`ದೇವರು ಟೈಮ್ ತಗೊಂಡು ಇವರನ್ನ ಮಾಡಿದ್ದಾನೆ` ಈ ನಟನನ್ನು ಕೊಂಡಾಡಿದ ರಶ್ಮಿಕಾ ಮಂದಣ್ಣ!
Rashmika Mandanna : ಇದೀಗ ರಶ್ಮಿಕಾ ಅನಿಮಲ್ ಚಿತ್ರೀಕರಣವನ್ನು ಮುಗಿಸಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ರಶ್ಮಿಕಾ ಮಂದಣ್ಣ ತಾವು ಮೊದಲು ರಣಬೀರ್‌ನನ್ನು ಭೇಟಿಯಾದಾಗ ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ.
Rashmika Mandanna : ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಅನಿಮಲ್ ಚಿತ್ರೀಕರಣವನ್ನು ಮುಗಿಸಿದ್ದಾರೆ. ಸದಾ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮನಿಗಳ ಜೊತೆ ಟಚ್‌ನಲ್ಲಿರುವ ರಶ್ಮಿಕಾ ಇದೀಗ ಸುದೀರ್ಧವಾಗಿ ಒಬ್ಬರ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ ಇದು ಜನರು ಗಮನ ಸೆಳೆಯುತ್ತಿದೆ.
ರಶ್ಮಿಕಾ ಮಂದಣ್ಣ ಈ ಪೋಸ್ಟ್‌ನಲ್ಲಿ ನಟ ರಣಬೀರ್ ಕಪೂರ್ ಅವರನ್ನು ಹೊಗಳಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ರಶ್ಮಿಕಾ ಮಂದಣ್ಣ ತಾವು ಮೊದಲು ರಣಬೀರ್‌ನನ್ನು ಭೇಟಿಯಾದಾಗ ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರೀಕರಣದ ಸಮಯದಲ್ಲಿ ರಣಬೀರ್ ಗುಣ ತುಂಬಾ ಇಷ್ಟವಾಯಿತು ಎಂದಿದ್ದಾರೆ. ಅವರೊಬ್ಬ ಅದ್ಭುತ ನಟ ಮತ್ತು ಅದ್ಭುತ ಮನುಷ್ಯ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: Adipurush: ರಾಮನ ಪಾತ್ರಕ್ಕೆ ಪ್ರಭಾಸ್ ಅಲ್ಲ.. ಮೊದಲು ಆಯ್ಕೆಯಾಗಿದ್ದು ಈ ಬಾಲಿವುಡ್ ನಟ!?
"ನಾನು ಆರಂಭದಲ್ಲಿ ನರ್ವಸ್ ಆಗಿದ್ದೆ. ರಣಬೀರ್ ಕಪೂರ್ ನೋಡಿ ನಾನು ತುಂಬಾ ನರ್ವಸ್ ಆದೆಆದರೆ ಓಹ್ ಮೈ ಗಾಡ್!! ದೇವರು ನಿಜವಾಗಿಯೂ ರಣಬೀರ್‌ನನ್ನು ಪರಿಪೂರ್ಣರನ್ನಾಗಿ ಮಾಡಲು ತನ್ನ ಸಮಯವನ್ನು ತೆಗೆದುಕೊಂಡಿದ್ದಾನೆ. ಅವರೊಂದು ಸುಂದರ ವ್ಯಕ್ತಿ" ಎಂದು ಬರೆದಿದ್ದಾರೆ.
[[{"fid":"314300","view_mode":"default","fields":{"format":"default","field_file_image_alt_text[und][0][value]":"Rashmika Mandanna insta story ","field_file_image_title_text[und][0][value]":"ರಶ್ಮಿಕಾ ಇನ್‌ಸ್ಟಾಗ್ರಾಮ್ ಸ್ಟೋರಿ"},"type":"media","field_deltas":{"1":{"format":"default","field_file_image_alt_text[und][0][value]":"Rashmika Mandanna insta story ","field_file_image_title_text[und][0][value]":"ರಶ್ಮಿಕಾ ಇನ್‌ಸ್ಟಾಗ್ರಾಮ್ ಸ್ಟೋರಿ"}},"link_text":false,"attributes":{"alt":"Rashmika Mandanna insta story ","title":"ರಶ್ಮಿಕಾ ಇನ್‌ಸ್ಟಾಗ್ರಾಮ್ ಸ್ಟೋರಿ","class":"media-element file-default","data-delta":"1"}}]]
ಇಡೀ ಅನಿಮಲ್ ಸಿನಿಮಾ ತಂಡವನ್ನು ರಶ್ಮಿಕಾ ಕೊಂಡಾಡಿದ್ದಾರೆ. "ಆರಂಭದಲ್ಲಿ ಚಿತ್ರದ ಆಫರ್ ನನಗೆ ಇದ್ದಕ್ಕಿದ್ದಂತೆ ಬಂದಿತು. ನಿಜವಾಗಿಯೂ ಆಶ್ಚರ್ಯಕರವಾಗಿತ್ತು. ಆದರೆ ನಾನು ತುಂಬಾ ಉತ್ಸುಕಳಾಗಿದ್ದೆ, ಸಹಜವಾಗಿ ನಾನು ಇಡೀ ತಂಡದೊಂದಿಗೆ ಕೆಲಸ ಮಾಡಲು ಬಯಸುತ್ತೇನೆ. ನಾನು ಚಿತ್ರಕ್ಕಾಗಿ ಸುಮಾರು 50 ದಿನಗಳವರೆಗೆ ಚಿತ್ರೀಕರಣದಲ್ಲಿ ತೊಡಗಿದ್ದೆ. ಈಗ ಅದು ಮುಗಿದಿದೆ. ನಾನು ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅನಿಮಲ್ ತಂಡದ ಜೊತೆ ಕೆಲಸ ಮಾಡುವುದನ್ನು ನಾನು ಸಂಪೂರ್ಣವಾಗಿ ಇಷ್ಟಪಡುತ್ತೇನೆ. ಇಡೀ ತಂಡವು ನನಗೆ ಇಷ್ಟವಾಯ್ತು. ಸೆಟ್‌ನಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ತುಂಬಾ ವೃತ್ತಿಪರರು, ಸಹೃದಯರು. ನಾನು ಅವರೊಂದಿಗೆ ಇನ್ನೂ 1000 ಬಾರಿ ಕೆಲಸ ಮಾಡಲು ಇಷ್ಟಪಡುತ್ತೇನೆ" ಅವಳು ಹೇಳಿದ್ದಾರೆ.
ಅನಿಮಲ್ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ. ಕಳೆದ ವಾರ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು, ಕೊಲೆಯ ದಂಧೆಯಲ್ಲಿ ಉಗ್ರ ರಣಬೀರ್ ಇರುವ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಸೆಟ್‌ಗಳಿಂದ ಸೋರಿಕೆಯಾದ ಫೋಟೋಗಳು ಅವರು ದರೋಡೆಕೋರ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುಳಿವನ್ನು ನೀಡುತ್ತಿವೆ. ರಶ್ಮಿಕಾ ಅವರ ಆನ್-ಸ್ಕ್ರೀನ್ ಪತ್ನಿಯಾಗಿರಬಹುದು ಎಂದು ಕೆಲವರು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ.. ಖ್ಯಾತ ಧಾರಾವಾಹಿ ನಿರ್ಮಾಪಕನ ವಿರುದ್ಧ FIR
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.