತ್ತೊಂದು ವಿಶೇಷವೇನೆಂದರೆ ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿಈ ಎಲ್ಲಾ ಸಿನಿಮಾ ತಂಡಗಳು ರಶ್ಮಿಕಾ ಹೊಸ ಪೋಸ್ಟರ್‌ಗಳನ್ನು ರಿವೀಲ್‌ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.


ಕೆಲವು ಮೂಲಗಳ ಮಾಹಿತಿಯ ಪ್ರಕಾರ, ನಟಿ ರಶ್ಮಿಕಾ ಮಂದಣ್ಣ ಏಪ್ರಿಲ್‌ 5 ತಮ್ಮ ಜನ್ಮದಿನದಂದು ಭಾರತದಲ್ಲಿ ಇರದೇ ವಿದೇಶಕ್ಕೆ ಪ್ರವಾಸ ಮಾಡುವ  ಸಾಧ್ಯತೆಗಳು ಇದೆ. ಈ ನಟಿ ಹೊರ ದೇಶದಿಂದಲೇ ತಮ್ಮ ಮುಂಬರುವ ಚಿತ್ರಗಳ ಅಪ್‌ಡೇಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಬಾರಿ ರಶ್ಮಿಕಾ ಭಾರತದಲ್ಲಿ ತಮ್ಮ ಫ್ಯಾನ್ಸ್‌ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಫಾರೆನ್‌ ಹಾರುತ್ತಿರುವುದು ಅಭಿಮಾನಿಗಳಿಗೆ ಬೇಸರ ತರುವಂತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.