Rashmika Mandanna : ರಶ್ಮಿಕಾ ಮಂದಣ್ಣ ಸೋಮವಾರ ಟ್ವಿಟ್ಟರ್‌ನಲ್ಲಿ #RushHour ಶೀರ್ಷಿಕೆಯ ಆಸ್ಕ್ ಮೈ ಎನಿಥಿಂಗ್ ಸೆಷನ್ ಅನ್ನು ನಡೆಸಿದರು. ಅಭಿಮಾನಿಗಳ ಪ್ರಶ್ನೆಗಳಿಗೆ ಈ ವೇಳೆ ಕಿರಿಕ್‌ ಬ್ಯೂಟಿ ಉತ್ತರಿಸಿದ್ದಾರೆ. ವಿಜಯ್ ಅಭಿಮಾನಿಗಳು ವಾರಿಸು ಚಿತ್ರದಲ್ಲಿ ನಟರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಕೇಳಿದರು. ಅಭಿಮಾನಿಯೊಬ್ಬರು, "ಪ್ಲೀಸ್ ವಾರಿಸು ಸೆಟ್‌ನಲ್ಲಿ ನಡೆದ ಯಾವುದೇ ತಮಾಷೆಯ ಕ್ಷಣಗಳನ್ನು ಹಂಚಿಕೊಳ್ಳಿ" ಎಂದು ಕೇಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ʻಪೊನ್ನಿಯಿನ್ ಸೆಲ್ವನ್ 2ʼ ಚಿತ್ರದಿಂದ ತೇಲಿ ಬಂತು ‘ಕಿರುನಗೆ’ ಹಾಡು, ಈ ದಿನದಂದು ಸಿನಿಮಾ ರಿಲೀಸ್


ವಾರಿಸು ಚಿತ್ರದ ಸೆಟ್‌ನಲ್ಲಿ ವಿಜಯ್ ಮತ್ತು ನಿರ್ದೇಶಕ ವಂಶಿ ಇಬ್ಬರೂ ನನ್ನನ್ನು ತಮಾಷೆ ಮಾಡಿದ್ದಾರೆ ಎಂದು ರಶ್ಮಿಕಾ ಬಹಿರಂಗಪಡಿಸಿದ್ದಾರೆ. ನಾನು ಸೆಟ್‌ನಲ್ಲಿರುವ ಸೋಫಾಗಳ ಮೇಲೆ ಮೂರ್ಛೆ ಹೋದಾಗ, ವಂಶಿ ಸರ್ ಫೋಟೋಗಳನ್ನು ತೆಗೆದಿದ್ದರು. ಅಲ್ಲದೇ ಹೋಗಿ ಅದನ್ನು ವಿಜಯ್ ಸರ್‌ಗೆ ತೋರಿಸುತ್ತಿದ್ದರು. ಅವರು ನನ್ನನ್ನು ತಮಾಷೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ. 


 


Taapsee Pannu : ಮೋಹಕ ನಟಿ ತಾಪ್ಸೀ ಪನ್ನು ಬ್ಯೂಟಿ ಸೀಕ್ರೇಟ್‌ ಏನು ಗೊತ್ತಾ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.