Adipurush: ರಾಮನ ಪಾತ್ರಕ್ಕೆ ಪ್ರಭಾಸ್‌ ಅಲ್ಲ.. ಮೊದಲು ಆಯ್ಕೆಯಾಗಿದ್ದು ಈ ಬಾಲಿವುಡ್‌ ನಟ!?

Adipurush: ಆದಿಪುರುಷ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯವಾಗಿ ಸೋಲುತ್ತಿರುವ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಂದಿದೆ. ಆದಿಪುರುಷ ಚಿತ್ರದಲ್ಲಿ ರಾಘವ್ ಪಾತ್ರಕ್ಕಾಗಿ ಮೊದಲು ಪ್ರಭಾಸ್ ಅವರನ್ನಲ್ಲ ಬೇರೊಬ್ಬ ಬಾಲಿವುಡ್‌ ನಟನನ್ನು ಸಂಪರ್ಕಿಸಿದ್ದರು ಎನ್ನಲಾಗ್ತಿದೆ.   

Written by - Chetana Devarmani | Last Updated : Jun 20, 2023, 03:05 PM IST
  • ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸುತ್ತಿರುವ ಆದಿಪುರುಷ
  • ರಾಮನ ಪಾತ್ರಕ್ಕೆ ಪ್ರಭಾಸ್‌ ಮೊದಲ ಆಯ್ಕೆ ಅಲ್ಲವಂತೆ!
  • ಮೊದಲು ಆಯ್ಕೆಯಾಗಿದ್ದು ಈ ಬಾಲಿವುಡ್‌ ನಟ!?
Adipurush: ರಾಮನ ಪಾತ್ರಕ್ಕೆ ಪ್ರಭಾಸ್‌ ಅಲ್ಲ.. ಮೊದಲು ಆಯ್ಕೆಯಾಗಿದ್ದು ಈ ಬಾಲಿವುಡ್‌ ನಟ!? title=

Adipurush: ಆದಿಪುರುಷ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯವಾಗಿ ಸೋತಿದ್ದು, ಇದು ಓಂ ರಾವತ್ ಅವರ ವೈಫಲ್ಯವೇ ಹೊರತು ಪ್ರಭಾಸ್ ಅವರದ್ದಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕೆಟ್ಟ ವಿಎಫ್‌ಎಕ್ಸ್‌ನ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ರಾವಣನ ಪಾತ್ರ, ಅಗೌರವದ ಡೈಲಾಗ್‌ಗಳವರೆಗೆ ಚಿತ್ರವು ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಸೋಮವಾರದಂದು ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿದೆ. 

ರಾಮಾಯಣವನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಓಂ ರಾವತ್ ಅವರನ್ನು ಜನರು ಕಟುವಾಗಿ ಟೀಕಿಸುತ್ತಿದ್ದಾರೆ. ಅವರು ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕ್ರ್ಯಾಶ್ ಆಗುತ್ತದೆಯಂತೆ ಎಂಬ ಸುದ್ದಿ ಜೋರಾಗಿ ಹಬ್ಬುತ್ತಿದೆ. ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್.ಖಾನ್ ಅವರು ಆದಿಪುರುಷ ಚಿತ್ರದಲ್ಲಿ ರಾಘವ್ ಪಾತ್ರಕ್ಕಾಗಿ ಮೊದಲು ಪ್ರಭಾಸ್ ಅವರನ್ನಲ್ಲ ಕಾರ್ತಿಕ್ ಆರ್ಯನ್ ಅವರನ್ನು ಸಂಪರ್ಕಿಸಿದ್ದರು ಎಂದು ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದಾರೆ. 

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ.. ಖ್ಯಾತ ಧಾರಾವಾಹಿ ನಿರ್ಮಾಪಕನ ವಿರುದ್ಧ FIR

ಕಮಾಲ್ ಆರ್.ಖಾನ್ ಅವರು ತನ್ನ ಇತ್ತೀಚಿನ ಟ್ವೀಟ್‌ನಲ್ಲಿ, ಆದಿಪುರುಷ ಮಾಡದಿದ್ದಕ್ಕಾಗಿ ಸತ್ಯ ಪ್ರೇಮ್ ಕಿ ಕಥಾ ನಟನನ್ನು ಅದೃಷ್ಟಶಾಲಿ ಎಂದು ಕರೆದಿದ್ದಾರೆ. ತನ್ಹಾಜಿ ಚಿತ್ರದ ನನ್ನ ವಿಮರ್ಶೆಯಲ್ಲಿ ನಾನು ಓಂ ರಾವುತ್‌ಗೆ ನಿರ್ದೇಶನ ತಿಳಿದಿಲ್ಲ ಎಂದು ಹೇಳಿದ್ದೇನೆ. ನಾನು 100% ಸರಿ ಎಂದು ಆದಿಪುರುಷನೊಂದಿಗೆ ಸಾಬೀತಾಗಿದೆ. ನಾನು ಯಾವುದೇ ಚಲನಚಿತ್ರ ಅಥವಾ ಯಾವುದೇ ನಿರ್ದೇಶಕ ಅಥವಾ ನಟನಿಗೆ ಎಂದಿಗೂ ಸುಳ್ಳು ಹೇಳುವುದಿಲ್ಲ. ಕಾರ್ತಿಕ್‌ ಆರ್ಯನ್ ಅವರು ಅದೃಷ್ಟವಂತರು‌ ಆದಿಪುರುಷ ಮಾಡಲಿಲ್ಲ!" ಎಂದು ಬರೆದಿದ್ದಾರೆ. 

 

 

ಪ್ರಭಾಸ್ ಅಭಿಮಾನಿಗಳು ಓಂ ರಾವತ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಜಮೌಳಿಯವರ ಬಾಹುಬಲಿ ನಂತರ ಯಶಸ್ಸನ್ನು ಪಡೆಯಲು ನಟ ಪ್ರಭಾಸ್‌ ಸಿಕ್ಕಾಪಟ್ಟೆ ಶ್ರಮಿಸುತ್ತಿದ್ದಾರೆ. ಈಗ ಎಲ್ಲಾ ಭರವಸೆಗಳು ಸಲಾರ್ ಮತ್ತು ಪ್ರಾಜೆಕ್ಟ್ ಕೆ ಮೇಲಿವೆ. ನೆಟಿಜನ್‌ಗಳು ಆದಿಪುರುಷ ಮೇಲಿಟ್ಟಿದ್ದ ಎಲ್ಲ ನಿರೀಕ್ಷೆಗಳು ಹುಸಿಯಾದಂತಿವೆ. ಅನೇಕರು ಚಿತ್ರದ ಮೇಲೆ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ. ನೇಪಾಳದಂತಹ ಅನೇಕ ಕಡೆಗಳಲ್ಲಿ ಚಲನಚಿತ್ರವನ್ನು ನಿಷೇಧಿಸಲಾಗಿದೆ. 

ಇದನ್ನೂ ಓದಿ: Adipurush: "600 ಕೋಟಿ ವ್ಯರ್ಥ, ನನಗೆ ಸಹಿಸಲಾಗಲಿಲ್ಲ.." ಆದಿಪುರುಷ ನೋಡಿ ಕೋಪಗೊಂಡ ನಟ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News