`ಕನ್ನಡ ಸಿನಿಮಾ ಮೇಲೆ ಪ್ರೀತಿ ಇದೆ, ಉಳಿದಿದ್ದು ಅವರಿಗೆ ಬಿಟ್ಟದ್ದು`: ಬ್ಯಾನ್ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ
Rashmika Reacts On BAN Rumours : ರಶ್ಮಿಕಾ ತಮ್ಮ ವೃತ್ತಿಜೀವನವನ್ನು ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಮೂಲಕ ಆರಂಭಿಸಿದರು. ಆದರೆ ಇತ್ತೀಚೆಗೆ, ಕಾಂತಾರಾ ಚಿತ್ರದ ಕುರಿತು ಕಾಮೆಂಟ್ ಮಾಡಿದ್ದಕ್ಕಾಗಿ ಕನ್ನಡ ಚಲನಚಿತ್ರ ಪ್ರಿಯರು ಅವರನ್ನು ಟ್ರೋಲ್ ಮಾಡಿದರು.
Rashmika Reacts On BAN Rumours : ರಶ್ಮಿಕಾ ತಮ್ಮ ವೃತ್ತಿಜೀವನವನ್ನು ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಮೂಲಕ ಆರಂಭಿಸಿದರು. ಆದರೆ ಇತ್ತೀಚೆಗೆ, ಕಾಂತಾರಾ ಚಿತ್ರದ ಕುರಿತು ಕಾಮೆಂಟ್ ಮಾಡಿದ್ದಕ್ಕಾಗಿ ಕನ್ನಡ ಚಲನಚಿತ್ರ ಪ್ರಿಯರು ಅವರನ್ನು ಟ್ರೋಲ್ ಮಾಡಿದರು. ಅಲ್ಲದೇ ಬ್ಯಾನ್ ಮಾತುಗಳು ಸಹ ಕೇಳಿಬಂದವು. ಅನೇಕ ಬಾರಿ ಕನ್ನಡತಿಯಾದರೂ ಕನ್ನಡದಲ್ಲಿ ಮಾತನಾಡದೇ ರಶ್ಮಿಕಾ ಟ್ರೋಲ್ ಆಗಿದ್ದು ಇದೆ. ಇದೀಗ ರಶ್ಮಿಕಾ ಕಾಂತರ ಸಿನಿಮಾ ವಿಚಾರ ಮತ್ತು ಬ್ಯಾನ್ ವಿಚಾರವಾಗಿ ಮೌನ ಮುರಿದಿದ್ದಾರೆ.
ಇದನ್ನೂ ಓದಿ : Yash : ಟಾಪ್ 10 ಮೋಸ್ಟ್ ಪಾಪ್ಯುಲರ್ ಇಂಡಿಯನ್ ಸ್ಟಾರ್ 2022 ಪಟ್ಟಿಯಲ್ಲಿ ಯಶ್‌ಗೆ ಎಷ್ಟನೇ ಸ್ಥಾನ?
ಕಾಂತಾರಾ ಚಿತ್ರವನ್ನು ನೋಡಿದ್ದೀರಾ ಎಂದು ರಶ್ಮಿಕಾ ಅವರನ್ನು ಕೆಲದಿನಗಳ ಹಿಂದೆ ಕೇಳಿದಾಗ, ಸಿನಿಮಾ ವೀಕ್ಷಿಸಿಲ್ಲ ಎಂದು ಉತ್ತರಿಸಿದರು. ಕನ್ನಡದವರಾಗಿ ತಮಗೆ ವೃತ್ತಿಜೀವನ ಆರಂಭಿಸಲು ಅವಕಾಶ ಕೊಟ್ಟಿದ್ದ ನಿರ್ದೇಶಕನ ಸಿನಿಮಾ ನೋಡಿಲ್ಲ ಎಂಬ ಕಾರಣಕ್ಕೆ ರಶ್ಮಿಕಾ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಕನ್ನಡ ಚಲನಚಿತ್ರೋದ್ಯಮವು ನಟಿಯ ಮೇಲೆ ಬ್ಯಾನ್ ಹೇರಲು ಯೋಜಿಸುತ್ತಿದೆ ಎಂಬ ಊಹಾಪೋಹಗಳು ಸಹ ಕೇಳಿಬಂದಿದ್ದವು.
ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ರಶ್ಮಿಕಾ ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ. "ಬಿಡುಗಡೆಯಾದ ಎರಡು ದಿನಗಳ ನಂತರ ಕಾಂತಾರ ಚಿತ್ರವನ್ನು ನೋಡಿದ್ದೀರಾ ಎಂದು ನನ್ನನ್ನು ಕೇಳಿದರು ಮತ್ತು ನಾನು ಆಗ ನೋಡಿರಲಿಲ್ಲ. ಅದಕ್ಕೆ ನಾನು ಪ್ರಾಮಾಣಿಕವಾಗಿ ಉತ್ತರಿಸಿದೆ. ಆದರೆ, ನಾನು ಇತ್ತೀಚೆಗೆ ಕಾಂತಾರ ಸಿನಿಮಾ ನೋಡಿದ್ದೇನೆ. ಅಲ್ಲದೇ ಟೀಂಗೆ ಮೆಸೇಜ್ ಮಾಡಿ ಅಭಿನಂದಿಸಿದೆ" ಎಂದು ರಶ್ಮಿಕಾ ಹೇಳಿದರು.
Keerthy Suresh: ಕಾಸ್ಟಿಂಗ್ ಕೌಚ್ ಬಗ್ಗೆ ಆಘಾತಕಾರಿ ಸಂಗತಿ ಬಿಚ್ಚಿಟ್ಟ ನಟಿ ಕೀರ್ತಿ ಸುರೇಶ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.